/newsfirstlive-kannada/media/media_files/2026/02/17/dharwad-aishawarya-cheating-case-2026-02-17-17-54-50.jpg)
ಆಕೆ ಯಾವಾಗಲೂ ಮಿಕಗಳ ಬಲೆಗಾಗಿ ಸಿದ್ಧಳಾಗಿಯೇ ಕೂತಿರೋ ಮಹಿಳೆ, ಮದುವೆಯಾಗಿ ಒಂದು ಮಗುವಿದ್ದರೂ ಮತ್ತೆ ಮತ್ತೆ ಬೇರೆ ಮಿಕಗಳಿಗೆ ಬಲೆ ಹಾಕುತ್ತಲೇ ಇರೋ ಲೇಡಿ. ಕೊನೆಗೆ ಪ್ರೀತಿಯ ನಾಟಕವಾಡಿ ನಿನ್ನನ್ನು ಮದುವೆಯಾಗುವೆ ಅಂತಾ ಯುವಕರನ್ನು ನಂಬಿಸಿ ಅವರಿಂದ ಲಕ್ಷ ಲಕ್ಷ ರೂಪಾಯಿ ಪೀಕುವ ಲೇಡಿ. ಇದೀಗ ಪೋಲೀಸರ ಬಲೆಗೆ ಬಿದ್ದಿದ್ದಾಳೆ. ಆಕೆಯನ್ನು ನಂಬಿ ಲಕ್ಷ ಲಕ್ಷ ಹಣ ನೀಡಿದ್ದ ಯುವಕ ಇದೀಗ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದೆಲ್ಲ ನಡೆದಿದ್ದು ಎಲ್ಲಿ ಅಂತೀರಾ?
/filters:format(webp)/newsfirstlive-kannada/media/media_files/2026/02/17/dharwad-aishawarya-cheating-case-1-2026-02-17-17-55-22.jpg)
ಈ ಪೋಟೋದಲ್ಲಿರುವ ಯುವತಿಯ ಹೆಸರು ಐಶ್ವರ್ಯ. ಈಕೆಗೆ ಇದೊಂದೇ ಹೆಸರಿಲ್ಲ. ಬದಲಿಗೆ ಈಕೆ ಆರೋಹಿ, ರೇಣುಕಾ ಅನ್ನೋ ಹೆಸರುಗಳಿಂದಲೂ ಗುರುತಿಸಿಕೊಂಡವಳು. ತನಗೆ ಬೇಕಾದ ಬೇರೆ ಬೇರೆ ಹೆಸರುಗಳನ್ನು ಹೇಳಿಕೊಳ್ಳೋ ಈಕೆಯ ಎಲ್ಲ ಲಫ್ಡಾಗಳು ಇದೀಗ ಬಯಲಿಗೆ ಬಂದಿದೆ. ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿರೋ ಈಕೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಗುರು ವಕ್ಕುಂದ ಅನ್ನೋ ಯುವಕನೊಂದಿಗೆ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆನನನ್ನು ಪ್ರೀತಿಸುವುದಾಗಿ ಹೇಳಿದಾಗ ಆತನ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿತು. ತಾನು ಸುಮಾರು 7 ಲಕ್ಷ ರೂಪಾಯಿ ಸಾಲ ಮಾಡಿರೋದಾಗಿಯೂ ಹೇಳಿದ ಗುರು, ನಿನ್ನನ್ನು ಮದುವೆಯಾಗೋದಾಗಿಯೂ ಐಶ್ವರ್ಯ ಹೇಳಿದ್ದಳು. ಐಶ್ಚರ್ಯಳಿಗೆ ಗುರು ವಕ್ಕುಂದ ಲಕ್ಷ ಲಕ್ಷ ರೂಪಾಯಿ ಹಣ ನೀಡಿದ್ದಾನಂತೆ. ಹೀಗೆಯೇ ಮೂರು ವರ್ಷಗಳ ಬಳಿಕ ಗುರು ವಕ್ಕುಂದ ಮನೆಯವರಿಗೆ ಈ ವಿಚಾರ ಗೊತ್ತಾಗಿ, ಅವರು ಮೊದಲು ಇದನ್ನು ವಿರೋಧಿಸಿದರು. ಆದರೆ ಗುರು ಯಾವುದೇ ಕಾರಣಕ್ಕೂ ಆಕೆಯನ್ನು ಬಿಡೋದಿಲ್ಲ ಅಂದಿದ್ದಕ್ಕೆ ಮನೆಯವರು ಒಪ್ಪಿಗೆ ನೀಡಿದರು. ಆಗಲೇ ನೋಡಿ ಈಕೆಯ ನೌಟಂಕಿ ಆಟ ಶುರುವಾಗಿದ್ದು, ಈ ಮಧ್ಯೆ ಐಶ್ವರ್ಯ ಮತ್ತೊಬ್ಬ ಸಂಜು ದೊಡ್ಡಮನಿ ಎಂಬ ಯುವಕನೊಂದಿಗೂ ಸಂಬಂಧ ಇಟ್ಟುಕೊಂಡಿದ್ದಳು. ಸಂಜು ದೊಡ್ಡಮನಿ ಅನ್ನೋವನ ಜೊತೆಗೂ ಲವ್ವಿಡವ್ವಿ ಶುರು ಮಾಡಿದಾಗ ಗುರು ವಕ್ಕುಂದನಿಗೆ ಸಿಟ್ಟು ಬಂದಿದೆ. ಒಂದು ಕಡೆ ಹಣವೂ ಹೋಯಿತು, ಮತ್ತೊಂದು ಕಡೆ ಮದುವೆಯೂ ಆಗಿಲ್ಲ ಅನ್ನೋದರಿಂದ ಮನನೊಂದು ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ತಾನು ವಿಷ ಸೇವಿಸಿರೋದಾಗಿ ಗುರು, ಐಶ್ವರ್ಯಗಳಿಗೆ ಫೋನ್ ಮಾಡಿ ಹೇಳಿದ್ದ. ಆಗ ಆಕೆ ನೇರವಾಗಿ ಗುರುನ ತಾಯಿ ರತ್ನವ್ವಳಿಗೆ ಫೋನ್ ಮಾಡಿ, ವಿಷಯ ತಿಳಿಸಿದ್ದಾಳೆ. ಆಗ ತಮ್ಮ ಮಗನನ್ನು ನೋಡಲು ರತ್ನಮ್ಮ ಜಿಲ್ಲಾಸ್ಪತ್ರೆಗೆ ಬಂದ ಬಳಿಕ ಅಲ್ಲಿಗೆ ಐಶ್ವರ್ಯ ಕೂಡ ತನ್ನ ಇನ್ನೊಬ್ಬ ಲವ್ವರ್ ಸಂಜು ದೊಡ್ಡಮನಿ ಜೊತೆಗೆ ಓಡೋಡಿ ಬಂದಿದ್ದಾಳೆ. ಆಕೆಯನ್ನು ನೋಡುತ್ತಲೇ ಗುರುನ ಕುಟುಂಬಸ್ಥರು ಆಕೆಗೆ ಧರ್ಮದೇಟು ನೀಡಿದ್ದಾರೆ. ಆಕೆಯನ್ನೇಕೆ ನೀವು ಟಾರ್ಗೆಟ್ ಮಾಡಿದ್ದೀರಿ ಅಂತಾ ಸಂಜು ಹೇಳುತ್ತಲೇ, ಸಿಟ್ಟಿಗೆದ್ದ ಗುರುನ ಕುಟುಂಬಸ್ಥರು ಮತ್ತೆ ಐಶ್ವರ್ಯಗಳನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಐಶ್ವರ್ಯಳದ್ದು, ಇದೊಂದೇ ಇಂಥ ಪ್ರಕರಣವಲ್ಲ ಅನ್ನೋದು ಗುರುನ ಕುಟುಂಬಸ್ಥರ ಆರೋಪ. ಇಂಥ ಅನೇಕ ಕೃತ್ಯಗಳನ್ನು ಆಕೆ ಹಲವಾರು ವರ್ಷಗಳಿಂದ ಮಾಡುತ್ತಲೇ ಬಂದಿರೋದಾಗಿ ಆರೋಪಿಸುತ್ತಿದ್ದಾರೆ. ಇದೀಗ ಧಾರವಾಡ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದಾದ ಬಳಿಕ ತನ್ನ ಮೇಲೆ ಗುರುನ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಅಂತಾ ಆರೋಪಿಸಿ ಐಶ್ವರ್ಯಾ ಉಪನಗರ ಠಾಣೆ ಪೊಲೀಸರಿಗೆ ದೂರು ನೀಡಲು ಹೋಗಿದ್ದು ಮತ್ತೊಂದು ಕಥೆ. ಇದೀಗ ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಐಶ್ವರ್ಯಳ ಇತಿಹಾಸವನ್ನು ಕೆದಕಿರೋ ಪೊಲೀಸರು, ಆಕೆಯ ಇಂಥ ಅನೇಕ ಕಥೆಗಳನ್ನು ಪತ್ತೆ ಹಚ್ಚಿದ್ದಾರೆ. ಒಟ್ಟಿನಲ್ಲಿ ಐಶ್ವರ್ಯಳೂ ಇಲ್ಲ, ಇತ್ತ ಮದುವೆಯೂ ಇಲ್ಲ, ಮತ್ತೊಂದು ಕಡೆ ಹಣವೂ ಇಲ್ಲ ಅನ್ನುವಂತಾಗಿ ಗುರು ವಕ್ಕುಂದ ಈಗ ಕಂಗಾಲಾಗಿದ್ದಾನೆ.
ಕ್ಯಾಮರಾ ಜರ್ನಲಿಸ್ಟ್ ಗುರುನಾಥ ಕಟ್ಟಿಮನಿ ಜೊತೆ ವಿನೋದ ಇಚ್ಚಂಗಿ, ನ್ಯೂಸ್ ಫಸ್ಟ್, ಹುಬ್ಬಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us