ಡ್ರೈವರ್​ ಬಾಬು ಕೇಸ್​; ಡಾ.ಕೆ ಸುಧಾಕರ್​ಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಲಿ- ಶಾಸಕ ಪ್ರದೀಪ್ ಈಶ್ವರ್

ದಲಿತ ಸಮುದಾಯದ ಹುಡುಗ ಬಾಬು, ಎಲ್ಲಿಂದ ಹಣ ತಂದೆ, ಯಾರಿಗೆ ಕೊಟ್ಟೆ ಎಂದು ಹೇಳಿದ್ದಾನೆ. ಸಂಸದರಿಗೆ ನಿಜವಾಗಲೂ ಪ್ರಾಮಾಣಿಕತೆ ಇದ್ದರೇ ತನಿಖೆಗಾಗಿ ಸಿಐಡಿಗೆ ಅವರೇ ಮನವಿ ಮಾಡಬೇಕು. ಈ ಆರೋಪ ಮಾಡುತ್ತಿರುವುದು ಯಾರೂ ಅಲ್ಲ, ಬಾಬು ಬರೆದ ಚೀಟಿಯಲ್ಲಿದೆ.

author-image
Bhimappa
Advertisment

ಚಿಕ್ಕಬಳ್ಳಾಪುರದ ಜಿಲ್ಲಾಡಳಿತದ ಆವರಣದಲ್ಲೇ ಬಾಬು ಎನ್ನುವ ವ್ಯಕ್ತಿ ಆಗಸ್ಟ್ 7 ರಂದು ಜೀವ ಕಳೆದುಕೊಂಡಿದ್ದರು. ಇವರ ಜೇಬಿನಲ್ಲಿ ಒಂದು ಚೀಟಿ ಇದ್ದಿದ್ದು ಇದರಲ್ಲಿ ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ಎನ್​ಎನ್​ಆರ್​ ಟ್ರಾವೆಲ್ಸ್ ನಾಗೇಶ್ ಕಾರಣ ಅಂತ ಆರೋಪ ಇದೆ. ಸದ್ಯ ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿದ್ದಾರೆ. 

ದಲಿತ ಸಮುದಾಯದ ಹುಡುಗ ಬಾಬು, ಎಲ್ಲಿಂದ ಹಣ ತಂದೆ, ಯಾರಿಗೆ ಕೊಟ್ಟೆ ಎಂದು ಹೇಳಿದ್ದಾನೆ. ಸಂಸದರಿಗೆ ನಿಜವಾಗಲೂ ಪ್ರಾಮಾಣಿಕತೆ ಇದ್ದರೇ ತನಿಖೆಗಾಗಿ ಅವರೇ ಸಿಐಡಿಗೆ ಮನವಿ ಮಾಡಬೇಕು. ಈ ಆರೋಪ ಮಾಡುತ್ತಿರುವುದು ಯಾರೂ ಅಲ್ಲ, ಬಾಬು ಬರೆದ ಚೀಟಿಯಲ್ಲಿದೆ. ಬಾಬು, ಬಾಬು ಪತ್ನಿ ಇಬ್ಬರೂ ನಾಲ್ಕೈದು ವರ್ಷದಿಂದ ಸಾಲ ತೀರಿಸಲು ಆಗದೇ ತುಂಬಾ ಕಷ್ಟ ಪಟ್ಟಿದ್ದಾರೆ. ಅವರ ಕುಟುಂಬಸ್ಥರು ಹೇಗೆ ದೂರು ಕೊಟ್ಟಿದ್ದಾರೋ ಆ ರೀತಿ ಅಟ್ರಾಸಿಟಿ ಕೇಸ್ ಆಗಿದೆ ಎಂದು ಹೇಳಿದ್ದಾರೆ. 

ನಂತರ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ದಲಿತ ಸಮುದಾಯದ ಬಾಬು ಪರ ನಾವು ನಿಲ್ಲುತ್ತೇವೆ. ಆದರೆ, ಪ್ರಕರಣದಲ್ಲಿ ಹೀಗೆ ಮಾಡಿ, ಹಾಗೇ ಮಾಡಿ ಎಂದು ನಾವು ಯಾರೂ ಹಸ್ತಕ್ಷೇಪ ಮಾಡಲ್ಲ. ಒಂದು ಡ್ರೈವರ್​ ಜಾಬ್​ಗೆ 40 ಲಕ್ಷ ಹಣ ನಡೆಯುತ್ತಿದೆ ಎಂದರೆ ಛಲವಾದಿ ನಾರಾಯಣಸ್ವಾಮಿ ಅವರೇ ನಿಮಗೆ ದಲಿತ ಸಮುದಾಯ ಮೇಲೆ ಪ್ರೀತಿ ಇದ್ರೆ ಬಂದು ಬಾಬು ಪರವಾಗಿ ನಿಲ್ಲಿ. ಇದು ನನ್ನ ಮನವಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MP Dr.K Sudhakar MLA Pradeep Eshwar
Advertisment