/newsfirstlive-kannada/media/media_files/2025/08/25/chinnayya-2025-08-25-08-32-57.jpg)
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾದ ಮಾಸ್ಕ್ಮ್ಯಾನ್ ಚಿನ್ನಯ್ಯ ಮನೆ ಲೀಸ್ಗೆ ಹಾಕಿಕೊಳ್ಳಲು ಎರಡು ಲಕ್ಷ ರೂಪಾಯಿ ಪಡೆದಿದ್ದೇ ಸಂಕಷ್ಟ ತಂದುಕೊಡುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಹಣದಾಸೆಗೆ ಬಿದ್ದು ಚಿನ್ನಯ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಹಣದಾಸೆಗೆ ಚಿನ್ನಯ್ಯ ಖೆಡ್ಡಾಕ್ಕೆ ಬಿದ್ದಿದ್ದಾನೆ. ಕಾಣದ ಕೈಗಳು ಪಕ್ಕಾ ಪ್ರಿ ಪ್ಲಾನ್ ಮಾಡಿ ಚಿನ್ನಯ್ಯನನ್ನು ಲಾಕ್ ಮಾಡಿವೆ. ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬದ ಯಜಮಾನನನ್ನು ಕಳೆದ ಎರಡು ತಿಂಗಳ ಹಿಂದೆ ಕೆಲ ವ್ಯಕ್ತಿಗಳು ಸಂಪರ್ಕ ಮಾಡಿದ್ದಾರೆ. ಪ್ರಕರಣದಲ್ಲಿ ಸಿಲುಕಿರುವ ಈತನ ಮೇಲೆ ಈಗಾಗಲೇ 2 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವಿದೆ.
ಇದನ್ನೂ ಓದಿ:ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು
ಚಿನ್ನಯ್ಯ ಧರ್ಮಸ್ಥಳದ ಕೆಲಸ ತೊರೆದು ತಮಿಳುನಾಡಿನ ಸತ್ಯಮಂಗಲ್ನ ಕೆಂಜನೂರು ಗ್ರಾಮದಲ್ಲಿ ವಾಸವಿದ್ದನು ಇಲ್ಲಿ ಮನೆಯೊಂದನ್ನು 2 ಲಕ್ಷ ರೂಪಾಯಿ ನೀಡಿ 10 ವರ್ಷಕ್ಕೆ ಲೀಸ್ಗೆ ಹಾಕಿಕೊಂಡಿದ್ದನು. ಈ ಮನೆಯಲ್ಲಿ 2ನೇ ಪತ್ನಿ ಹಾಗೂ 2 ಮಕ್ಕಳೊಂದಿಗೆ ಚಿನ್ನಯ್ಯ ವಾಸವಿದ್ದನು. ಮನೆಯ ಲೀಸ್ ಮುಗಿಯಲು ಇನ್ನು ಕೇವಲ ಎರಡು ವರ್ಷ ಬಾಕಿ ಇತ್ತು. ಈ ಹಣ ಬಿಟ್ಟರೇ ಮುಂದಿನ ಜೀವನಕ್ಕೆ ಯಾವುದು ಆದಾಯ ಇರಲಿಲ್ಲ.
ಆದರೆ ಈ ನಡುವೆ ಅದೇ ಮನೆಯನ್ನು ಲೀಸ್ಗೆ ಪಡೆಯಬೇಕು ಎಂದರೆ 4 ಲಕ್ಷ ರೂಪಾಯಿ ಕೊಡಬೇಕು ಎಂದು ಮನೆ ಮಾಲೀಕ ಹೇಳಿದ್ದನು. ಹೀಗಾಗಿ ಇನ್ನು ಎರಡು ಲಕ್ಷ ಹಣಕ್ಕೆ ಚಿನ್ನಯ್ಯ ಧರ್ಮಸ್ಥಳದ ಹಾದಿ ತುಳಿದಿದ್ದನು ಎನ್ನಲಾಗಿದೆ. ಈತನ ಹಣದ ಅವಶ್ಯಕತೆ ತಿಳಿದೇ ಕಾಣದ ಕೈಗಳು ಚಿನ್ನಯ್ಯನನ್ನ ಲಾಕ್ ಮಾಡಿದ್ದವು ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ನಡುವೆ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾಳನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ