Advertisment

ಡಿಗ್ರಿ ಸ್ಟೂಡೆಂಟ್ಸ್​ಗೆ ಗುಡ್ ನ್ಯೂಸ್.. ಪ್ರಥಮ ದರ್ಜೆ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು ವಿವಿಯ ಸೆಮಿಸ್ಟರ್ ಅವಧಿ ಜುಲೈ 11 ರಿಂದ ಅಕ್ಟೋಬರ್ 25ರ ತನಕವಿದ್ದು ನವೆಂಬರ್ 29ರ ತನಕ ವಿಸ್ತರಣೆಗೊಂಡಿದೆ. ಗುಲ್ಬರ್ಗಾ ವಿವಿಯ ಸೆಮಿಸ್ಟರ್ ಅವಧಿ ಜುಲೈ 16 ರಿಂದ ಅಕ್ಟೋಬರ್ 28ರ ತನಕವಿದ್ದು ನವೆಂಬರ್ 29ರವರೆಗೆ ವಿಸ್ತರಣೆಗೊಂಡಿದೆ.

author-image
Bhimappa
mc_sudhakar
Advertisment

ಬೆಂಗಳೂರು: ಅತಿಥಿ ಉಪನ್ಯಾಾಸಕರ ನೇಮಕಾತಿ ವಿಳಂಬದಿಂದಾಗಿ ಪಠ್ಯ ಚಟುವಟಿಕೆಗಳಲ್ಲಿ ಆಗಿರುವ ಹಿನ್ನಡೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಪರಿಷ್ಕರಿಸಿದೆ. ಎಲ್ಲ ಕಾಲೇಜು ಹಾಗೂ ವಿವಿಗಳಿಗೆ ಪಠ್ಯ ಚಟುವಟಿಕೆ ಪೂರ್ಣಗೊಳಿಸಲು ಹೆಚ್ಚು ಕಡಿಮೆ 1 ತಿಂಗಳ ವಿಸ್ತರಿತ ಅವಧಿ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸಿಗಲಿದೆ.

Advertisment

ಇದೀಗ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯು 25 ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು ರಾಜ್ಯದಲ್ಲಿರುವ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 3.2 ಲಕ್ಷ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ.

ಪರಿಷ್ಕೃತ ವೇಳಾಪಟ್ಟಿಯು ಒಂದು ವಿವಿಯಿಂದ ಇನ್ನೊಂದು ವಿವಿಗೆ ಭಿನ್ನವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಅವಧಿ ಜು.30 ರಿಂದ ಅ.23ರ ವರೆಗೆ ಇತ್ತು. ಇದನ್ನು ನವೆಂಬರ್​ 22ವರೆಗೆ ವಿಸ್ತರಿಸಿದೆ. ಮಂಗಳೂರು ವಿವಿಯ ಸೆಮಿಸ್ಟರ್ ಅವಧಿ ಜುಲೈ 28 ರಿಂದ ನವೆಂಬರ್ 20ರ ತನಕ ನಿಗದಿಯಾಗಿದ್ದು ಇದೀಗ ಡಿಸೆಂಬರ್ 20ರವರೆಗೆ ವಿಸ್ತರಣೆಗೊಂಡಿದೆ. ಬೆಂಗಳೂರು ವಿವಿಯ ಸೆಮಿಸ್ಟರ್ ಅವಧಿ ಜುಲೈ 11 ರಿಂದ ಅಕ್ಟೋಬರ್ 25ರ ತನಕವಿದ್ದು ನವೆಂಬರ್ 29ರ ತನಕ ವಿಸ್ತರಣೆಗೊಂಡಿದೆ. 

ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರವಾಹ; CM ವೈಮಾನಿಕ ಸಮೀಕ್ಷೆ ಬಳಿಕ ಮಹತ್ವದ ಸಭೆ.. ಚರ್ಚೆ ಆಗಿದ್ದು ಏನೇನು?

Advertisment

ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಹುದ್ದೆಗಳು.. ಕೂಡಲೇ ಅರ್ಜಿ ಸಲ್ಲಿಸಿ

ಗುಲ್ಬರ್ಗಾ ವಿವಿಯ ಸೆಮಿಸ್ಟರ್ ಅವಧಿ ಜುಲೈ 16 ರಿಂದ ಅಕ್ಟೋಬರ್ 28ರ ತನಕವಿದ್ದು ನವೆಂಬರ್ 29ರವರೆಗೆ ವಿಸ್ತರಣೆಗೊಂಡಿದೆ. ಕರ್ನಾಟಕ ವಿವಿದ್ದು 2026ರ ಜನವರಿ 3, ಬೆಂಗಳೂರು ನಗರ ವಿವಿದ್ದು ನವೆಂಬರ್ 20ರತನ ವಿಸ್ತರಣೆಯಾಗಿದೆ. ತುಮಕೂರು ವಿವಿಯ ಸೆಮಿಸ್ಟರ್ 2026 ಜ.10ರವರೆಗೆ ವಿಸ್ತರಣೆಯಾಗಿದ್ದು ಅಲ್ಲಿಗೆ ರಾಜ್ಯದ ಎಲ್ಲ ಸರ್ಕಾರಿ ವಿವಿಗಳ ಶೈಕ್ಷಣಿಕ ವರ್ಷದ ಮೊದಲ (ಬೆಸ ಸಂಖ್ಯೆಯ) ಸೆಮಿಸ್ಟರ್ ಮುಕ್ತಾಯಗೊಳ್ಳಲಿದೆ.

ಅತಿಥಿ ಉಪನ್ಯಾಸಕರ ನೇಮಕವಾಗದೆ 1 ತಿಂಗಳ ಪಠ್ಯ ಚಟುವಟಿಕೆ ಅಸ್ತವ್ಯಸ್ತಗೊಂಡಿದ್ದ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ವಿಸ್ತರಣೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಅಯುಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ವಿದ್ಯಾರ್ಥಿ ಸಂಘಟನೆಗಳು ಸಹ ಈ ಬಗ್ಗೆೆ ಒತ್ತಾಯಿಸಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BANKING JOBS, Bangalore Karnataka Govt
Advertisment
Advertisment
Advertisment