/newsfirstlive-kannada/media/media_library/vi/hGqHFhPnVsw/hqdefault-925822.jpg)
ನಾಪತ್ತೆ ದೂರು ಕೊಟ್ಟ ಸುಜಾತ ಭಟ್, ಅಸಲಿ ಕಥೆ ಏನು?
ಧರ್ಮಸ್ಥಳದಲ್ಲಿ ಅನಾಮಿಕನ ದೂರು ಒಂದು ಕಡೆಯಾದರೇ, ಸುಜಾತ ಭಟ್ ಎಂಬ ವೃದ್ದ ಮಹಿಳೆಯ ದೂರು ಮತ್ತೊಂದು ಕಡೆ. ತಮ್ಮ ಮಗಳು ಧರ್ಮಸ್ಥಳಕ್ಕೆ ಹೋದವಳು, ಅಲ್ಲಿಯೇ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಜುಲೈ 20 ರಂದು ಲಿಖಿತ ದೂರು ನೀಡಿದ್ದಾರೆ.
ಆದರೇ, ಸುಜಾತ ಭಟ್ ಗೆ ಅನನ್ಯ ಭಟ್ ಎಂಬ ಮಗಳಿದ್ದಳು ಎಂಬುದನ್ನು ಆಕೆಯ ಸೋದರನೇ ಒಪ್ಪುತ್ತಿಲ್ಲ. ಇನ್ನೂ ಅನನ್ಯ ಭಟ್ ಎಂಬ ಯುವತಿಯನ್ನು ಕಣ್ಣಾರೆ ಕಂಡವರು ಯಾರು ಇಲ್ಲ. ಆಕೆ ಬದುಕಿದ್ದ ಬಗ್ಗೆಯೂ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಸುಜಾತ ಭಟ್ ಕೊಟ್ಟಿರುವ ಪೊಲೀಸ್ ದೂರು ಮೇಲ್ನೋಟಕ್ಕೆ ಸಂಪೂರ್ಣ ಸುಳ್ಳು ಎಂದೇ ಜನರು ಹೇಳುತ್ತಿದ್ದಾರೆ.
ಹಾಗಾದರೇ, ಸುಜಾತ ಭಟ್ ಹೀಗೆ ಸುಳ್ಳು ದೂರು ನೀಡಲು ಕಾರಣವೇನು ಎಂದು ಕೆದಕಿದರೇ, ಬೇರೆ ಯಾವುದೋ ದ್ವೇಷ, ಜಮೀನು ದಾನದ ವಿಷಯ ತೆರೆದುಕೊಳ್ಳುತ್ತೆ. ಸುಜಾತ ಭಟ್‌ಗೆ ಬೇರೆ ಯಾವುದೋ ನೋವು ಕಾಡುತ್ತಿದೆ. ಆ ನೋವಿನಿಂದ ಈ ರೀತಿ ಸುಳ್ಳು ದೂರು ಕೊಟ್ಟಿರಬಹುದು ಎಂದು ಈಗ ಧರ್ಮಸ್ಥಳದಲ್ಲಿ ಜನರು ಚರ್ಚೆ ಮಾಡುತ್ತಿದ್ದಾರೆ.
ಹಾಗಾದರೇ, ಸುಜಾತ ಭಟ್ ಗೆ ಕಾಡುತ್ತಿರುವ ನೋವು ಏನು ಅಂಥ ನೋಡಿದರೇ, ಅಲ್ಲಿ ಜಮೀನು ದಾನದ ವಿಷಯ ತೆರೆದುಕೊಳ್ಳುತ್ತೆ. ಸುಜಾತ ಭಟ್ ಅವರ ಅಜ್ಜ, ತಂದೆ ಸೇರಿದಂತೆ ಕುಟುಂಬದ ಹಿರಿಯರು, ಕುಟುಂಬಕ್ಕೆ ಸೇರಿದ ಭೂಮಿಯನ್ನು ಧರ್ಮಸ್ಥಳದ ದೇವಾಲಯಕ್ಕೆ ದಾನವಾಗಿ ನೀಡಿದ್ದಾರಂತೆ. ಆದರೇ, ಆ ಭೂಮಿಯನ್ನು ದಾನವಾಗಿ ನೀಡುವುದಕ್ಕೆ ಸುಜಾತ ಭಟ್ ಸಹಿ ಹಾಕಿಲ್ಲ. ಜಮೀನು ಅನ್ನು ದಾನವಾಗಿ ನೀಡುವುದಕ್ಕೆ ಸುಜಾತ ಭಟ್ ಒಪ್ಪಿಗೆಯೂ ಇರಲಿಲ್ಲ. ಆದರೂ, ಕುಟುಂಬದ ಹಿರಿಯರು ಜಮೀನು ಅನ್ನು ಈ ಹಿಂದೆಯೇ ಧರ್ಮಸ್ಥಳದ ದೇವಾಲಯಕ್ಕೆ ದಾನವಾಗಿ ನೀಡಿದ್ದಾರೆ. ಮೊಮ್ಮಗಳಾದ ನನ್ನ ಸಹಿ ಇಲ್ಲದೇ ನಮ್ಮ ತಾತ, ತಂದೆ ಜಮೀನು ಅನ್ನು ದೇವಾಲಯಕ್ಕೆ ದಾನವಾಗಿ ನೀಡಿದ್ದು ಸರಿಯಲ್ಲ ಎಂಬುದು ಸುಜಾತ ಭಟ್ ಭಾವನೆ. ಇದನ್ನು ನ್ಯೂಸ್ ಫಸ್ಟ್ ಸಂದರ್ಶನದ ವೇಳೆ ಸುಜಾತ ಭಟ್ ಅವರೇ ಬಾಯಿ ಬಿಟ್ಟು ಹೇಳಿದ್ದಾರೆ. ದಾನವಾಗಿ ಕೊಟ್ಟ ಭೂಮಿಯ ಕಾರಣಕ್ಕಾಗಿ ಧರ್ಮಸ್ಥಳದ ಬಗ್ಗೆ ಹೀಗೆ ಸುಳ್ಳು ಆರೋಪ ಮಾಡಿರಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಸುಜಾತ ಭಟ್, ಧರ್ಮಸ್ಥಳಕ್ಕೆ ಅವರ ಕುಟುಂಬದಿಂದ ಭೂಮಿ ದಾನ ಕೊಟ್ಟ ಬಗ್ಗೆ ಮಾತನಾಡಿದ್ದಾರೆ. ಅದರ ವಿವರ ಈ ಲಿಂಕ್ ನಲ್ಲಿದೆ ನೋಡಿ.
ದಾನವಾಗಿ ಕೊಟ್ಟ ಜಮೀನು ಅನ್ನು ವಾಪಸ್ ತಾವು ಪಡೆಯಬೇಕೆಂಬ ಆಸೆ ಸುಜಾತ ಭಟ್ ಅವರಿಗೆ ಇದ್ದಿರಬಹುದು. ಹೀಗಾಗಿ ಆ ಜಮೀನು ಅನ್ನು ವಾಪಸ್ ಕೊಡಿ ಎಂದು ಧರ್ಮಸ್ಥಳದ ದೇವಾಲಯಕ್ಕೆ ಹೋಗಿ ಕೇಳಿರಬಹುದು. ಆಗ ಸರಿಯಾದ ಉತ್ತರ ಸಿಗದೇ, ಹತಾಶರಾಗಿ ಹೀಗೆ ಸುಳ್ಳು ದೂರು ನೀಡಿರಬಹುದು ಎಂಬ ಚರ್ಚೆ ಧರ್ಮಸ್ಥಳದಾದ್ಯಂತ ನಡೆಯುತ್ತಿದೆ.
ಹೀಗಾಗಿ ಸುಜಾತ ಭಟ್ ಅವರಿಗೆ ಜಮೀನು ಹೋಯ್ತಲ್ಲ ಎಂಬ ಭಾವನೆ, ಅದನ್ನು ಮರಳಿ ಪಡೆಯಬೇಕೆಂಬ ಆಸೆಯಿಂದ ಜಿದ್ದಿಗೆ ಬಿದ್ದು, ಅದೇ ಧರ್ಮಸ್ಥಳದಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿ, ಆಗ ಜಮೀನು ಅನ್ನು ವಾಪಸ್ ಪಡೆಯಬಹುದು ಎಂಬ ಲೆಕ್ಕಾಚಾರ ಇದ್ದಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ಇನ್ನೂ ಸುಜಾತ ಭಟ್ ಕುಟುಂಬದಿಂದ ಜಮೀನು ಅನ್ನು ಧರ್ಮಸ್ಥಳ ದೇವಾಲಯಕ್ಕೆ ನೀಡಿರುವುದನ್ನು ಅವರ ಸೋದರ ಕೂಡ ಒಪ್ಪಿಕೊಂಡಿದ್ದಾರೆ. ಆದರೇ, ಜಮೀನು ನೀಡಿದ್ದರಿಂದ ನಮಗೆ ಯಾವುದೇ ಅನ್ಯಾಯವಾಗಿಲ್ಲ. ಧರ್ಮಸ್ಥಳ ದೇವಾಲಯದವರು ನಮಗೆ ಒಂದೂವರೆ ಎರಡು ಲಕ್ಷ ರೂಪಾಯಿ ಹಣ ನೀಡಿದ್ದರು. ಆ ಹಣದಲ್ಲಿ ನಾವು ಮನೆ ಕಟ್ಟಿಕೊಂಡಿದ್ದೇವೆ ಎಂದು ಸುಜಾತ ಭಟ್ ಸೋದರ ಕೂಡ ಇಂದು ನ್ಯೂಸ್ ಫಸ್ಟ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಹೀಗಾಗಿ ಧರ್ಮಸ್ಥಳಕ್ಕೂ ಸುಜಾತ ಭಟ್ ಕುಟುಂಬಕ್ಕೂ ಈ ಜಮೀನಿನ ನಂಟು ಇರುವ ವಿಷಯ ಈಗ ಬೆಳಕಿಗೆ ಬಂದು ಬಿಚ್ಚಿಕೊಂಡಿದೆ. ಈಗ ಎಸ್‌ಐಟಿ ಅಧಿಕಾರಿಗಳನ್ನು ಭೇಟಿಯಾದಾಗ, ಈ ಜಮೀನಿನ ವಿಷಯವನ್ನು ಕೂಡ ಸುಜಾತ ಭಟ್ ಪೊಲೀಸರ ಮುಂದೆ ಪ್ರಸ್ತಾಪಿಸಬಹುದು. ತಮ್ಮ ಕುಟುಂಬದ ಜಮೀನು ಅನ್ನು ತಮಗೆ ವಾಪಸ್ ಕೊಡಿಸಿ ಎಂದು ಕೇಳಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಜಮೀನಿಗಾಗಿ ಇಲ್ಲದ ಮಗಳನ್ನು ಸೃಷ್ಟಿಸಿ, ಬೇರೆಯವರ ಪೋಟೋ ತೋರಿಸಿ, ಆಕೆಯನ್ನೇ ತಮ್ಮ ಮಗಳು ಎಂದು ಕರೆದು ಸುಜಾತ ಭಟ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ಈ ವಿವಾದದಿಂದ ಹೊರ ಬರಲು ಪೊಲೀಸರಿಗೆ ತಾವು ಕೊಟ್ಟ ದೂರು ಅನ್ನು ಕೂಡ ವಾಪಸ್ ಪಡೆಯುವ ಗಂಭೀರ ಚಿಂತನೆಯಲ್ಲಿ ಸುಜಾತ ಭಟ್ ಕೂಡ ಇದ್ದಾರೆ.
ದಾನವಾಗಿ ಕೊಟ್ಟ ಜಮೀನು ಅನ್ನು ಮರಳಿ ಪಡೆಯಲು ಹೀಗೆ ದೂರಿನ ಮೂಲಕ ಧರ್ಮಸ್ಥಳದವರ ಜೊತೆ ಫೈಟ್ ಗೆ ಇಳಿದಿದ್ದಾರೆ ಸುಜಾತ ಭಟ್ ಎಂಬ ಚರ್ಚೆ ಧರ್ಮಸ್ಥಳ ಗ್ರಾಮದಲ್ಲಿ , ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.