Advertisment

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್.. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್..!

ಗೃಹಲಕ್ಷ್ಮೀಯರಿಗೆ ಕರ್ನಾಟಕ ಸರ್ಕಾರ ಗುಡ್​ನ್ಯೂಸ್ ನೀಡಿದೆ. ಮಹಿಳೆಯರಿಗೆ ವೈಯಕ್ತಿಕ ಸಾಲ (personal loan) ಸೌಲಭ್ಯ ನೀಡಲು ಮುಂದಾಗಿದೆ. ಸದ್ಯಕ್ಕೆ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ಸಿಗಲಿದ್ದು, ಮುಂದಿನ ದಿನಗಳಲ್ಲಿ ಈ ಲೋನ್ ಮೊತ್ತ 6 ಲಕ್ಷಕ್ಕೆ ಹೆಚ್ಚಿಸುವ ಪ್ಲಾನ್ ಇದೆ.

author-image
Ganesh Kerekuli
gruhalakshmi
Advertisment

ಬೆಂಗಳೂರು:  ಗೃಹಲಕ್ಷ್ಮೀಯರಿಗೆ ಕರ್ನಾಟಕ ಸರ್ಕಾರ ಗುಡ್​ನ್ಯೂಸ್ ನೀಡಿದೆ. ಮಹಿಳೆಯರಿಗೆ ವೈಯಕ್ತಿಕ ಸಾಲ (personal loan) ಸೌಲಭ್ಯ ನೀಡಲು ಮುಂದಾಗಿದೆ. ಸದ್ಯಕ್ಕೆ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ಸಿಗಲಿದ್ದು, ಮುಂದಿನ ದಿನಗಳಲ್ಲಿ ಈ ಲೋನ್ ಮೊತ್ತ 6 ಲಕ್ಷಕ್ಕೆ ಹೆಚ್ಚಿಸುವ ಪ್ಲಾನ್ ಇದೆ.  

Advertisment

ನೋಂದಣಿ ಮಾಡಿಕೊಂಡರೆ ಲೋನ್..! 

ಮುಂದಿನ ಆರು ತಿಂಗಳಲ್ಲಿ ಪಂಚಾಯ್ತಿ ಲೆವೆಲ್​ನಲ್ಲಿ ಗೃಹಲಕ್ಷ್ಮಿ ಸಹಕಾರಿ ಸಂಘ ಇರಲಿದೆ. ಅದರಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳಬೇಕು. ಈ ಸಂಘಕ್ಕೆ ಒಂದು ಸಾವಿರ ಕೊಟ್ಟು ನೋಂದಣಿ ಮಾಡಿಸಿಕೊಂಡು ಸದಸ್ಯರಾಗಬೇಕು. ಅದಾದ ಬಳಿಕ ಪ್ರತಿ ತಿಂಗಳು 200 ರೂಪಾಯಿ ಕಟ್ಟಬೇಕು. ಅಗತ್ಯ ಬಿದ್ದರೆ ಈ ಸಂಘದ ಮೂಲಕ 30 ಸಾವಿರದಿಂದ 3 ಲಕ್ಷದ ವರೆಗೆ ವೈಯಕ್ತಿಕ ಸಾಲ ನೀಡಲು ನಿರ್ಧರಿಸಲಾಗಿದೆ. 

ಈ ಯೋಜನೆಯು ಮುಂದಿನ ಆರು ತಿಂಗಳಲ್ಲಿ ಜಾರಿಗೆ ಬರಲಿದೆ. ಈ ಸೌಲಭ್ಯಕ್ಕೆ 30 ದಿನದಿಂದ 60 ದಿನದವರೆಗೂ ಸಮಯದ ಇರಲಿದೆ. ಅಷ್ಟರೊಳಗೆ ಅರ್ಜಿ ಸಲ್ಲಿಸಿದ್ರೆ ಮಾತ್ರ ಸೌಲಭ್ಯ ಸಿಗಲಿದೆ. ರಾಷ್ಟ್ರಿಕೃತ ಬ್ಯಾಂಕ್​ಗಳ ಬಡ್ಡಿ ಅನ್ವಯದಲ್ಲಿ ಸಾಲ ಸೌಲಭ್ಯ ಸಿಗಲಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gruhalaxmi scheme Personal loan
Advertisment
Advertisment
Advertisment