ಹುಬ್ಬಳ್ಳಿ ಈದ್ಗಾ ಮೈದಾನ ಇನ್ಮುಂದೆ ‘ರಾಣಿ ಚೆನ್ನಮ್ಮ ಮೈದಾನ’

ಹುಬ್ಬಳ್ಳಿ ಈದ್ಗಾ ಮೈದಾನದ ಹೆಸರನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣಕ್ಕೆ ಹಲವು ವರ್ಷಗಳ ಬೇಡಿಕೆ ಇತ್ತು.

author-image
Ganesh Kerekuli
hubballi idgah maidan

ರಾಣಿ ಚೆನ್ನಮ್ಮ ಮೈದಾನ, ಹುಬ್ಬಳ್ಳಿ

Advertisment

ಹುಬ್ಬಳ್ಳಿ ಈದ್ಗಾ ಮೈದಾನದ (hubballi idgah maidan) ಹೆಸರನ್ನು ರಾಣಿ ಚೆನ್ನಮ್ಮ ಮೈದಾನ (Rani Chennamma Maidan) ಎಂದು ಮರುನಾಮಕರಣ ಮಾಡಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. 

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣಕ್ಕೆ ಹಲವು ವರ್ಷಗಳ ಬೇಡಿಕೆ ಇತ್ತು. ಸಾರ್ವಜನಿಕರ ಬೇಡಿಕೆ ಮಾನ್ಯ ಮಾಡಿರೋ ಪಾಲಿಕೆ,  ರಾಣಿ ಚೆನ್ನಮ್ಮ ಗ್ರೌಂಡ್ ಎಂದು ಪಾಲಿಕೆಯ ಉಪ ಮೇಯರ್ ಸಂತೋಷ್ ಚವ್ಹಾಣ ಘೋಷಣೆ ಮಾಡಿದ್ದಾರೆ. 

ಇದನ್ನೂ ಓದಿ:7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾ ಭೇಟಿ.. ಹೇಗಿತ್ತು ಸ್ವಾಗತ..? Photos

ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಜೊತೆ ಗಣೇಶೋತ್ಸವಕ್ಕೂ ಈ ಮೈದಾನದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಸಂಬಂಧ ಮಹಾನಗರ ಪಾಲಿಕೆಯಿಂದ ಠರಾವು ಹೊರಡಿಸಲಾಗಿದೆ. ಪಾಲಿಕೆ ನಿರ್ಧಾರಕ್ಕೆ ಜನರು ಸ್ವಾಗತ ಮಾಡಿದ್ದಾರೆ. 

ತೀರ್ಮಾನದಲ್ಲಿ ಏನಿದೆ..?

ಸೂಚನೆ..

ಶ್ರೀ ಸಂತೋಷ ಚವ್ಹಾಣ ಸದಸ್ಯರು ಈ ಕೆಳಗಿನಂತೆ ಸೂಚನೆಯನ್ನು ಮಂಡಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ವಿಭಾಗದ ವಾರ್ಡ ನಂ. 57 ನೇದ್ದರಲ್ಲಿಬರುವ ಚನ್ನಮ್ಮ ವೃತ್ತದ ಪಕ್ಕದಲ್ಲಿರುವ ಮಹಾನಗರ ಪಾಲಿಕೆ ಆಸ್ತಿ ಸಿಟಿಎಸ್ ನಂ. 174 ರಲ್ಲಿರುವ ಮೈದಾನದ ಹೆಸರನ್ನು ಈ ದೇಶದ ಪ್ರಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರವನತೆ ಹಾಗೂ ಭಾರತ ದೇಶದಲ್ಲಿ ವ್ಯಾಪಾರದ ಸೋಗಿನಲ್ಲಿ ಬಂದವರಲ್ಲಿ ಆಡಳಿತ ನಡೆಸುವದಕ್ಕಾಗಿಯೇ ಬಂದ ಬ್ರಿಟಿಷರನ್ನು ಯಾವುದೇ ಕಾರಣಕ್ಕೆ ಬೆಂಬಲಿಸದ ವೀರವನಿತೆ ಬ್ರಿಟಿಷರ ಜಿಲ್ಲಾಧಿಕಾರಿಯಾದ ಟ್ಯಾಕರೆ ಸಾಹೇಬನ ಯಾವುದೇ ಒತ್ತಡಕ್ಕೆ ಮಣಿಯದೇ ವೀರ ಶೌರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಕಿತ್ತೂರ ರಾಣಿ ಚೆನ್ನಮ್ಮಳ ಹೆಸರನ್ನು ನಾಮಕರಣ ಮಾಡಲು ಈ ಮೂಲಕ ಸೂಚಿಸುತ್ತೇನೆ. 

ಈ ಮೇಲ್ಕಾಣಿಸಿದ ಸೂಚನೆಯನ್ನು ಶ್ರೀಮತಿ ವೀನಾಕ್ಷಿ ವಂಟಮುರಿ ಸದಸ್ಯರು ಅನುಮೋದಿಸಿದರು.

ಠರಾವ ನಂ.100

ಈ ಮೇಲ್ಕಾಣಿಸಿದ ಸೂಚನೆಯನ್ವಯ, ಹುಬ್ಬಳ್ಳಿ ವಿಭಾಗದ ವಾರ್ಡ ನಂ. 57 ನೇದ್ದರಲ್ಲಿ ಬರುವ ಚನ್ನಮ್ಮ ವೃತ್ತದ ಪಕ್ಕದಲ್ಲಿರುವ ಮಹಾನಗರ ಪಾಲಿಕೆ ಆಸ್ತಿ ಸಿಟಿಎಸ್ ನಂ. 174 ರಲ್ಲಿರುವ ಮೈದಾನದ ಹೆಸರನ್ನು ಈ ದೇಶದ ಪ್ರಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರವನತೆ ಹಾಗೂ ಭಾರತ ದೇಶದಲ್ಲಿ ವ್ಯಾಪಾರದ ಸೋಗಿನಲ್ಲಿ ಬಂದವರಲ್ಲಿ ಆಡಳಿತ ನಡೆಸುವದಕ್ಕಾಗಿಯೇ ಬಂದ ಬ್ರಿಟಿಷರನ್ನು ಯಾವುದೇ ಕಾರಣಕ್ಕೆ ಬೆಂಬಲಿಸದ ವೀರವನಿತೆ ಬ್ರಿಟಿಷರ ಜಿಲ್ಲಾಧಿಕಾರಿಯಾದ ಟ್ಯಾಕರೆ ಸಾಹೇಬನ ಯಾವುದೇ ಒತ್ತಡಕ್ಕೆ ಮಣಿಯದೇ ವೀರ ಶೌರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಕಿತ್ತೂರ ರಾಣಿ ಚೆನ್ನಮ್ಮಳ ಹೆಸರನ್ನು ನಾಮಕರಣ ಮಾಡಬೇಕೆಂದು ಪೂಜ್ಯ ಮಹಾಪೌರರು ಮಾನ್ಯ ಆಯುಕ್ತರಿಗೆ ಆದೇಶಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hubballi Idgah Maidan renamed
Advertisment