ವರ್ಷದ ಕೊನೆಯ ಮೂರೇ ದಿನದಲ್ಲಿ ಅಬಕಾರಿ ಇಲಾಖೆಗೆ 587 ಕೋಟಿ ರೂ.ಆದಾಯ : ಕಳೆದ ವರ್ಷಕ್ಕಿಂತ 166 ಕೋಟಿ ರೂ. ಹೆಚ್ಚು ಆದಾಯ!!

ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲವೇ ಅಬಕಾರಿ ಇಲಾಖೆ. 2025ರ ಡಿಸೆಂಬರ್‌ನ ಕೊನೆಯ ಮೂರೇ ದಿನಗಳಲ್ಲಿ ಅಬಕಾರಿ ಇಲಾಖೆಗೆ ಲಿಕ್ಕರ್ ಮಾರಾಟದಿಂದ 587 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ 166 ಕೋಟಿ ರೂ. ಹೆಚ್ಚಿನ ಆದಾಯ ಬಂದಿರುವುದು ವಿಶೇಷ.

author-image
Chandramohan
Record liquor sale on the eve of new year

ಹೊಸ ವರ್ಷಾಚರಣೆ ವೇಳೆ ದಾಖಲೆಯ ಲಿಕ್ಕರ್ ಮಾರಾಟ

Advertisment
  • ಹೊಸ ವರ್ಷಾಚರಣೆ ವೇಳೆ ದಾಖಲೆಯ ಲಿಕ್ಕರ್ ಮಾರಾಟ
  • ಕಳೆದ ವರ್ಷಕ್ಕಿಂತ ಈ ವರ್ಷ 166 ಕೋಟಿ ರೂ ಹೆಚ್ಚಿನ ಆದಾಯ

ಹೊಸ ವರ್ಷದ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯ ಬಂದಿದೆ. ನಿರೀಕ್ಷೆಯಂತೆ ಹೊಸ ವರ್ಷದ ವೇಳೆ ಅಬಕಾರಿ ಇಲಾಖೆಯಿಂದ ಮದ್ಯ ಸಖತ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ,  ಈ ವರ್ಷ ಹೆಚ್ಚಿನ ಲಿಕ್ಕರ್‌ ಮಾರಾಟವಾಗಿದೆ. 
ಕಳೆದ  2024 ಡಿಸೆಂಬರ್ 29-30-31ರ ಮೂರು ದಿನಗಳ ಮದ್ಯ ಮಾರಾಟವನ್ನು ನೋಡುವುದಾದರೆ, 8.25 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿದ್ರೆ , ಬಿಯರ್ 5.03 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಬಿಯರ್ ಮತ್ತು ಐಎಂಎಲ್ ಮಾರಾಟದಿಂದ ಕಳೆದ ವರ್ಷ 420.77 ಕೋಟಿ ಆದಾಯವನ್ನು ಅಬಕಾರಿ ಇಲಾಖೆ ಗಳಿಸಿತ್ತು.
ಈ ವರ್ಷ 2025 ಡಿಸೆಂಬರ್ ತಿಂಗಳ  29, 30, .31ರ ಮೂರು ದಿನಗಳಲ್ಲಿ  ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್)  9.84 ಲಕ್ಷ ಬಾಕ್ಸ್ ವ್ಯಾಪಾರವಾಗಿದೆ.  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 1.59 ಲಕ್ಷ ಬಾಕ್ಸ್ ಐಎಂಎಲ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಈ ವರ್ಷ ಬಿಯರ್ 6.64 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 1.61. ಲಕ್ಷ ಬಾಕ್ಸ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಈ ಐಎಂಎಲ್ ಮತ್ತು ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಐಎಂಎಲ್ ಮತ್ತು ಬಿಯರ್ ವ್ಯಾಪಾರದಿಂದ  ಅಬಕಾರಿ ಇಲಾಖೆಗೆ ಹೆಚ್ಚುವರಿಯಾಗಿ 166.74 ಕೋಟಿ  ರೂಪಾಯಿ ಆದಾಯ ಬಂದಿದೆ.

Record liquor sale on the eve of new year (2)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RECORD LIQUOR SALE IN KARNATAKA LIQUOR SALE
Advertisment