ಧಾರವಾಡ ಯುವಕ ಕೊರಿಯನ್ ಗೇಮ್ಸ್ ನಿಂದ ಆತ್ಮಹತ್ಯೆ!? ಪೊಲೀಸರಿಂದ ಮುಂದುವರಿದ ತನಿಖೆ

ಧಾರವಾಡದ ಮಂಗಳಗಟ್ಟಿ ನಿವಾಸಿ ವಿಕಾಸ್ ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಕಾಸ್ ನಾಯಕ್ ಹೆಚ್ಚಾಗಿ ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಿದ್ದ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಸಾವಿಗೆ ಕೊರಿಯನ್ ಗೇಮ್ಸ್ ಕಾರಣವಾಯಿತಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

author-image
Chandramohan
vikas nayak suicide at dharwad
Advertisment

ಧಾರವಾಡದಲ್ಲಿ 20 ವರ್ಷದ ಯುವಕ ವಿಕಾಸ್ ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈತನ ಸಾವಿನ ನಂತರ ಆತ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊರಿಯನ್ ಗೇಮ್ಸ್ ಆಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಮೊಬೈಲ್  ಗೇಮ್ಸ್ ಗೆ ವಿಕಾಸ್ ನಾಯಕ್ ಅಡಿಕ್ಟ್ ಆಗಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿ ವಿಕಾಸ್ ನಾಯಕ್ ಸಾವಿಗೆ ಕೊರಿಯನ್ ಗೇಮ್ಸ್ ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲೂ ಮೂವರು ಸೋದರಿಯರು ಕೊರಿಯನ್ ಗೇಮ್ಸ್ ಆಡುತ್ತಿದ್ದು, ಅಪಾರ್ಟ್ ಮೆಂಟ್ ಪ್ಲ್ಯಾಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ವಿಕಾಸ್ ನಾಯಕ್ ಸಾವಿಗೆ ಕೊರಿಯನ್ ಗೇಮ್ಸ್ ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆಯೂ ತನಿಖೆ ನಡೆಸುವುದಾಗಿ ಧಾರವಾಡ  ಪೊಲೀಸರು ಹೇಳಿದ್ದಾರೆ. 
ವಿಕಾಸ್ ನಾಯಕ್ ಫೆಬ್ರವರಿ 6 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರದ ಮಂಗಳಗಟ್ಟಿ ಪ್ಲ್ಯಾಟ್ ನಲ್ಲಿ ವಿಕಾಸ್ ನಾಯಕ್ ವಾಸಿಸುತ್ತಿದ್ದ. ಪಿಯುಸಿ ಸೈನ್ಸ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಮನೆಯಲ್ಲೇ ಇದ್ದ. ಆದರೇ, ಮೊಬೈಲ್ ಗೇಮ್ಸ್ ಗೆ ಅಡಿಕ್ಟ್ ಆಗಿದ್ದ. 
ವಿಕಾಸ್ ನಾಯಕ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ. ಫೆಬ್ರವರಿ 6 ರಂದು ಧಾರವಾಡದಲ್ಲಿ ವಿಕಾಸ್ ನಾಯಕ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಹಿನ್ನಲೆಯ ದೂರು ಸಹ ದಾಖಲಾಗಿತ್ತು. ಆತ ಒಂದು ಮೇಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ. ಒಳ್ಳೆಯ ಮಗನಾಗೋಕೆ ಸಾಧ್ಯವಾಗಿಲ್ಲ. ಪರೀಕ್ಷೆಯಲ್ಲಿ ಉತೀರ್ಣನಾಗಲು ಆಗಿಲ್ಲ ಎಂದೆಲ್ಲಾ ಬರೆದುಕೊಂಡಿದ್ದ. ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ. ಸರಿಯಾಗಿ ಅಂಕ ಬಂದಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಸಹ ಹೇಳಿದ್ದಾರೆ. ಯುವಕನ ಮನೆ ಬಳಿಯ ಜನರು ಆತ ಮೊಬೈಲ್ ನಲ್ಲಿ ಗೇಮ್ಸ್ ಬಹಳ ಆಡುತ್ತಿದ್ದ ಎಂದು ಹೇಳಿದ್ದಾರೆ. ಕೊರಿಯನ್ ಗೇಮ್ಸ್ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಅದರ ಬಗ್ಗೆ ಸಹ ತನಿಖೆಯನ್ನು ಮಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ. 
ವಿಕಾಸ್ ನಾಯಕ್ ಬಳಸುತ್ತಿದ್ದ ಮೊಬೈಲ್  ಅನ್ನು ಎಫ್‌ಎಸ್‌ಎಲ್ ಗೆ ಕಳಿಸಲಾಗುತ್ತಿದೆ. ವರದಿಯ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಎಲ್ಲ ಜೊತೆ ಸಂವಾದ ನಡೆಸಿ ಆತ್ಮಹತ್ಯೆಯ ಮೂಲ ಕಾರಣವನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸ ಕಮೀಷನರ್ ಎನ್‌.ಶಶಿಕುಮಾರ್ ಹೇಳಿದ್ದಾರೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

korean online gaming app korean game addicts suicide
Advertisment