/newsfirstlive-kannada/media/media_files/2026/01/12/gadaga-nidhi-7-2026-01-12-13-26-20.jpg)
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಗುಪ್ತನಿಧಿ ಈಗ ಅದು ಯಾರಿಗೆ ಸೇರುತ್ತೆ? ಅದ್ರ ವಾರಸುದಾರರು ಯಾರಾಗಿರ್ತಾರೆ ಅನ್ನೋ ಚರ್ಚೆ ಇದೆ. ಸಿಕ್ಕ ನಿಧಿಯನ್ನ ರಿತ್ತಿ ಕುಟುಂಬ ವಾಪಸ್​ ಕೊಟ್ರೂ ಸಹ.. ಆ ನಿಧಿ ಬಗ್ಗೆ ಚರ್ಚೆ ಆಗೇ ಆಗುತ್ತೆ.. ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಆ ಚಿನ್ನಾಭಾರಣ ಸೇರ್ಬೇಕು? ಅನ್ನೋದು ಕಾನೂನಿನಲ್ಲಿ ಉಲ್ಲೇಖ ಇದೆ.
/filters:format(webp)/newsfirstlive-kannada/media/media_files/2026/01/12/gadaga-nidhi-6-2026-01-12-13-26-36.jpg)
ಚಿನ್ನದ ಕೊಡ ಯಾರಿಗೆ?
ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. ಆದ್ರೆ ಆ ನಿಧಿ ಸರ್ಕಾರದ ಸ್ವತ್ತಾದ್ರೂ ಕಂಡಿಷನ್ಸ್​ ಅಪ್ಲೈ ಆಗುತ್ತೆ. ಕಾಯ್ದೆ ಪ್ರಕಾರ ನಿಧಿ ಇದ್ದ ಜಾಗದ ಮಾಲೀಕರಿಗೂ ಐದನೇ ಒಂದು ಭಾಗ ಕೊಡ್ಬೆಕಾಗುತ್ತಂತೆ. ಹಾಗೆ ನಿಧಿ ಪತ್ತೆ ಹಚ್ಚಿದವ್ರಿಗೂ ನಿಧಿಯ ಮೌಲ್ಯ ಎಷ್ಟಿರುತ್ತೋ ಅದ್ರ ಒಂದು ಭಾಗ ಪಾಲು ಕೊಡ್ಬೆಕಾಗುತ್ತೆ. ಈಗ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಪತ್ತೆ ಹಚ್ಚಿದ್ದು ಪ್ರಜ್ವಲ್​ ಅನ್ನೋ ಹುಡುಗ. ನಿಧಿ ಕಾಯ್ದೆ ಪ್ರಕಾರ.. ಇಡೀ ರಿತ್ತಿ ಕುಟುಂಬಕ್ಕೆ, ಪ್ರಜ್ವಲ್​ಗೂ ನಿಧಿಯಲ್ಲಿ ಪಾಲು ಸಿಗ್ಬೇಕು ಅಂತ ಹೇಳಲಾಗ್ತಿದೆ.
ಸದ್ಯಕ್ಕೆ ನಿಧಿ ಜಿಲ್ಲಾಡಳಿತ ಖಜಾನೆಗೆ ಸೇರಿದೆ. ಪ್ರಾಮಾಣಿಕವಾಗಿ ಪೂರ್ತಿ ನಿಧಿಯನ್ನ ಸರ್ಕಾರಕ್ಕೆ ಕೊಡಲು ಮುಂದೆ ಬಂದಿದ್ದ ರಿತ್ತಿ ಕುಟುಂಬವನ್ನ ಅಧಿಕಾರಿಗಳೆಲ್ಲಾ ಮೆಚ್ಚಿಕೊಂಡಿದಾರೆ. ಸನ್ಮಾನಿಸಿ.. ಅವ್ರಿಗೆ ಸೇರಬೇಕಾದ ಮೌಲ್ಯವನ್ನ ಸೇರಿಸಲು ಒಪ್ಪಿದಾರೆ.
ಇದನ್ನೂ ಓದಿ: ತನ್ನನ್ನು ತಾನೇ ವೆನಿಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಡೋನಾಲ್ಡ್ ಟ್ರಂಪ್!! ಮತ್ತೊಂದು ಟ್ರಂಪ್ ಹುಚ್ಚಾಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us