/newsfirstlive-kannada/media/media_files/2025/09/27/psi-2025-09-27-11-00-17.jpg)
ಧಾರವಾಡ: ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದ್ದು, ವಯೋಮಿತಿ ಸಡಿಲಿಕೆಗೆ ನಿರ್ಧರಿಸಿದೆ. ಪೊಲೀಸ್ ಕಾನ್​ಸ್ಟೇಬಲ್, ಪೊಲೀಸ್ ಸಬ್ ಇನ್​​ಸ್ಪೆಕ್ಟರ್ ಹುದ್ದೆಗಳ ವಯೋಮಿತಿ ಸಡಿಲಿಕೆಗೆ ಪ್ರಸ್ತಾವನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಯಾವ ಯಾವ ಹುದ್ದೆಗಳಲ್ಲಿ ಎಷ್ಟು ವಯೋಮಿತಿ ಸಡಿಲಿಕೆ ಮಾಡಲಾಗುವುದು ಎಂಬ ಮಾಹಿತಿ ಈ ಕೆಳಗಿನಂತಿದೆ.
ಪೊಲೀಸ್ ಕಾನಸ್ಟೇಬಲ್ ಪ್ರಸ್ತುತ ವಯೋಮಿತಿ:
- SC, ST, OBC ಗರಿಷ್ಠ ವಯೋಮಿತಿ- 27 ವರ್ಷ
- ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 25 ವರ್ಷ
ಪೊಲೀಸ್ ಕಾನ್‌ಸ್ಟೇಬಲ್ ವಯೋಮಿತಿ ಸಡಿಲಿಕೆ ಎಷ್ಟಾಗಲಿದೆ..?
- SC,ST, OBC ಗರಿಷ್ಠ ವಯೋಮಿತಿ- 30 ವರ್ಷಕ್ಕೆ ಹೆಚ್ಚಳ
- ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 28 ವರ್ಷ
PSI ಪ್ರಸ್ತುತ ವಯೋಮಿತಿ
- SC,ST, OBC ಗರಿಷ್ಠ ವಯೋಮಿತಿ- 30 ವರ್ಷ
- ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 28 ವರ್ಷ
PSI ವಯೋಮಿತಿ ಸಡಿಲಿಕೆ ಎಷ್ಟಾಗಲಿದೆ..?
- SC, ST, OBC ಅಭ್ಯರ್ಥಿಗಳ ಗರಿಷ್ಠ ವಯೋಮಿತಿ- 32 ವರ್ಷಕ್ಕೆ ಹೆಚ್ಚಳ
- ಇತರೆ ಅಭ್ಯರ್ಥಿಗಳಿಗೆ- 30 ವರ್ಷಕ್ಕೆ ಹೆಚ್ಚಳ
ಕೊನೆಗೂ ವಿದ್ಯಾರ್ಥಿಗಳ ಹೊರಾಟಕ್ಕೆ ಮಣಿದ ಸರ್ಕಾರ ವಯೋಮಿತಿ ಸಡಿಲಿಕೆಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಸಮಯ ವ್ಯರ್ಥ ಮಾಡದೆ, ಆದಷ್ಟು ಬೇಗ ಖಾಲಿ ಇರುವ ಉದ್ಯೋಗಗಳನ್ನು ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ.