ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್‌ : ಪ್ರೀಮಿಯಂ ಬಸ್ ಟಿಕೆಟ್ ದರ ಶೇ.10 ರಿಂದ ಶೇ.15 ರವರೆಗೂ ಇಳಿಕೆ!!

ಎಲ್ಲ ಬೆಲೆಗಳು ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಪ್ರೀಮಿಯಂ ಬಸ್ ಟಿಕೆಟ್ ದರವನ್ನು ಶೇ.10 ರಿಂದ ಶೇ.15 ರವರೆಗೂ ಕಡಿಮೆ ಮಾಡಿದೆ. ರಾಜಹಂಸ, ಐರಾವತ, ಐರಾವತ್ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ , ಎಸಿ ನಾನ್ ಸ್ಲೀಪರ್ ಬಸ್ ಟಿಕೆಟ್ ದರ ಕಡಿತ ಮಾಡಿದೆ.

author-image
Chandramohan
KSRTCಯಿಂದ ಗುಡ್ ನ್ಯೂಸ್; ಮಹಾಶಿವರಾತ್ರಿ ಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಹೋಗೋರಿಗೆ ಮಾತ್ರ ಇದು ​
Advertisment


ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆಯ ಜಮಾನ ಇದು. ಇದರ ಮಧ್ಯೆಯೇ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಇಳಿಕೆ ಮಾಡಿದೆ. ಈ ಮೂಲಕ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. 
ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ  ಬಸ್ ಪ್ರಯಾಣಿಕರಿಗೆ ರಿಲೀಫ್  ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಬಸ್  ಟಿಕೆಟ್ ದರ ಇಳಿಕೆ ಮಾಡಿದೆ. ಜನವರಿ 5 ರಿಂದ ಮಾರ್ಚ್ ವರೆಗೂ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ  ಹಿನ್ನಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಹೋಗುವ ಪ್ರೀಮಿಯರ್ ಬಸ್ ಗಳ ಟಿಕೆಟ್ ದರವನ್ನು ಶೇ.10 ರಿಂದ ಶೇ.15 ರವರೆಗೆ ಕಡಿತ ಮಾಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಈ ಬಗ್ಗೆ  ಅಧಿಕೃತ ಪ್ರಕಟಣೆ ಹೊರಡಿಸಿದೆ. 
ರಾಜ್ಯದಲ್ಲಿ  ಜನವರಿ 5ರಿಂದ ಮಾರ್ಚ್ ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತೆ. ಕ್ರಿಸ್ಮಸ್ ರಜೆ ಮುಗಿದಿರುತ್ತೆ. ಶಾಲಾ ಕಾಲೇಜುಗಳು ನಡೆಯುತ್ತಿರುತ್ತಾವೆ. ಶಾಲಾ ಕಾಲೇಜುಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಇರುತ್ತಾವೆ. ಹೀಗಾಗಿ ಪೋಷಕರು ಕೂಡ ಹೊರಗಡೆ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯಲ್ಲ. ಬಸ್ ಸೀಟುಗಳು ಖಾಲಿ ಇರುತ್ತಾವೆ. ಹೀಗಾಗಿ ಖಾಸಗಿ ಬಸ್ ಗಳಿಂದ ಪ್ರಯಾಣಿಕರನ್ನು ಕೆಎಸ್‌ಆರ್‌ಟಿಸಿ ಬಸ್ ನತ್ತ ಸೆಳೆಯಲು ಕೆಎಸ್‌ಆರ್‌ಟಿಸಿ ಶೇ.15 ರವರೆಗೂ ಬಸ್ ಟಿಕೆಟ್ ದರವನ್ನು ಇಳಿಸುವ ತೀರ್ಮಾನ ಕೈಗೊಂಡಿದೆ. 
ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಹಾಗೂ ಅಂತರರಾಜ್ಯಕ್ಕೆ ತೆರಳುವ ಪ್ರೀಮಿಯರ್ ಬಸ್ ಗಳ ಟಿಕೆಟ್ ದರ 10-15% ಕಡಿತ ಮಾಡಿದೆ.  ಜೊತೆಗೆ ಬೆಂಗಳೂರು ಏರ್ ಪೋರ್ಟ್ ಫ್ಲೈ ಬಸ್ ಗಳ ದರವೂ ಇಳಿಕೆ ಮಾಡಿದೆ.  ರಾಜಹಂಸ, ನಾನ್ ಎಸಿ ಸ್ಲೀಪರ್ ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರದಲ್ಲಿ  ರಿಯಾಯಿತಿ ನೀಡಲಾಗಿದೆ. 
ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ರಿಯಾಯಿತಿ ಅನ್ವಯವಾಗಲಿದೆ. 

KSRTC BUS FARE REDUCED (1)





ರಿಯಾಯಿತಿ ದೊರೆಯುವ ಪ್ರಮುಖ ಮಾರ್ಗಗಳು

➡️ ಬೆಂಗಳೂರು – ಮಂಗಳೂರು
➡️ ಉಡುಪಿ
➡️ ಧರ್ಮಸ್ಥಳ
➡️ ಕುಕ್ಕೆ ಸುಬ್ರಹ್ಮಣ್ಯ
➡️ ಮಡಿಕೇರಿ / ವಿರಾಜಪೇಟೆ
➡️ ಶಿವಮೊಗ್ಗ
➡️ ಚೆನ್ನೈ
➡️ ಹೈದರಾಬಾದ್
➡️ ತಿರುಪತಿ
➡️ ಕೊಯಮತ್ತೂರು
➡️ ತ್ರಿಶೂರು ಸೇರಿದಂತೆ ಇನ್ನಿತರ ಮಾರ್ಗಗಳು


ಬೆಂಗಳೂರು ಟು ದಾವಣಗೆರೆ

ಐರಾವತ 2.0. ಹಳೆ ದರ 740₹, ಹೊಸ ದರ 700₹

ಐರಾವತ ಕ್ಲಬ್ ಕ್ಲಾಸ್ ಹಳೆ ದರ 770₹, ಹೊಸ ದರ 675₹

ಇವಿ ಪವರ್ ಬಸ್ ಹಳೆ ದರ 720₹, ಹೊಸ ದರ 620₹

ಬೆಂಗಳೂರು ಟು ಉಡುಪಿ, ಮಣಿಪಾಲ್

ಅಂಬಾರಿ ಉತ್ಸವ ಹಳೆ ದರ 1620₹ ಹೊಸ ದರ 1450₹

ಐರಾವತ 2.0. ಹಳೆ ದರ 1440₹, ಹೊಸ ದರ 1260₹

ಐರಾವತ ಕ್ಲಬ್ ಕ್ಲಾಸ್ ಹಳೆ ದರ 1270₹, ಹೊಸ ದರ 1060₹


ಬೆಂಗಳೂರು ಟು ಮುರುಡೇಶ್ವರ

ಅಂಬಾರಿ ಉತ್ಸವ ಹಳೆ ದರ 1900₹ ಹೊಸ ದರ 1700₹

ಅಂಬಾರಿ ಡ್ರೀಮ್ ಹಳೆ ದರ 1800₹ ಹೊಸ ದರ 1500₹

ಬೆಂಗಳೂರು ಟು ಮುಂಬೈ ಹಳೆ ದರ 2500₹ ಹೊಸ ದರ 2000₹

ಬೆಂಗಳೂರು ಟು ಶಿರಡಿ ಹಳೆ ದರ 2500₹ ಹೊಸ ದರ 2000₹

ಬೆಂಗಳೂರು ಟು ಪುಣೆ ಹಳೆ ದರ 2300₹  ಹೊಸ ದರ 1700₹

KSRTC BUS FARE REDUCED




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC BUS FARE REDUCED
Advertisment