/newsfirstlive-kannada/media/media_files/2025/12/03/ramanagara-protest-2025-12-03-12-02-06.jpg)
/newsfirstlive-kannada/media/media_files/2025/12/03/ramanagara-protest-1-2025-12-03-12-02-20.jpg)
ಅಹೋರಾತ್ರಿ ಧರಣಿ
ಬಿಡಿಎ ಭೂಸ್ವಾಧೀನ ವಿರೋಧಿಸಿ ಬಿಡದಿ ರೈತರ ಹೋರಾಟ ತೀವ್ರಗೊಂಡಿದೆ. ಬಿಡದಿ ಟೌನ್ಶಿಪ್ ಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ದರ ನಿಗದಿ ಹಿನ್ನೆಲೆ ರೈತರ ಕಿಚ್ಚು ಹೆಚ್ಚಾಗಿದೆ. ರೈತರ ಒಪ್ಪಿಗೆ ಪಡೆಯದೇ ದರ ನಿಗದಿ ಮಾಡಿದ್ದಾರೆಂದು ರಸ್ತೆ ತಡೆ ನಡೆಸಿ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.
/newsfirstlive-kannada/media/media_files/2025/12/03/ramanagara-protest-2-2025-12-03-12-02-40.jpg)
ರೈತರ ಕೆಂಗಣ್ಣಿಗೆ ಗುರಿ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡ್ತಿರೋ ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಗೆ ರೈತರ ವಿರೋಧ ಹೆಚ್ಚಾಗಿದೆ. ಯೋಜನೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರದ ಮಟ್ಟದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಿದ್ದಾರೆ. ಅಲ್ಲದೇ ಯೋಜನೆಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಡಿದ್ದೆದ್ದಿದ್ದು, ರೈತರಿಗೆ ಬೆಂಬಲ ನೀಡಿರೋದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದರ ನಡುವೆ ಯೋಜನೆ ವ್ಯಾಪ್ತಿಗೆ ಒಳಪಡುವ ರೈತರ ಜಮೀನಿಗೆ ಜಿಲ್ಲಾಡಳಿತ ದರ ನಿಗದಿ ಮಾಡಿರೋದು ರೈತರು ಕೆಂಗಣ್ಣಿಗೆ ಗುರಿಯಾಗಿದೆ.
/newsfirstlive-kannada/media/media_files/2025/12/03/ramanagara-protest-3-2025-12-03-12-02-57.jpg)
ಕಿಡಿ ಕಾರಿದ ರೈತರು
ಬಿಡದಿಯ ಭೈರಮಂಗಲ ಹಾಗೂ ಕಂಚುಗಾರಹಳ್ಳಿ ಗ್ರಾ.ಪಂ ವ್ಯಾಪ್ತಿಯ 9 ಗ್ರಾಮಗಳ ಸುಮಾರು 7481 ಎಕರೆಗೆ ದರ ನಿಗದಿ ಮಾಡಲಾಗಿದೆ. ಕನಿಷ್ಠ 2.7 ಕೋಟಿಯಿಂದ ಗರಿಷ್ಠ 2.55 ರೂ ಪರಿಹಾರ ಘೋಷಣೆ ಮಾಡಲಾಗಿದೆ. ರೈತರ ಒಪ್ಪಿಗೆ ಪಡೆಯದೇ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಮಾಡಲಾಗ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.
/newsfirstlive-kannada/media/media_files/2025/12/03/ramanagara-protest-4-2025-12-03-12-03-15.jpg)
ಜಿಲ್ಲಾಡಳಿತ ಯಾವುದೇ ಉತ್ತರ ಇಲ್ಲ
ರೈತರ ಜೊತೆ ಡಿಸಿ ಸಭೆ ನಡೆಸಿಲ್ಲ, ರೈತರು ಸಲ್ಲಿಸಿದ್ದ ಆಕ್ಷೇಪಣೆಗೆ ಜಿಲ್ಲಾಡಳಿತ ಯಾವುದೇ ಉತ್ತರ ನೀಡಿಲ್ಲ. ಇದರ ನಡುವೆ ಏಕಾಏಕಿ ದರ ನಿಗದಿ ಮಾಡಿರೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಮನಗರ ತಾಲೂಕಿನ ಭೈರಮಂಗಲ ಗ್ರಾಮದಲ್ಲಿ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆ ತಡೆದು ರೈತರು ಅಹೋರಾತ್ರಿ ಧರಣಿ ನಡೆಸಿದ್ದಾರೆ
/newsfirstlive-kannada/media/media_files/2025/12/03/ramanagara-protest-5-2025-12-03-12-05-53.jpg)
ಹೋರಾಟ ತೀವ್ರದ ಎಚ್ಚರಿಕೆ
ರೈತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಯಶವಂತ್ ವಿ ಗುರುಕರ್ ಬರುವಂತೆ ಪಟ್ಟು ಹಿಡಿದ ರೈತರು ಸಂಜೆಯಿಂದಲೂ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ರಸ್ತೆಯಲ್ಲೇ ಅಡುಗೆ ತಯಾರಿ ಮಾಡಿ ಊಟ ಮಾಡಿದ ರೈತರು ಸ್ಥಳಕ್ಕೆ ಡಿಸಿ ಬರಬೇಕು ಎಂದು ಆಗ್ರಹಿಸಿದ್ರು. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ತಡೆದು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ರು.
/newsfirstlive-kannada/media/media_files/2025/12/03/ramanagara-protest-6-2025-12-03-12-06-34.jpg)
ಜಟಾಪಟಿಗೆ ಕಾರಣ ಏನು?
ಬಿಡದಿ ಟೌನ್ಶಿಪ್ ಯೋಜನೆಗೆ ದಿನದಿಂದ ದಿನಕ್ಕೆ ವಿರೋಧ ಹೆಚ್ಚಾಗುತ್ತಲೇ ಇದೆ. ಈ ಯೋಜನೆಯನ್ನ ಸರ್ಕಾರ, ಡಿಸಿಎಂ ಡಿಕೆಶಿ ಪ್ರತಿಷ್ಠಿಯಾಗಿ ತೆಗೆದುಕೊಂಡಿರೋದು ಜಟಾಪಟಿಗೆ ಕಾರಣವಾಗಿದೆ. ಆದ್ರೀಗ ರೈತರ ಹೋರಾಟಕ್ಕೆ ಸರ್ಕಾರ ಮಣಿಯುತ್ತಾ? ಕಾದುನೋಡಬೇಕಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us