ಬೆಂಗಳೂರು: ವೈದ್ಯಯಾಗಿದ್ದ ಕೃತಿಕಾ ರೆಡ್ಡಿಯನ್ನು ಅವರ ಗಂಡ ಮಹೇಂದ್ರ ರೆಡ್ಡಿ ಜೀವ ತೆಗೆದಿರುವುದು ಎಫ್​ಎಸ್​ಎಲ್​ ವರದಿಯಿಂದ ಮಾಹಿತಿ ಬಹಿರಂಗವಾಗಿದೆ. ವರದಿ ಬಹಿರಂಗವಾಗುತ್ತಿದ್ದಂತೆ ಅವರ ಕುಟುಂಬಸ್ಥರು ತೀವ್ರ ನೋವಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಮೃತ ಡಾ.ಕೃತಿಕಾ ಅವರ ಸಹೋದರಿ ಡಾ.ನಿಕಿತಾ ಅವರು ಮಾತನಾಡಿ, ನೋವು ಹೊರ ಹಾಕಿದ್ದಾರೆ.
ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಮೃತ ಡಾ.ಕೃತಿಕಾ ಅವರ ಸಹೋದರಿ ಡಾ.ನಿಕಿತಾ ಅವರು, ನನ್ನ ಸಹೋದರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಕೃತಿಕಾ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಳು ಅಲ್ಲೆಲ್ಲ ಹೋಗಿ ಹಾಜರಾತಿ ತೆಗೆದು ನೋಡಿ ಅಲ್ಲಿ ಎಲ್ಲ ಶೇ.90 ರಷ್ಟು ಹಾಜರಾತಿ ಇದೆ. ಆರೋಗ್ಯ ಸಮಸ್ಯೆ ಇದ್ದವರು ಅಷ್ಟೊಂದು ಹಾಜರಾತಿ ಆಗಲು ಸಾಧ್ಯವಿಲ್ಲ. ಗಂಭೀರ ಸಮಸ್ಯೆ ಇದ್ದರೆ ಹೇಳಿಕೊಳ್ಳುತ್ತಿದ್ದಳು. ಆದರೆ ಆ ತರದ್ದು ಏನು ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಯೋರೋಪ್​ ಅಲ್ಲಿ ಇರುವಾಗ ಮೆಸೇಜ್ ಮಾಡಿ ಶುಗರ್, ಬ್ಲಡ್​ ದೇಹದಲ್ಲಿ ಕಡಿಮೆ ಆಗುತ್ತಿದೆ ಎಂದು ಹೇಳಿದ್ದಳು. ಆವಾಗ ಆಸ್ಪತ್ರೆಗೆ ಹೋಗಿ ತೋರಿಸಿದರೆ ಎಲ್ಲ ನಾರ್ಮಲ್ ಬಂದಿದೆ. 72 ಗಂಟೆಗಳ ಉಪವಾಸ ನಂತರ ಟೆಸ್ಟ್ ಮಾಡಿಸಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ಆದರೆ ಮಹೇಂದ್ರ ರೆಡ್ಡಿ ಇದಕ್ಕೆ ಇನ್ನೊಂದಿನ ಇರಲ್ಲ ಎಂದು ವೈದ್ಯರ ಮಾತು ಕೇಳದೇ ಕೃತಿಕಾನ ಮನೆಗೆ ಕರೆದುಕೊಂಡು ಬರುತ್ತಾನೆ. ಅದನ್ನು ಪೂರ್ಣ ಮಾಡೋಕೆ ಬಿಡಲ್ಲ. ಮನೆಯಲ್ಲಿ ಏನೋ ಕಾರ್ಯಕ್ರಮ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ