ವಿವಸ್ತ್ರಗೊಳಿಸಿ ಮಹಿಳೆಯನ್ನು ಥಳಿಸಿ ಜೈಲಿಗಟ್ಟಿದ್ದ ಕೇಶ್ವಾಪುರ ಪೊಲೀಸರು: ಬಿಜೆಪಿ ಕಾರ್ಯಕರ್ತೆಯ ಜೊತೆ ಪೊಲೀಸ್ ವರ್ತನೆಗೆ ಟೀಕೆ

ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿ, ಬಂಧಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಬಂಧನದ ವೇಳೆ ಥಳಿಸಲಾಗಿದೆ. ಪೊಲೀಸರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

author-image
Chandramohan
BJP WOMEN ASSAULTED IN HUBBALLI
Advertisment


ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರ ವರ್ತನೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.  ಬಿಜೆಪಿ ಕಾರ್ಯಕರ್ತೆಯನ್ನ ಬಟ್ಟೆಬಿಚ್ಚಿ ಪೊಲೀಸರು ಥಳಿಸಿದ ಆರೋಪ ಕೇಳಿ ಬಂದಿದೆ.  ಹುಬ್ಬಳ್ಳಿಯಕೇಶ್ವಾಪುರ ಪೊಲೀಸರ ಅಮಾನುಷ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.  ಕಾಂಗ್ರೆಸ್ ಕಾರ್ಪೋರೇಟರ್‌ ಕೊಟ್ಟ ದೂರಿನ ಮೇಲೆ ಪೊಲೀಸರು  ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಮೇಲೆ ದರ್ಪ ತೋರಿದ್ದಾರೆ. 
ಕಾಂಗ್ರೆಸ್ ಕಾರ್ಪೋರೇಟರ್  ಸುವರ್ಣ ಕಲ್ಲಕುಂಟ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ   ಬಿಜೆಪಿ ಕಾರ್ಯಕರ್ತೆ ಸುಜಾತ್ ಅಲಿಯಾಸ್ ವಿಜಯಲಕ್ಷ್ಮಿ ಹಂಡಿಯನ್ನು ಮನಬಂದಂತೆ  ಪೊಲೀಸರು ಥಳಿಸಿದ್ದಾರೆ.  ಹಳೆ ವೈಷಮ್ಯದ‌ ಹಿನ್ನಲೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ತಿಕ್ಕಾಟ ನಡೆದಿದೆ.   ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು .  ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಅಧಿಕಾರಿಗಳ ಜೊತೆ  ಸುಜತಾ ಹಂಡಿ ತೆರಳಿದ್ದರು.   ಈ ವೇಳೆ ತಗಾದೆ ತೆಗೆದು ಗಲಾಟೆ ಮಾಡಲಾಗಿದೆ.   ಈ‌ ಹಳೆಯ ಪ್ರಕರಣ ಮುಂದಿಟ್ಟಕೊಂಡು ಕಾಂಗ್ರೆಸ್ ಕಾರ್ಪೋರೇಟರ್‌ ಹಾಗೂ ಬೆಂಬಲಿಗರು  ಗಲಾಟೆ ಮಾಡಿದ್ದಾರೆ.
ಸುಜತಾ ಹಂಡಿ ವಿರುದ್ಧ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು.   ಸುವರ್ಣ ಕಲ್ಲಕುಂಟ್ಲಾ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದಾರೆ.  ಹಳೆ  ವಿಚಾರ ಇಟ್ಟುಕೊಂಡು ಮತ್ತೆ ಕಾಂಗ್ರೆಸ್-ಬಿಜೆಪಿ‌ ಮಧ್ಯೆ ಗಲಾಟೆಯಾಗಿದೆ.  ಗಲಾಟೆ ವೇಳೆ ದೂರು, ಪ್ರತಿದೂರು ದಾಖಲಾಗಿದೆ. 
ಕಾಂಗ್ರೆಸ್ ಕಾರ್ಪೋರೇಟರ್     ನೀಡಿದ‌ ದೂರಿನ ಮೇಲೆ ಬಿಜೆಪಿ ಕಾರ್ಯಕರ್ತೆ ಸುಜತಾ ಹಂಡಿಯನ್ನು ಪೊಲೀಸರು  ಬಂಧಿಸಿದ್ದಾರೆ.  ಬಂಧನ ವೇಳೆ ಪ್ರತಿರೋಧ ತೋರಿ ಸುಜಾತ ಹಂಡಿ  ಚೀರಾಟ ನಡೆಸಿದ್ದಾರೆ. 
ಈ ವೇಳೆ ವಿವಸ್ತ್ರಗೊಳಿಸಿ ಥಳಿಸಿದ ಆರೋಪ ಕೇಳಿ ಬಂದಿದೆ.  ಬಿಜೆಪಿ ಕಾರ್ಯಕರ್ತೆ ವಿರುದ್ಧ ಬಿಎನ್‌ಎಸ್‌  ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  ಈ ಮೊದಲು ಸುಜತಾ ಹಂಡಿ‌ ಸಹ ಕಾಂಗ್ರೆಸ್ ನಲ್ಲಿದ್ದರು.   ಇತ್ತೀಚೆಗೆ ವರ್ಷಗಳಲ್ಲಿ ಬಿಜೆಪಿಗೆ  ಸುಜತಾ ಸೇರ್ಪಡೆಯಾಗಿದ್ದಾರೆ. 
ಸುಜಾತ SIR- BLO ಗಳನ್ನು ಕರೆತಂದು ನಮ್ಮ ವೋಟ್ ಡಿಲಿಟ್ ಮಾಡಿಸಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.  ಇದೇ ಆರೋಪದ ಮೇಲೆ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ  ಗಲಾಟೆ ಆಗಿತ್ತು.  ಈ ವಿಚಾರ ಇಟ್ಟುಕೊಂಡು ಸುಜತಾ ಹಂಡಿ ವಿರುದ್ಧ ದೂರು ದಾಖಲಿಸಿ ಬಂಧಿಸಿದ್ದಾರೆ.  ಬಂಧನದ ಸಂದರ್ಭದಲ್ಲಿ ಪೊಲೀಸರು ಸುಜಾತ ಜೊತೆ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರು ದಾಖಲಾಗಿದೆ.  ಮತ್ತೊಂದು ದೂರ‌ು  ಅನ್ನು ಕೇಶ್ವಾಪುರ ಪೊಲೀಸರು ದಾಖಲಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಪೋಲೀಸರ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ,  ಸುಜಾತ ವಿರುದ್ದ ದೂರು ನೀಡಿದ್ದ ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.  ನನಗೆ ಆಧಾರ ಕಾರ್ಡ್ ಕೇಳಿದ್ರು, ನಾನು ಕೊಡಲ್ಲ ಎಂದು ಹೇಳಿದ್ದೆ.  ಈ ಹಿನ್ನೆಲೆಯಲ್ಲಿ ಜನವರಿ 1 ರ ರಾತ್ರಿ ವೇಳೆ ಸುಜಾತಾ ಆಕೆಯ ಸಹಚರರೊಂದಿಗೆ ನಮ್ಮ ಮನೆಗೆ ಬಂದು ಹಲ್ಲೆ ಮಾಡಿದ್ದಾಳೆ.   ಕೈಗೆ, ಕುತ್ತಿಗೆ ಭಾಗಕ್ಕೆ ಆಕೆಯಿಂದ ಹಲ್ಲೆಯಾಗಿತ್ತು .   ಈ ಹಿನ್ನೆಲೆಯಲ್ಲಿ ನಾನು ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ .  ಹೀಗಾಗಿ 5ರಂದು ಪೊಲೀಸರು ಆಕೆಯನ್ನ ಬಂಧನ ಮಾಡುವುದಕ್ಕೆ  ಹೋಗಿದ್ದರು.   ಈ ವೇಳೆ ಇಷ್ಟೆಲ್ಲಾ ಘಟನೆ ಆಗಿದೆ . 
ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ .  ಆದರೆ ಜನವರಿ 1ರ  ರಾತ್ರಿ ಸುಜಾತ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ 
ಅದೇ ಏರಿಯಾದಲ್ಲೇ ನನ್ನ ಮನೆ ಸಹ ಇದೆ.  ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಪ್ರಶಾಂತ ಹೇಳಿದ್ದಾರೆ. 




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Police WOMEN ASSAULTED
Advertisment