ಧರ್ಮಸ್ಥಳದಲ್ಲಿ ಮಹಿಳೆಯರು, ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ ನಂಬರ್ 13ರಲ್ಲಿ ಜಿಪಿಆರ್ (Ground Penetrating Radar) ಬಳಸಲು ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಸ್ಪಾಟ್ಗೆ ಭೇಟಿ ನೀಡಲಿದ್ದಾರೆ. ಮಣ್ಣನ್ನು ಅಗೆದು ಪರಿಶೀಲನೆ ಮಾಡುವುದಕ್ಕಿಂತ ಮೊದಲು ಜಿಪಿಆರ್ ತಂತ್ರಜ್ಞಾನ ಬಳಸಿ ಪರಿಶೋಧನೆ ಮಾಡಲು ಮುಂದಾಗಿದ್ದಾರೆ.
ಜಿಪಿಆರ್ ಎಷ್ಟು ಪರಿಣಾಮಕಾರಿ, ಜಿಪಿಆರ್ ಬಳಸೋದು ಹೇಗೆ, ಅದರ ಫಲಿತಾಂಶ ಯಾವ ರೀತಿ ಬರುತ್ತದೆ ಎಂಬುದರ ಬಗ್ಗೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಏಕಾಏಕಿ ಮಣ್ಣು ಅಗೆಯುವುದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ತಂತ್ರಜ್ಞಾನದ ಮೊರೆ ಹೋಗಲಾಗುತ್ತದೆ ಎನ್ನಲಾಗಿದೆ. ಪಾಯಿಂಟ್ 13ರ ಸಮೀಕ್ಷೆ ಮಾಡಿ ಮುಂದಿನ ಕೆಲಸ ಮಾಡಲಾಗುತ್ತದೆ.