/newsfirstlive-kannada/media/media_files/2025/11/06/bjp-mlc-sv-sankanura-2025-11-06-20-15-04.jpg)
ಬಿಜೆುಿ MLC ಎಸ್.ವಿ.ಸಂಕನೂರು
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಹಾಗೂ ಬೆಂಬಲಿಗರು ಗದಗ ಜಿಲ್ಲಾ ನ್ಯೂಸ್ ಫಸ್ಟ್ ವರದಿಗಾರ ಸುರೇಶ್​​ ಮೇಲೆ ಹಲ್ಲೆ ಮಾಡಿದ್ದಾರೆ.
ಸರಕಾರಿ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡಿರುವ ಆರೋಪ ಎಸ್.ವಿ.ಸಂಕನೂರ ಮೇಲಿತ್ತು. ಸರ್ಕಾರಿ ಅಧಿಕಾರಿಗಳನ್ನೇ ತಮ್ಮ ಖಾಸಗಿ ಕಚೇರಿಗೆ ಕರೆಸಿಕೊಂಡು ಹೊಸ ಮತದಾರರ ದಾಖಲೆಗಳಿಗೆ ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯುತ್ತಿದ್ದರು. ಮೂರು ನಾಲ್ಕು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಖಾಸಗಿ ಕಚೇರಿಗೆ ಕರೆಸಿಕೊಂಡು ವಿಧಾನ ಪರಿಷತ್ ಚುನಾವಣೆಗೆ ಹೊಸ ಮತದಾರರ ಹೆಸರು ಅನ್ನು ಪಟ್ಟಿಗೆ ಸೇರ್ಪಡೆಗೆ ಪ್ರಯತ್ನ ನಡೆಸುತ್ತಿದ್ದರು. ಗದಗ ನಗರದ ವಕೀಲ್ ಚಾಳ್ ದಲ್ಲಿನ ಜನಸಂಪರ್ಕ ಕಾರ್ಯಾಲಯದಲ್ಲಿ ವಿಧಾನಪರಿಷತ್ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಪ್ರಯತ್ನ ನಡೆಸುತ್ತಿದ್ದರು.
ತುರಾತುರಿಯಲ್ಲಿ ಮತದಾರರ ಹೆಸರರ ಸೇರ್ಪಡೆ ವೇಳೆ ಗೋಲ್ಮಾಲ್ ಬಗ್ಗೆ ಆರೋಪ ಕೂಡ ಇತ್ತು.
ಈ ವೇಳೆ ವರದಿ ಮಾಡಲು ನ್ಯೂಸ್ ಫಸ್ಟ್ ವರದಿಗಾರ ಸುರೇಶ್ ತೆರಳಿದ್ದಾಗ ಸುರೇಶ್ ಮೇಲೆ ಎಸ್.ವಿ.ಸಂಕನೂರು ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಚಿತ್ರೀಕರಣ ವೇಳೆ ಅಡ್ಡಿಪಡಿಸಿ ಕ್ಯಾಮರಾ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಮೈಮೇಲಿನ ಕೊರಳಪಟ್ಟಿ ಹಿಡಿದು ವರದಿಗಾರ ಸುರೇಶ್ ಮೇಲೆ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಇಂದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕೊನೆ ದಿನ ಹಿನ್ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದರು.
ನಾಳೆಯೂ ಬನ್ನಿ, ಹೊಸ ಹೆಸರು ಸೇರ್ಪಡೆ ಮಾಡಿಕೊಡ್ತೇವೆ ಎಂದು ಹೇಳಿ ಸಂಕನೂರು ಬೆಂಬಲಿಗರು ಜನರನ್ನು ಕಳಿಸುತ್ತಿದ್ದರು. ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಹೊಸದಾಗಿ ಮತದಾರ ಪಟ್ಟಿ ಎಂಎಲ್‌ಸಿ ಬೆಂಬಲಿಗರು ಮಾಡುತ್ತಿದ್ದರು. ತಮ್ಮ ಕಚೇರಿಗೆ ಅಧಿಕಾರಿಗಳನ್ನ ಕರೆಯಿಸಿ ನೋಂದಣಿ ಮಾಡುತ್ತಿದ್ದರು. ಸುಮಾರು ಒಂದು ವಾರದಿಂದ ಅಧಿಕಾರಿಗಳನ್ನು ಕಚೇರಿಗೆ ಕರೆಯಿಸಿ ಮತದಾರರ ಹೆಸರು ಅನ್ನು ವಿಧಾನ ಪರಿಷತ್ ಸದಸ್ಯ ಸಂಕನೂರು ನೋಂದಾಣಿ ಮಾಡುತ್ತಿದ್ದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us