ನಾನು ಎಸ್ಐಟಿಗೆ ದೂರು ಕೊಡಲು ಬಂದಿದ್ದೇನೆ. ಧರ್ಮಸ್ಥಳ ಗ್ರಾಮದಲ್ಲಿ ಹಲವು ವರ್ಷಗಳಿಂದ ಜೀವ ತೆಗೆಯುವಂತಹ ಘಟನೆಗಳು ನಡೆಯುತ್ತಿವೆ. ಒಳ್ಳೆಯ ಎಸ್ಐಟಿ ತಂಡ ಬಂದಿದ್ದರಿಂದ ನಾವು ದೂರನ್ನು ಕೊಟ್ಟಿದ್ದೇವೆ. ಭಾನುವಾರ ರಜೆ ಇರುವುದರಿಂದ ಸೋಮವಾರ ಬನ್ನಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂದು ಜೀವ ತೆಗೆಯಲಾಗಿದೆ. ಇದಕ್ಕೆ ಸಂಬಂಧಿಸಿದವರು ಘಟನೆಯನ್ನು ಮುಚ್ಚಿ ಹಾಕಿದ್ದಾರೆ ಎಂದು ದೂರು ಕೊಡಲು ಬಂದ ಜಯಂತ್ ಅವರು ಆರೋಪಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ತುಂಬಾ ಜೀವಗಳನ್ನ ತೆಗೆಯಲಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದರೆ ಯಾರೂ ಕೂಡ ಧೈರ್ಯದಿಂದ ಮುಂದೆ ಬಂದು ದೂರು ಕೊಡುತ್ತಿಲ್ಲ. ಇದಕ್ಕೆ ಕಾರಣ ಭಯದ ವಾತಾವರಣ ಇದೆ. ನಾನು ಬಂದಿದ್ದೇನೆ. ಇನ್ನು ಐದಾರು ಜನರು ಬರುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ನಿಮ್ಮ ನೋವನ್ನು ಎಸ್ಐಟಿ ತಂಡದ ಜೊತೆ ಹಂಚಿಕೊಳ್ಳಿ. ಧರ್ಮಸ್ಥಳ ಗ್ರಾಮದಲ್ಲಿ ಆಗಿರುವಂತ ಘಟನೆಯನ್ನು ಕಣ್ಣಾರೆ ಕಂಡು ಅದನ್ನು ಹೇಳಲು ಬಂದಿದ್ದೇನೆ. ಮಣ್ಣಲ್ಲಿ ಹೂತು ಹಾಕಿರುವ ಬಗ್ಗೆ ಯಾವುದೇ ದೂರು ನೀಡಿಲ್ಲ. ಹಾಗೇ ಮಣ್ಣು ಮಾಡಿ, ಮುಚ್ಚಿ ಹಾಕಿದ್ದಾರೆ ಎಂದು ಜಯಂತ್ ಅವರು ಹೇಳಿದ್ದಾರೆ.