ಬೆಂಗಳೂರು: ಖಗೋಳದಲ್ಲಿ ನಡೆಯುವ ವಿಸ್ಮಯವೇ ಗ್ರಹಣ. ಮನುಷ್ಯನ ಊಹೆಗೂ ನಿಲುಕದ ಅಚ್ಚರಿ, ವಿಸ್ಮಯಕಾರಿ ಎಂದರೆ ಗ್ರಹಣ. ಭಾರತದಲ್ಲಿ ಇವತ್ತು ಖಗ್ರಾಸ ಚಂದ್ರಗ್ರಹಣ ಸಂಭವಿಸುತ್ತಿದೆ. 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತಿರುವುದು ಏಳು ವರ್ಷಗಳ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ. ಈ ಸಂಬಂಧ ನೆಹರು ತಾರಾಲಯದ ನಿರ್ದೇಶಕರು ಡಾ.ಬಿಆರ್ ಗುರು ಪ್ರಸಾದ್ ಅವರು ಮಾತನಾಡಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ನೆಹರು ತಾರಾಲಯದ ನಿರ್ದೇಶಕರು ಡಾ.ಬಿಆರ್ ಗುರು ಪ್ರಸಾದ್ ಅವರು, ಇಂದು ರಾತ್ರಿ ಸಂಪೂರ್ಣ ಚಂದ್ರ ಗ್ರಹಣ ನಡೆಯುತ್ತದೆ. ಅಪರೂಪ, ಅದ್ಭುತವಾದ, ವಿಸ್ಮಯಕಾರಿಯಾದ ವಿದ್ಯಮಾನ ಆಗಿದೆ. ಮತ್ತೆ ಮತ್ತೆ ನೋಡಲು ಸಾಧ್ಯವಿಲ್ಲ. ಮತ್ತೆ ಮೂರುವರೆ ವರ್ಷ ಕಾಯಬೇಕು. ಇವತ್ತು ರಾತ್ರಿ 11 ಗಂಟೆಯಿಂದ 12:20ರವರೆಗೆ ಚಂದ್ರ ಬ್ಲಡ್ ಮೂನ್ ಆಗಿ ಅಥವಾ ತಾಮ್ರ ಮಿಶ್ರಿತ ಕೆಂಪು ಅಥವಾ ಕಿತ್ತಳೆ ಬಣ್ಣದ ಮಿಶ್ರಿತವಾಗಿ ಗೋಚರವಾಗುತ್ತಾನೆ. ಯಾರು ಬೇಕಾದರೂ ಬರಿಗಣ್ಣಿನಿಂದ ಮನೆಯ ಮಹಡಿ ಅಥವಾ ಕಟ್ಟಡದ ಮೇಲೆ ನಿಂತು ನೋಡಬಹುದು. ಏನು ಆಗಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ