/newsfirstlive-kannada/media/media_files/2025/08/27/mahesh_shetty_timarodi-2025-08-27-14-33-11.jpg)
ಮಂಗಳೂರು: ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಅವರ ಮನೆಯಲ್ಲಿ ಮಹಜರು ಮಾಡಿದ್ದರು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮೂರು ತಲವಾರುಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ಮೂರು ತಲವಾರು ಪತ್ತೆ ಆಗಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮಹೇಶ್ ತಿಮರೋಡಿ ಪತ್ನಿ, ಮಗ ಹಾಗೂ ಅವರ ಮಗಳ ಮೊಬೈಲ್ಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಧರ್ಮಸ್ಥಳದ ವಿರುದ್ಧ ಸಂಚು ನಡೆಸಲು ಸಂಗ್ರಹಿಸಿದ್ದ ದಾಖಲೆ ಪತ್ರಗಳನ್ನು ಕೂಡ ವಶಕ್ಕೆ ಎಸ್ಐಟಿ ತೆಗೆದುಕೊಂಡಿದೆ.
ಇದನ್ನೂ ಓದಿ: DCM ಡಿ.ಕೆ ಶಿವಕುಮಾರ್ಗೆ ತಿರುಗೇಟು ಕೊಟ್ಟ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ತಡರಾತ್ರಿ 2:30ರವರೆಗೆ ನಡೆದ ಮಹಜರು ನಡೆಸಿದ್ದರು. ಮನೆಯಲ್ಲಿದ್ದಂತಹ ಮೊಬೈಲ್, ಬಟ್ಟೆ, ಸಿಸಿಟಿವಿ ಡಿವಿಆರ್, ಹಾರ್ಡ್ ಡಿಸ್ಕ್, ಲಗೇಜ್ ಬ್ಯಾಗ್, ಚೆನ್ನ ಬಳಸುವ ದಿನನಿತ್ಯದ ವಸ್ತುಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳನ್ನ ಎಫ್ಎಸ್ಎಲ್ಗೆ ಇಂದು ರವಾನೆ ಮಾಡಲಾಗುತ್ತದೆ.
ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಚಿನ್ನಯ್ಯ ಎಲ್ಲಿದ್ದ, ಈ ಮೊದಲು ಏನು ಮಾಡುತ್ತಿದ್ದ, ಯಾರಿಂದ ಹಣ ಪಡೆದ ಎನ್ನುವುದನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಮನೆಯಲ್ಲಿ ಮಹಜರು ಮಾಡಿದ್ದರು. ಇದೇ ವೇಳೆ ತಲವಾರುಗಳು ಸಿಕ್ಕಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ