Advertisment

ಧರ್ಮಸ್ಥಳ; ಮಾಸ್ಕ್​ಮ್ಯಾನ್ ಚಿನ್ನಯ್ಯನ 2ನೇ ಹೆಂಡತಿ ಮಲ್ಲಿಕಾ ಶಾಕಿಂಗ್ ಹೇಳಿಕೆ

ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿ ಮಾಸ್ಕ್​ಮ್ಯಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ಚಿನ್ನಯ್ಯನ ಕುರಿತು 2ನೇ ಪತ್ನಿ ಮಲ್ಲಿಕಾ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ಮಲ್ಲಿಕಾ, ಅವರು ತುಂಬಾ ಒಳ್ಳೆಯವರು.

author-image
Bhimappa
Advertisment

ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿ ಮಾಸ್ಕ್​ಮ್ಯಾನ್ ಚಿನ್ನಯ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ಚಿನ್ನಯ್ಯನ ಕುರಿತು 2ನೇ ಪತ್ನಿ ಮಲ್ಲಿಕಾ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ಮಲ್ಲಿಕಾ, ಅವರು ತುಂಬಾ ಒಳ್ಳೆಯವರು. ಅವರಿಲ್ಲ ಅಂದರೆ ಇವತ್ತು ನನಗೆ ಜೀವನವೇ ಇಲ್ಲ. ಅಲ್ಲಿ ಏನಾಗಿದೆಂದು ಮಂಜುನಾಥಗೆ ಗೊತ್ತು. ಅವರು ವಾಪಸ್ ಬರಬೇಕು. ಅವರಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. 

Advertisment

ನನ್ನ ಮಗಳು ಊಟಿಯಲ್ಲಿ ಓದಿದರೆ, ಮಗ ತಮಿಳುನಾಡಿನಲ್ಲಿ ಓದಿದ್ದಾನೆ. ಅವರು ಯಾಕೆ ಈ ರೀತಿ ಸುಳ್ಳುಗಳನ್ನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಏನು ನಡೆದಿದೆ ಎಂದು ಅವರೇ ಹೇಳಿದರೆ ಎಲ್ಲ ಜನರಿಗೆ ಗೊತ್ತಾಗುತ್ತದೆ. ಧರ್ಮಸ್ಥಳದಲ್ಲಿ ಗುಂಡಿ ಅಗೆಯುವಾಗಲೂ ಫೋನ್ ಮಾಡಿ ಮಾತನಾಡಿದ್ದಾರೆ. ಒಂದು ವಾರ ಆಯಿತು ಈಗ ಫೋನ್ ಮಾಡಿಲ್ಲ ಎಂದು ಮಲ್ಲಿಕಾ ಅವರು ಕಣ್ಣೀರು ಹಾಕಿದ್ದಾರೆ.      

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case
Advertisment
Advertisment
Advertisment