/newsfirstlive-kannada/media/media_files/2026/01/09/udayami-vokkaliga-expo-2026-1-2026-01-09-16-40-06.jpg)
ಬೆಂಗಳೂರು ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಉದ್ಯಮಿ ಒಕ್ಕಲಿಗ ಎಕ್ಸ್ ಪೋ 2026ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಫಸ್ಟ್ ಸರ್ಕಲ್ ವತಿಯಿಂದ ಆಯೋಜಿಸಲಾದ 4ನೇ ಆವೃತ್ತಿಯ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ವರ್ಣರಂಜಿತವಾಗಿ ಆರಂಭವಾಗಿದ್ದು, ಗಣ್ಯಾತಿಗಣ್ಯರು ಭಾಗಿಯಾಗಿ ಮತ್ತಷ್ಟು ಮೆರಗು ತಂದರು. ಹಾಗಾದ್ರೆ, ಮೊದಲ ದಿನದ ಒಕ್ಕಲಿಗ ಉದ್ಯಮ ಎಕ್ಸ್ ಪೋ ಹೇಗಿತ್ತು? ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೂರು ದಿನಗಳ ಒಕ್ಕಲಿಗ ಉದ್ಯಮಿ ಎಕ್ಸ್ ಪೋಗೆ ಅದ್ಧೂರಿ ಚಾಲನೆ
ರೈತ ಸಂತೆ... ಸಂಕ್ರಾಂತಿ ಹಬ್ಬ... ಒಕ್ಕಲಿಗ ಉದ್ಯಮಿಗಳ ಸಮಾಗಮ..!
ಹೌದು, ಅರಮನೆ ಮೈದಾನದಲ್ಲಿಂದು ಮೂರು ದಿನಗಳ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ಆರಂಭವಾಗಿದ್ದು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಧಿಕೃತ ಚಾಲನೆ ನೀಡಿದರು. ಫಸ್ಟ್ ಸರ್ಕಲ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ಆಯೋಜನೆ ಮಾಡ್ತಾ ಬಂದಿದ್ದು, ಈಗ ನಾಲ್ಕನೇ ಆವೃತ್ತಿಯ ಎಕ್ಸ್ ಪೋ ಶುಭಾರಂಭವಾಗಿದೆ...
ಕೃಷಿ ಸಚಿವ ಚೆಲುವರಾಯಸ್ವಾಮಿ, ಕೇಂದ್ರ ಸಚಿವೆ ಶೋಭ ಕಾರಂದ್ಲಾಜೆ, ಶಾಸಕರಾದ ಗೋಪಾಲಯ್ಯ, ಶರತ್ ಬಚ್ಚೇಗೌಡ, ಜಿಟಿ ದೇವೇಗೌಡ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಸಂತೋಷ್ ಹಾಗೂ ಫಸ್ಟ್ ಸರ್ಕಲ್ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ಸೇರಿ ಹಲವು ಒಕ್ಕಲಿಗ ಮುಖಂಡರು ಭಾಗಿಯಾಗಿದ್ದರು.
ಜನವರಿ 9, 10, 11ರವರೆಗೆ ಮೂರು ದಿನಗಳ ಕಾಲ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ನಡೆಯಲಿದ್ದು, ರಾಜ್ಯ, ದೇಶ ಹಾಗೂ ವಿದೇಶಗಳ ಖ್ಯಾತ ಹಾಗೂ ಯುವ ಉದ್ಯಮಿಗಳು ಭಾಗಿಯಾಗಿದ್ದಾರೆ. ಬೆಳಗ್ಗೆ ಉದ್ಘಾಟನೆ ಕಾರ್ಯಕ್ರಮ ನಡೆದರೇ, ಮಧ್ಯಾಹ್ನದ ನಂತರ ಬ್ಯುಸಿನೆಸ್‌ಗೆ ಸಂಬಂಧಿಸಿದಂತೆ ಉದ್ಯಮಿದಾರರ ಚರ್ಚೆ ಕಾರ್ಯಕ್ರಮವೂ ನಡೆಯಿತು.. ಕೊಡಗು, ಚಿಕ್ಕಬಳ್ಳಾಪುರ, ಕೋಲಾರದ ಉದ್ಯಮಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದರು. ಬಳಿಕ ನ್ಯೂಸ್ ಫಸ್ಟ್ ಜೊತೆ ಮಾತಾಡಿದ ಫಸ್ಟ್ ಸರ್ಕಲ್ ಸಂಸ್ಥೆಯ ಅಧ್ಯಕ್ಷ ಡಾ ಡಿ ಮುನಿರಾಜು, ಉದ್ಯಮ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯವನ್ನ ಬಲಿಷ್ಠಗೊಳಿಸುವುದು, ಉತ್ತೇಜಿಸುವುದು ಹಾಗೂ ಮುಂದಿನ ಪೀಳಿಗೆಯವರಿಗೆ ಪ್ರೋತ್ಸಾಹಿಸುವುದು ಪ್ರಮುಖ ಉದ್ದೇಶ ಎಂದರು.
ಒಂದ್ಕಡೆ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದರೇ, ಮತ್ತೊಂದೆಡೆ ಕೃಷಿಗೆ ಸಂಬಂಧಪಟ್ಟಂತೆ ಸ್ಟಾಲ್ ಗಳು, ಉದ್ಯಮಕ್ಕೆ ಸಂಬಂಧಪಟ್ಟಂತೆ ಸ್ಟಾಲ್ ಗಳು, ವಿವಿಧ ಥಳಿಯ ಹಸುಗಳು, ಹಳ್ಳಿ ಸೊಗಡಿನ ಗೃಹ ಉಪಯೋಗಿ ವಸ್ತುಗಳು ಜೊತೆ ಜಾನಪದ ಸೊಗಡು ಗಮನ ಸೆಳೆಯಿತು...
ಅಂದ್ಹಾಗೆ, ಇನ್ನು ಎರಡು ದಿನಗಳ ಕಾಲ ಫಸ್ಟ್ ಸರ್ಕಲ್ ಉದ್ಯಮ ಒಕ್ಕಲಿಗ ಎಕ್ಸ್ ಪೋ ನಡೆಯಲಿದೆ.. ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿ ಹಲವು ಒಕ್ಕಲಿಗ ಮುಖಂಡರು ಭಾಗಿಯಾಗಲಿದ್ದಾರೆ. ಉದ್ಯಮ, ಕೃಷಿ ಮತ್ತು ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡುವ ವಿಚಾರಣ ಸಂಕಿರಣಗಳು, ಚರ್ಚೆ ಕಾರ್ಯಕ್ರಮಗಳು ಜೊತೆಗೆ ಮನರಂಜನೆ ಕಾರ್ಯಕ್ರಮಗಳು ಸಹ ನಡೆಯಲಿದೆ.
/filters:format(webp)/newsfirstlive-kannada/media/media_files/2026/01/09/udayami-vokkaliga-expo-2026-2026-01-09-16-36-35.jpg)
ಭರತ್ ಕೃಷ್ಣಪ್ಪ
ನ್ಯೂಸ್ ಫಸ್ಟ್
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us