/newsfirstlive-kannada/media/media_files/2026/01/12/gadaga-nidhi-5-2026-01-12-13-04-34.jpg)
ಸರ್ಕಾರಕ್ಕೆ ನಿಧಿ ಕೊಟ್ಟ ಕುಟುಂಬಕ್ಕೆ ಈಗ ಆತಂಕ!
ಗದಗ್ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಿಸಲು ಪಾಯ ತೆಗೆಯುತ್ತಿದ್ದಾಗ ಸಿಕ್ಕ ನಿಧಿಯನ್ನು ಗಂಗವ್ವ ರಿತ್ತಿ ಮತ್ತು ಪುತ್ರ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಆದರೇ, ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ. ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಗಂಗವ್ವ ರಿತ್ತಿ ಮತ್ತು ಪ್ರಜ್ವಲ್ ತಮ್ಮ ಮನಸ್ಸಿನಲ್ಲಿರುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಿಧಿ ಸಿಕ್ಕಬಳಿಕ ಇಂದಿಗೂ ನೆಮ್ಮದಿ ಇಲ್ಲ. ಏನಾಗುತ್ತೋ ಏನೋ ಎಂಬ ಭಯದಲ್ಲಿ ಕುಟುಂಬ ಇದೆ. ಕೇಡಾಗುತ್ತೆ ಎಂಬ ಆತಂಕದಿಂದ ನಿಧಿ ಸರಕಾರಕ್ಕೆ ಕೊಟ್ಟೆವು ಎಂದು ಗಂಗವ್ವ ರಿತ್ತಿ ಮತ್ತು ಪ್ರಜ್ವಲ್ ರಿತ್ತಿ ಹೇಳಿದ್ದಾರೆ. ನಿಧಿ ಸಿಕ್ಕ ಸಾಕಷ್ಟು ಕುಟುಂಬಗಳು ನಾಶ ಆಗಿವೆ. ಹೀಗಾಗಿ ತಾಯಿ ಮಗ ಇಬ್ಬರೇ ಇರೋದ್ರಿಂದ ಕೆಡಕಾಗಬಾರದು ಎಂದು ಕಣ್ಣೀರು ಹಾಕಿದ್ದಾರೆ. ಹೀಗಾಗಿ ಆ ಜಾಗವೂ ಬೇಡ, ಆ ನಿಧಿಯೂ ಬೇಡ ಅಂತ ಸರಕಾರಕ್ಕೆ ಕೊಟ್ಟೆವು ಎಂದು ಕಣ್ಣೀರು ಹಾಕಿದ್ದಾರೆ. ಗಂಗವ್ವ ರಿತ್ತಿ ಹಾಗು ಮಗ ಪ್ರಜ್ವಲ್ ರಿತ್ತಿ ಸಂಬಂಧಿಕರು ಕೂಡ ಇದೇ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ನಿಧಿ ಸಿಕ್ಕು 8 ದಿನಗಳಾದರೂ ಸರಕಾರ ಕೊಟ್ಟ ಭರವಸೆ ಈಡೇರಿಸಿಲ್ಲ . ಮನೆ, ಉದ್ಯೋಗದ ಭರವಸೆ ಈಡೇರಿಸಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಜ್ಯ ಸರಕಾರದ ಮೇಲೆ ನಂಬಿಕೆಯನ್ನೇ ಈ ಕುಟುಂಬ ಕಳೆದುಕೊಂಡಿದೆ. ಎಲ್ಲರೂ ಕೇವಲ ಹುಸಿಭರವಸೆ ನೀಡುತ್ತಿದ್ದಾರೆ. ನಮಗೆ ಯಾವುದೇ ಅಧಿಕೃತ ಭರವಸೆ ಸಿಕ್ಕಿಲ್ಲ. ಬೇರೆ ಕಡೆ ಮನೆ ಕಟ್ಟಿಸಿಕೊಡಿ ಅಂತ ಮನವಿ ಮಾಡಿದ್ದೇವೆ . ಮನೆ ಕಟ್ಟುವ ನಮ್ಮ ಕನಸು ಅರ್ಧಕ್ಕೆ ನಿಂತಿದೆ. ಮನೆ ಕಟ್ಟಲು ತಂದಿದ್ದ ಮರಳು ಕಲ್ಲುಗಳು ಹಾಳಾಗಿ ಹೋಗುತ್ತಿವೆ. ಮನೆನೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ. ನಡುಬೀದಿಯಲ್ಲಿ ಬದುಕು ನಿಂತಿದೆ ಎಂದು ತಾಯಿ ಗಂಗವ್ವ ರಿತ್ತಿ ಕಣ್ಣೀರು ಹಾಕಿದ್ದಾರೆ.
/filters:format(webp)/newsfirstlive-kannada/media/media_files/2026/01/17/gadag-lakkundi-gangavva-ritti-2026-01-17-18-47-34.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us