ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂಡಿ ಮೇಲೆ ಒಂದು ಪ್ರಕರಣ ದಾಖಲು ಆಗಿತ್ತು. ಈ ಕೇಸ್ ಆಗಿರುವುದು ಧರ್ಮಸ್ಥಳಕ್ಕೆ ಅಪಪ್ರಚಾರ ಆಗಿದೆ ಎಂದು ದಾಖಲು ಆಗಿಲ್ಲ. ಧರ್ಮಸ್ಥಳಕ್ಕೆ ಅಪಪ್ರಚಾರ ಆಗಿದೆ ಎಂದು ಯಾವುದೇ ಕೇಸ್ ಆಗಿಲ್ಲ. ಬೆಳ್ತಂಗಡಿ ಪೊಲೀಸರು ಚಾಟುಗಳು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅದನ್ನು ವೈಯಕ್ತಿವಾಗಿ ತೆಗೆದುಕೊಂಡು ಅದಕ್ಕೆ ಸುಮೋಟೋ ಕೇಸ್ ಹಾಕಿ ಇಷ್ಟು ದೊಡ್ಡ ತನಿಖೆ ಮಾಡಲಾಗುತ್ತಿದೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಪ್ರಕರಣ ದಾಖಲು ಆದ ಮೇಲೆ ಸ್ಥಳ ಮಹಜರುಗೆ ಬಂದಿದ್ದರು. ಎಫ್ಎಸ್ಎಲ್ ಅಧಿಕಾರಿಗಳು ಬಂದು ಎಲ್ಲವನ್ನು ಸ್ಪಷ್ಟವಾಗಿ ಮಾಡಿದ್ದಾರೆ. 13 ವರ್ಷದ ಹಿಂದೆ ಆನೆ ಮಾವುತ ಪ್ರಕರಣ ಆದಾಗ ಎರಡು ಜೀವ ಹೋಗಿದೆ. ಆ ಸಮಯದಲ್ಲಿ ಎಫ್ಎಸ್ಎಲ್ ಸಿಬ್ಬಂದಿ ಅಲ್ಲಿಗೆ ಬರಲಿಲ್ಲ. ಫಿಂಗರ್ ಫ್ರಿಂಟ್ ತೆಗೆದುಕೊಳ್ಳಲಿಲ್ಲ. ಸೌಜನ್ಯ ದೇಹ ಬಿದ್ದಾಗ ಕೂಡ ಯಾವುದೇ ಫಿಂಗರ್ ಫ್ರಿಂಟ್ ತೆಗೆದುಕೊಂಡಿಲ್ಲ. ಆದರೆ ಈಗ ಫೇಕ್ ಕೇಸ್ ಹಾಕಿ, ಅದನ್ನು ಪಂಚನಾಮೆ ಮಾಡಲು ಎಫ್ಎಸ್ಎಲ್ ತಂಡ ಬಂದಿದೆ. ಇದನ್ನೇ ಆನೆ ಮಾವುತನ ಕೇಸ್ನಲ್ಲಿ 13 ವರ್ಷದ ಹಿಂದೆ ಮಾಡಿದ್ರೇ ಇದೆಲ್ಲ ಇರುತ್ತಿತ್ತಾ?. ಅದಕ್ಕೆ ಬೇಸರ ಆಗಿದೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ