/newsfirstlive-kannada/media/media_files/2025/08/23/mask_man-2025-08-23-11-23-08.jpg)
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಮಾಸ್ಕ್​ಮ್ಯಾನ್ ಸಿ.ಎನ್ ಚಿನ್ನಯ್ಯನ ನಿಜವಾದ ಮುಖ ರಿವೀಲ್ ಮಾಡಲಾಗಿದೆ. ಈತನು ತಮಿಳುನಾಡಿನ ಈರೋಡ್ ನಗರದ ಚಿಕ್ಕ ಅರಸಿ ಪಾಳ್ಯದಲ್ಲಿ ವಾಸಿಯಾಗಿದ್ದಾನೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ಮಾಸ್ಕ್​ಮ್ಯಾನ್​ನ ನಿಜವಾದ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಆಗಿದೆ. ಈತ ತಮಿಳುನಾಡಿನ ಈರೋಡ್ ಚಿಕ್ಕ ಅರಸಿ ಪಾಳ್ಯದಲ್ಲಿ ವಾಸವಿದ್ದನು. ಈರೋಡ್ ನಗರದ ಬಳಿ ಇರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಎರಡು ವರ್ಷಗಳ ಹಿಂದೆ ಉಜಿರೆಗೆ ಚಿನ್ನಯ್ಯ ಮರಳಿ ಬಂದಿದ್ದನು. ಬಳಿಕ ಪಂಚಾಯಿತಿಯಲ್ಲಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದನು.
/filters:format(webp)/newsfirstlive-kannada/media/media_files/2025/08/15/dharmasthala-case2-2025-08-15-18-22-19.jpg)
ಇದೇ ಸಮಯದಲ್ಲಿ ಚಿನ್ನಯ್ಯನನ್ನ ತಂಡದ ಸದಸ್ಯರು ಭೇಟಿಯಾಗಿದ್ದರು. ಇಡೀ ಷಡ್ಯಂತ್ರದ ಭಾಗವಾಗಿ ಚೆನ್ನನನ್ನ ಬಳಸಿಕೊಂಡಿದ್ದರು. ಮೊದಲು ಈ ಷಡ್ಯಂತರದ ಭಾಗವಾಗಲು ಚೆನ್ನ ಒಪ್ಪಿರಲಿಲ್ಲ. ಹೀಗಾಗಿ ಹಣದ ಆಮಿಷ ನೀಡಿ ಒಪ್ಪಿಸಿದ್ದರು. ಹಂತ ಹಂತವಾಗಿ ದೂರುದಾರನ ಖಾತೆಗೆ ಹಣ ಹಾಕಿದ್ದ ಆ ತಂಡ. ಕಳೆದ ಆರು ತಿಂಗಳಿಂದ ದೂರುದಾರನನ್ನ ಟ್ರೈನ್ ಮಾಡಿದ್ದರು ಎಂದು ಎಲ್ಲವನ್ನ ಚೆನ್ನ ಬಾಯಿ ಬಿಟ್ಟಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us