Advertisment

PSI ಕನಸು ಹೊತ್ತು ಬಳ್ಳಾರಿಯಿಂದ ಧಾರಾವಡಕ್ಕೆ ಬಂದಿದ್ದ ಆಕಾಂಕ್ಷಿ ನಿಧನ.. ಏನಾಯಿತು?

ಪಿಎಸ್​ಐ ಆಕಾಂಕ್ಷಿ ರಾಮಾಂಜನೇಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಗ್ಗಲ್ ಗ್ರಾಮದ ಈ ಯುವಕ ಕಳೆದ 5 ವರ್ಷಗಳಿಂದ ಧಾರವಾಡದಲ್ಲಿ ಅಭ್ಯಾಸ ಮಾಡುತ್ತಿದ್ದರು.

author-image
Bhimappa
student heart attack
Advertisment

ಧಾರವಾಡ: ನಗರದ ನಿಸರ್ಗ ಲೇಔಟ್​ನಲ್ಲಿ ಪಿಎಸ್​ಐ ಆಕಾಂಕ್ಷಿ ರಾಮಾಂಜನೇಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಗ್ಗಲ್ ಗ್ರಾಮದ ಈ ಯುವಕ ಕಳೆದ 5 ವರ್ಷಗಳಿಂದ ಧಾರವಾಡದಲ್ಲಿ ಅಭ್ಯಾಸ ಮಾಡುತ್ತಿದ್ದರು. 

Advertisment

ನಿನ್ನೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದರಿಂದ, ತಕ್ಷಣ ಧಾರವಾಡದ ಜಿಲ್ಲಾಸ್ಪತ್ರೆಗೆ ಸ್ನೇಹಿತರು ರಾಮಾಂಜನೇಯನನ್ನು ದಾಖಲಿಸಿದ್ದರು. ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

Bangalore Kannada News
Advertisment
Advertisment
Advertisment