/newsfirstlive-kannada/media/media_files/2025/08/01/mandya-dove5-2025-08-01-11-00-27.jpg)
ಮಂಡ್ಯ: ಬರೋಬ್ಬರಿ 52 ದಿನ.. 1790 ಕಿ.ಮೀ.. ದೆಹಲಿಯಿಂದ ಮಂಡ್ಯಕ್ಕೆ ತನ್ನ ಮಾಲೀಕನನ್ನು ಹುಡುಕಿಕೊಂಡು ಪಾರಿವಾಳ ಬಂದಿದೆ ಅಂದ್ರೆ ನೀವು ನಂಬ್ತೀರಾ? ಹೌದು, ನಂಬಲೇಬೇಕು.
ಇದನ್ನೂ ಓದಿ:ಹಾವು ಕಚ್ಚಿದ ತಕ್ಷಣ ಈ ತಪ್ಪು ಮಾಡಿದ್ರೆ ಪ್ರಾಣವೇ ಹೋಗುತ್ತೆ.. ಜೀವ ಉಳಿಸಿಕೊಳ್ಳಲು ಏನು ಮಾಡಬೇಕು..
/filters:format(webp)/newsfirstlive-kannada/media/media_files/2025/08/01/mandya-dove3-2025-08-01-10-57-34.jpg)
ಏನಿದು ಒಂದು ಪಾರಿವಾಳದ ಕಥೆ?
ಅಭಿಮನ್ಯು ಹೆಸರಿನ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ 52 ದಿನಗಳಲ್ಲಿ ಸುಮಾರು 1790 ಕಿಲೋ ಮೀಟರ್​ನಷ್ಟು ಪ್ರಯಾಣ ಬೆಳೆಸಿದೆ. ಹೌದು, ಒಂದು ವರ್ಷದ ವಯಸ್ಸಿನ ಪಾರಿವಾಳ ವಿಶೇಷ ದಾಖಲೆ ಮಾಡಿದೆ. ಮಾಲೀಕನನ್ನ ಹುಡುಕಿಕೊಂಡು ಸರಿ ಸುಮಾರು 1790 ಕಿ.ಮೀ ಕ್ರಮಿಸಿ ಪಾರಿವಾಳ ಮಂಡ್ಯಕ್ಕೆ ಬಂದಿದೆ.
/filters:format(webp)/newsfirstlive-kannada/media/media_files/2025/08/01/mandya-dove4-2025-08-01-10-57-34.jpg)
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್​ನಿಂದ ಡೆಲ್ಲಿಯಲ್ಲಿ ರೇಸ್​ ಆಯೋಜಿಸಲಾಗಿತ್ತು. ಈ ರೇಸ್​ನಲ್ಲಿ 22 ಪಾರಿವಾಳಗಳು ಭಾಗಿಯಾಗಿದ್ದವು. ಅದರಲ್ಲಿ ಮಂಡ್ಯದ 1 ವರ್ಷದ ಅಭಿಮನ್ಯು ಪಾರಿವಾಳ ಕೂಡ ಒಂದು. ಹೀಗೆ ಈ ರೇಸ್​ನಲ್ಲಿ ಪ್ರತಿಯೊಂದು ಪಾರಿವಾಳಗಳಿಗೂ ಅದರ ಕಾಲಿಗೆ ರಿಂಗ್ ಅಳವಡಿಕೆ ಮಾಡಲಾಗಿತ್ತು. ಇದರಲ್ಲಿ ಕರ್ನಾಟಕ, ತಮಿಳುನಾಡಿನ 22 ಪಾರಿವಾಳಗಳು ಭಾಗವಹಿಸಿದ್ದವು. ಏಪ್ರಿಲ್ 5ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು.
/filters:format(webp)/newsfirstlive-kannada/media/media_files/2025/08/01/mandya-dove-2025-08-01-10-57-34.jpg)
ಆದ್ರೆ, ಈ ಪಂದ್ಯದಲ್ಲಿ ಭಾಗವಹಿಸಿದ್ದ 22ಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿದ್ದವು. ಆದರೆ, ಮಂಡ್ಯದ ಅಭಿಮನ್ಯು ಪಾರಿವಾಳ ಬಂದಿರಲಿಲ್ಲ. ಈ 1 ವರ್ಷದ ಅಭಿಮನ್ಯು ವಿ.ಸಿ.ಫಾರಂನ ಶ್ರೀಧರ್ ಎಂಬುವವರಿಗೆ ಸೇರಿತ್ತು. ಹೀಗೆ ರೇಸ್​ಗೆಂದು ಪಾರಿವಾಳನ್ನು ಹಾರಿಸಿದ್ದ ಬಳಿಕ ಮಾಲೀಕ ಮಂಡ್ಯಗೆ ವಾಪಸ್​ ಆಗಿದ್ದ. ಇದಾದ ಬಳಿಕ 52 ದಿನಗಳು.. ದೆಹಲಿಯಿಂದ ಮಂಡ್ಯಗೆ ಬರೋಬ್ಬರಿ 1790 ಕಿ.ಮೀ ದಾಟಿ ತನ್ನ ಮಾಲೀಕನ ಹುಡುಕಿ ಪಾರಿವಾಳ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿ ಅಭಿಮನ್ಯು ಪಾರಿವಾಳ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us