/newsfirstlive-kannada/media/media_files/2026/02/21/chandru-lamani-2026-02-21-15-22-22.jpg)
ಗುತ್ತಿಗೆದಾರನಿಗೆ ಶಾಸಕ ಡಾ.ಚಂದ್ರು ಲಮಾಣಿ ಧಮ್ಕಿ ಆಗಿದ್ದ ಆಡಿಯೋನೇ ಸಾಕ್ಷಿ.. ಬೇಡಿಕೊಂಡ್ರೂ ಬಿಡದ ಡಾಕ್ಟರ್​​​, ಚೇಂಜ್ ಆಫ್ ವರ್ಕ್ ಮಾಡುವಂತೆ ಸೂಚನೆ ನೀಡಿದ್ರು.. ಈಗ ಜೈಲಲ್ಲೇ ಲೈಫ್​​ನ ಚೇಂಜ್​​ ಆಫ್​ ವರ್ಕ್​ ಮಾಡ್ಕೋಬೇಕು ಅಷ್ಟೆ.. ಕೋರ್ಟ್​ಗೆ ಇವತ್ತು ಜಾಮೀನು ಅರ್ಜಿ ಸಲ್ಲಿಕೆ ಆಗಿದ್ದು, 27ಕ್ಕೆ ವಿಚಾರಣೆಗೆ ಬರಲಿದೆ.. ಇನ್ನು, ಬಿಜೆಪಿ, ಟಾರ್ಗೆಟ್​​ ಬಂಜಾರ ಅಂತ ಬಿಜೆಪಿ ಜಾತಿ ಅಸ್ತ್ರ ಬಿಟ್ಟಿದೆ..
ಇದು ಬಿಜೆಪಿಯ ರಾಜಕೀಯ ನೈತಿಕತೆಗೆ ಬಿದ್ದ ಬಲುದೊಡ್ಡ ಪೆಟ್ಟು.. ಪರ್ಸೆಂಟೇಜ್​, ಕಮಿಷನ್​​ ಬಾಂಬ್​​ನ ಅಸ್ತ್ರ ಮಣ್ಣುಪಾಲಾಗಿದೆ.. ಸ್ವಪಕ್ಷದ ಶಾಸಕನೇ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಕಮಲಕ್ಕೆ ಮುಜುಗರ ತಂದಿದೆ.. ಸ್ಥಳೀಯ ಸಂಸ್ಥೆಗಳ ಚುನಾವಣೆ ಸನಿಹದಲ್ಲೇ ಹಸ್ತ ಪಕ್ಷದ ನೆತ್ತಿಯ ಮೇಲಿದ್ದ ಬ್ರಹ್ಮಾಂಡ ಭ್ರಷ್ಟಾಚಾರದ ಅಸ್ತ್ರವೊಂದು ಬಿಜೆಪಿಗೆ ಭಾರವಾಗಿಸಿದೆ..
ಶಾಸಕ ಚಂದ್ರು ಲಮಾಣಿ ಟ್ರ್ಯಾಪ್​.. ಬಿಜೆಪಿಗೆ ಮರ್ಮಾಘಾತ
ಶಾಸಕರಿಗೆ ನೊಟೀಸ್ ಕೊಡಲು ಕಮಲ ದಿಗ್ಗಜರ ತೀರ್ಮಾನ
ಇದು ಮುಜುಗರ.. ತಮ್ಮದೇ ಶಾಸಕ ಲಂಚಕ್ಕೆ ಕೈಯೊಡ್ಡಿ ರೆಡ್​ ಹ್ಯಾಂಡ್​ ಆಗಿ ಲಾಕ್​ ಆಗಿದ್ದು ಕಮಲ ಮಾನಕ್ಕೆ ಮರ್ಮಘಾತ ತಂದಿದೆ.. ಈ ಭಾರೀ ಮುಜುಗರ ತಪ್ಪಿಸಲು ರಾಜ್ಯ ಬಿಜೆಪಿ, ಇನ್ನಿಲ್ಲದ ಕಸರತ್ತು ಮಾಡ್ತಿದೆ.. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಂದೇನು ಮಾಡಬೇಕು ಅಂತ ಚರ್ಚೆ ನಡೆಸಿದ್ದಾರೆ.. ಮಾಡಿದ ಕರ್ಮಕಾಂಡಕ್ಕೆ ನೊಟೀಸ್ ಕೊಡಲು ತೀರ್ಮಾನ ಮಾಡ್ಲಾಗಿದೆ.. ಪ್ರಕರಣದ ವಿವರಣೆ ಕೇಳಿ ಶೋಕಾಸ್​​​ ನೊಟೀಸ್​ ಕೊಡಲು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ತೀರ್ಮಾನಿಸಿದ್ದಾರೆ..
ಹಣಕ್ಕಾಗಿ ಧಮಕಿ ಹಾಕಿರೋ ಆಡಿಯೋ ಬೆಳಕಿಗೆ
ಚಂದ್ರು ಲಮಾಣಿ ಮತ್ತೊಂದು ಆಡಿಯೋ ಬಯಲು
ಗುತ್ತಿಗೆದಾರನಿಗೆ ಶಾಸಕ ಡಾ.ಚಂದ್ರು ಲಮಾಣಿ ಧಮ್ಕಿ ಹಾಕಿರೋ ಆಡಿಯೋ ಒಂದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.. ಗುತ್ತಿಗೆದಾರ, ಶಾಸಕ, ಪಿಎ ನಡುವೆಯ ಸಂಭಾಷಣೆ ನಡೆದಿದೆ.. ಬೇಡಿಕೊಂಡ್ರೂ ಚೇಂಜ್ ಆಫ್ ವರ್ಕ್ ಮಾಡುವಂತೆ ಸೂಚನೆ ನೀಡಲಾಗಿದೆ.. ಟೆಂಡರ್ ನಿಲ್ಲಿಸಿ ರೀ-ಟೆಂಡರ್ ಮಾಡುವಂತೆ ಪಿಎಗೆ ಸೂಚನೆ ನೀಡಿದ ಆಡಿಯೋ ಕಮಿಷನ್​ ಕಥೆ ಬಿಚ್ಚಿಡ್ತಿದೆ..
ಜಾಮೀನಿ​ಗಾಗಿ ಕೋರ್ಟ್ ಮೊರೆ ಹೋದ ಚಂದ್ರು ಲಮಾಣಿ
ಫೆಬ್ರವರಿ 27ಕ್ಕೆ ಮುಂದೂಡಿದ ಜನಪ್ರತಿನಿಧಿಗಳ ಕೋರ್ಟ್
ಜೈಲು ಪಾಲಾದ ಶಾಸಕ ಚಂದ್ರು ಲಮಾಣಿ, ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಸಲ್ಲಿಕೆಯಾದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಎಸ್‌ಪಿಪಿಗೆ ಕೋರ್ಟ್ ಸೂಚನೆ ನೀಡಿದೆ.. ಕೇಸ್​ನಲ್ಲಿ ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದು, ಫೆಬ್ರುವರಿ 27ಕ್ಕೆ ಅರ್ಜಿ ಮುಂದೂಡಿಕೆ ಆಗಿದ್ದು, ಆವತ್ತು ಜೈಲಾ ಬೇಲಾ? ನಿರ್ಧಾರ ಆಗಲಿದೆ..
ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಸಮುದಾಯದ ಟಾರ್ಗೆಟ್​
ವಾಲ್ಮೀಕಿ ನಿಗಮ ಹಗ್ರಣ ಪ್ರಸ್ತಾಪಿಸಿ ವಿಜಯೇಂದ್ರ ವಾಗ್ದಾಳಿ!
ಪ್ರಕರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಮುದಾಯದ ಲಿಂಕ್​​ ಬೆಸೆದಿದ್ದಾರೆ.. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜ ಟಾರ್ಗೆಟ್ ಆಗ್ತಿದೆ ಅಂತ ವಾಗ್ದಾಳಿ ನಡೆಸಿದ್ದಾರೆ.. ಇತ್ತ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ವಿದ್ಯಾವಂತ ಲಮಾಣಿ ವಿರುದ್ಧದ ಪಿತೂರಿ ಅಂತ ಕಿಡಿಕಾರಿದ್ದಾರೆ.. ಆದ್ರೆ, ಗೃಹ ಸಚಿವ ಪರಮೇಶ್ವರ್​ ಬಿಜೆಪಿ ಆರೋಪವನ್ನ ತಳ್ಳಿಹಾಕಿದ್ದಾರೆ..
ಒಟ್ಟಾರೆ, ಬಿಜೆಪಿ ಶಾಸಕ ಚಂದ್ರು ಲಮಾಣಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದ್ಯೋ ಇಲ್ವೋ ಗೊತ್ತಿಲ್ಲ.. ಆದ್ರೆ, ಲಂಚ ಪಡೆಯೋವಾಗ ಸಿಕ್ಕಿದ್ದಂತೂ ರಾಜ್ಯದ ಜನರೇ ನೋಡಿದ್ದಾರೆ.. ಭ್ರಷ್ಟಾಚಾರದ ಬಗ್ಗೆ ಪಾಠ ಮಾಡುವ ಬಿಜೆಪಿ ಈ ಬೆಳವಣಿಗೆಯಿಂದ ಪಾಸ್​​​ ಆಗಲು ಸಂಧಿಗಳ ಅನ್ವೇಷಣೆಯಲ್ಲಿದೆ..
ನ್ಯೂಸ್​ಫಸ್ಟ್​ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us