/newsfirstlive-kannada/media/post_attachments/wp-content/uploads/2024/02/Current-Bill-Siddaramaiah.jpg)
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿ ಭಾರಿ ನಷ್ಟವಾಗಿದ್ದು, ನಷ್ಟ ಸರಿದೂಗಿಸಲು ಈ ವರ್ಷದ ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಗೆ ಅನುಮತಿ ನೀಡುವಂತೆ ಕೆಇಆರ್‌ಸಿಗೆ ಎಸ್ಕಾಂಗಳು ಮನವಿ ಮಾಡಿವೆ. ಈಗಾಗಲೇ ವಿದ್ಯುತ್ ಸರಬರಾಜು ಕಂಪನಿಗಳು 2024-25 ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಗೆ ಸಲ್ಲಿಸಿವೆ. ಎಸ್ಕಾಂಗಳ ಆದಾಯದಲ್ಲಿ ಸುಮಾರು 4,900 ಕೋಟಿ ರೂಪಾಯಿ ನಷ್ಟ ಆಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ನಷ್ಟವಾಗಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡಬೇಕೆಂದು ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‌ಸಿಗೆ ಮನವಿ ಮಾಡಿವೆ.
ಎಸ್ಕಾಂಗಳು ಸಲ್ಲಿಸಿರುವ ವರದಿಯ ಪ್ರಕಾರ, ಬೆಸ್ಕಾಂಗೆ 2,802 ಕೋಟಿ ರೂಪಾಯಿ ನಷ್ಟವಾಗಿದೆ. ಉಳಿದ ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂಗಳ ಆದಾಯದಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಚೆಸ್ಕಾಂ ಆದಾಯದಲ್ಲಿ 528 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ. ಜೆಸ್ಕಾಂ ಆದಾಯದಲ್ಲಿ 457 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ. ಹೆಸ್ಕಾಂ ಆದಾಯದಲ್ಲಿ 604 ಕೋಟಿ ರೂಪಾಯಿ ನಷ್ಟವಾಗಿದೆ. ಮೆಸ್ಕಾಂ ಆದಾಯದಲ್ಲಿ 480 ಕೋಟಿ ರೂಪಾಯಿ ನಷ್ಟವಾಗಿದೆ. ದರ ಪರಿಷ್ಕರಣೆ ಮಾಡದಿದ್ದರೇ, ಕಂಪನಿಗಳ ನಿರ್ವಹಣೆ ಕಷ್ಟವಾಗಲಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಕೈಗಾರಿಕೆ, ವಾಣಿಜ್ಯ ಉದ್ದೇಶದ ವಿದ್ಯುತ್ ದರವನ್ನು ಏರಿಕೆ ಮಾಡಬೇಕು. ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ದರವನ್ನು ಕಡಿಮೆ ಮಾಡಬೇಕೆಂದು ಎಸ್ಕಾಂಗಳು ಕೆಇಆರ್‌ಸಿಗೆ ಮನವಿ ಸಲ್ಲಿಸಿವೆ. ಕೈಗಾರಿಕೆ, ವಾಣಿಜ್ಯ ಉದ್ದೇಶದ ವಿದ್ಯುತ್ ಬಿಲ್ ಅನ್ನು ಕೈಗಾರಿಕೆ ಮಾಲೀಕರೇ ಪಾವತಿಸುತ್ತಾರೆ. ಅದಕ್ಕೆ ಯಾವುದೇ ಸಬ್ಸಿಡಿ ನೀಡಲ್ಲ. ಆದರೇ, ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಅನ್ನು ರಾಜ್ಯ ಸರ್ಕಾರ ಸಬ್ಸಿಡಿ ಮೂಲಕ ಎಸ್ಕಾಂಗಳಿಗೆ ನೀಡುತ್ತೆ. ಹೀಗಾಗಿ ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಕಡಿಮೆಯಾದರೇ, ರಾಜ್ಯ ಸರ್ಕಾರ ನೀಡಬೇಕಾದ ಸಬ್ಸಿಡಿ ಹಣದ ಮೊತ್ತ ಕಡಿಮೆಯಾಗುತ್ತೆ ಎಂಬ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿದೆ. ಕೈಗಾರಿಕೆ, ವಾಣಿಜ್ಯ ಉದ್ದೇಶದ ವಿದ್ಯುತ್ ದರ ಹೆಚ್ಚಾದರೇ, ಎಸ್ಕಾಂಗಳಿಗೆ ಹೆಚ್ಚಿನ ಆದಾಯ ಬರಲಿದೆ.
/filters:format(webp)/newsfirstlive-kannada/media/post_attachments/wp-content/uploads/2023/08/Current-Bill.jpg)
ಇನ್ನೂ ರಾಜ್ಯದಲ್ಲಿ ಗೃಹ ಬಳಕೆಯ ವಿದ್ಯುತ್‌ನ 200 ಯೂನಿಟ್‌ವರೆಗಿನ ಬಿಲ್ ಅನ್ನು ಗೃಹಜ್ಯೋತಿ ಯೋಜನೆಯಡಿ ರಾಜ್ಯ ಸರ್ಕಾರವೇ ಪಾವತಿಸುತ್ತಿದೆ. ಇದರ ಜೊತೆಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಅನ್ನು ಮೊದಲಿನಿಂದಲೂ ರಾಜ್ಯ ಸರ್ಕಾರವೇ ಸಬ್ಸಿಡಿ ಮೂಲಕ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಹೀಗಾಗಿ ಕೃಷಿ ಪಂಪ್ ಸೆಟ್ ವಿದ್ಯುತ್ ದರ ಕಡಿಮೆಯಾದರೇ, ರಾಜ್ಯ ಸರ್ಕಾರಕ್ಕೆ ಅನುಕೂಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us