/newsfirstlive-kannada/media/media_files/2025/08/22/congress-mla-veerendra-papi-2025-08-22-12-40-13.jpg)
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ. ದಾಳಿ
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ.(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆಕ್ರಮ ಹಣ ವರ್ಗಾವಣೆ, ಆಕ್ರಮ ಆಸ್ತಿಯ ಬಗ್ಗೆ ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆನ್ ಲೈನ್ ಗೇಮಿಂಗ್ ಆ್ಯಪ್ ಕಂಪನಿಗಳಿಗೆ ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮೇಲಿದೆ. ಇದಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿ ಶಾಸಕ ವೀರೇಂದ್ರ ಪಪ್ಪಿ ಮೇಲೆ 2 ಎಫ್‌ಐಆರ್ ದಾಖಲಾಗಿವೆ. ಈ ಕೇಸ್ ನಲ್ಲೇ ಆಕ್ರಮ ಹಣ ವರ್ಗಾವಣೆ ಆಗಿದೆ ಎಂದು ಇ.ಡಿ. ಅಧಿಕಾರಿಗಳು ಇಸಿಐಆರ್ ದಾಖಲಿಸಿಕೊಂಡು ಇಂದು ಬೆಳಿಗ್ಗೆಯೇ ದಾಳಿ ನಡೆಸಿ ದಾಖಲೆಪತ್ರಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ತನಿಖೆಯ ಭಾಗವಾಗಿಯೇ ವಿಚಾರಣೆಗಾಗಿ ಸಿಕ್ಕಿಂನಲ್ಲಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂನ ಹೋಟೇಲ್ ನಲ್ಲೇ ವಶಕ್ಕೆ ಪಡೆದಿದ್ದಾರೆ.
ಚಳ್ಳಕೆರೆ ನಗರದಲ್ಲಿನ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಸಿ.ವೀರೇಂದ್ರ ಪಪ್ಪಿ ಅವರ ಅಣ್ಣ ಕೆ.ಸಿ. ನಾಗರಾಜ್, ಕೆ.ಸಿ ಸ್ವಾಮಿ ಮನೆ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ನಗರದ ಹಳೇ ಟೌನ್ ವೀರಭದ್ರ ಸ್ವಾಮಿ ದೇವಸ್ಥಾನ ಬಳಿ ಇರುವ ನಿವಾಸದ ಮೇಲೂ ದಾಳಿಯಾಗಿದೆ. ಆಕ್ರಮ ಹಣ ವರ್ಗಾವಣೆ ಕುರಿತಂತೆ ದಾಖಲೆ ಇ.ಡಿ. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದೆಹಲಿ ಎನ್ ಫೋರ್ಸ್ ಮೆಂಟ್ ಟೀಂನಿಂದ ದಾಳಿ ನಡೆದಿದೆ. ಏಳು ಖಾಸಗಿ ವಾಹನಗಳಲ್ಲಿ ಇ.ಡಿ ಟೀಂ ಬಂದು ದಾಳಿ ನಡೆಸಿದೆ.
ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿರುವ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಮನೆ ಮತ್ತು ಸಂಬಂಧಿಕರ ಮನೆ ಮೇಲೂ ಇ.ಡಿ ದಾಳಿ ನಡೆಸಿದೆ. ಸಂಬಂಧಿಕರಾದ ಹೊಸಮನೆ ಸ್ವಾಮಿ ಮನೆಯಲ್ಲೂ ಶೋಧ ನಡೆಸಲಾಗುತ್ತಿದೆ. ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಬ್ಯುಸಿನೆಸ್ ಉದ್ದೇಶಕ್ಕಾಗಿ ಹೊರ ರಾಜ್ಯಕ್ಕೆ ಟೂರ್ ಹೋಗಿದ್ದಾರೆಂದು ಅವರ ಕುಟುಂಬದವರು ಇ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂಗೆ ತೆರಳಿದ್ದು, ಸಹೋದರ ತಿಪ್ಪೇಸ್ವಾಮಿ ದುಬೈನಲ್ಲಿದ್ದಾರೆ. ಇನ್ನೋರ್ವ ಅಣ್ಣ ನಾಗರಾಜ್ ಬೆಂಗಳೂರಿನಲ್ಲಿದ್ದು, ಚಳ್ಳಕೆರೆಗೆ ಹೊರಟಿದ್ದಾರೆ. ಶಾಸಕ ವೀರೇಂದ್ರ ಮನೆಯಲ್ಲಿ ತಾಯಿ ರತ್ನ ಹಾಗೂ ಕೆ.ಸಿ.ನಾಗರಾಜ್ ಮನೆಯಲ್ಲಿ ಆತನ ಪತ್ನಿ ಮಂಜುಳ ಇದ್ದಾರೆ. ಸಹೋದರ ಕೆ.ಸಿ. ತಿಪ್ಪೇಸ್ವಾಮಿ ಫ್ಯಾಮಿಲಿ ಸಮೇತ ದುಬೈನಲ್ಲಿದ್ದಾರೆ. ಚಳ್ಳಕೆರೆ ನಿವಾಸಕ್ಕೆ ಶಾಸಕರ ಸಹೋದರ ಕೆ.ಸಿ. ನಾಗರಾಜ ಆಗಮಿಸಿದ್ದಾರೆ.
ಬೆಂಗಳೂರಿನ ವಸಂತ ನಗರ ಅಪಾರ್ಟ್ ಮೆಂಟ್ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಸಂತನಗರದ ಪ್ರೆಸ್ಟೀಜ್ ಎಡ್ವರ್ಡಿಯನ್ ಅಪಾರ್ಟ್ ಮೆಂಟ್ ನಲ್ಲಿ ಪ್ಲ್ಯಾಟ್ ಅನ್ನು ವೀರೇಂದ್ರ ಪಪ್ಪಿ ಹೊಂದಿದ್ದಾರೆ. ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ, ಗೋವಾ ಸೇರಿದಂತೆ ಹದಿನಾರು ಕಡೆಗಳಲ್ಲಿ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವೀರೇಂದ್ರ ಪಪ್ಪಿ ಒಡೆತನದ ಕಂಪನಿಗಳಿಂದ ಗೇಮಿಂಗ್ ಆ್ಯಪ್ ಗಳಿಗೆ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಳಿ ನಡೆಸಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ವೀರೇಂದ್ರ ಪಪ್ಪ ಆನ್ ಲೈನ್ ಗೇಮಿಂಗ್ ಆ್ಯಪ್ ಕಂಪನಿಗಳಿಗೆ ಆಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗೋವಾದಲ್ಲಿ ವೀರೇಂದ್ರ ಪಪ್ಪಿ ವಿರುದ್ಧ 2 ಕೇಸ್ ದಾಖಲಾಗಿದ್ದವು. ಆನ್ ಲೈನ್ ಗೇಮಿಂಗ್ ವಿಚಾರದಲ್ಲಿ ಪಪ್ಪಿ ವಿರುದ್ಧ 2 ಎಫ್ ಐ ಆರ್ ದಾಖಲಾಗಿತ್ತು . ಈ ಹಿನ್ನೆಲೆಯಲ್ಲಿ MLA ಕೆ.ಸಿ. ವೀರೇಂದ್ರ ಗೆ ಸೇರಿದ 16 ಕಡೆ ಇಡಿ ರೇಡ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.