/newsfirstlive-kannada/media/media_files/2025/08/04/ksrtc-2025-08-04-17-59-20.jpg)
ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ವ್ಯವಸ್ಥೆ
KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 17 ರಿಂದ 20 ರವರೆಗೆ ರಾಜ್ಯಾದ್ಯಂತ ಹೆಚ್ಚುವರಿ ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ಸಂಚಾರ ಮಾಡಲಿವೆ. KSRTC ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್ ಗಳು ಪ್ರಯಾಣಿಕರ ಸೌಲಭ್ಯಕ್ಕಾಗಿ ಲಭ್ಯ ಇವೆ. ಹಬ್ಬಕ್ಕಾಗಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ KSRTC ಈ ಕ್ರಮ ತೆಗೆದುಕೊಂಡಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಸೇವೆಯನ್ನು KSRTC ಕಲ್ಪಿಸುತ್ತಿದೆ. ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯ ಬಸ್ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ಮಾಡಲಿವೆ.
ಹಬ್ಬ ಮುಗಿದ ಬಳಿಕವೂ ವಿಶೇಷ ಬಸ್ ಗಳ ಕಾರ್ಯಾಚರಣೆ ಮುಂದುವರಿಯಲಿದೆ. ಸೆಪ್ಟೆಂಬರ್ 22 ಹಾಗೂ 26 ರಂದು ವಾಪಸ್ ಬರುವ ಪ್ರಯಾಣಿಕರಿಗೂ KSRTC ಸೇವೆ ಲಭ್ಯವಿದೆ. ರಾಜ್ಯ ಹಾಗೂ ಅಂತರ್ ರಾಜ್ಯದಿಂದಲೂ KSRTC ಬಸ್ ಗಳು ಲಭ್ಯ ಇವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ಹೊರಡಿಸಿದೆ.
ಎಲ್ಲಿಂದ ಎಲ್ಲಿಗೆ
1.ಮೆಜೆಸ್ಟಿಕ್
ಮೆಜೆಸ್ಟಿಕ್ to ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗ
ಮೆಜೆಸ್ಟಿಕ್ to ಉತ್ತರ ಕರ್ನಾಟಕದ ಹುಬ್ಬಳಿ,ಬೆಳಗಾವಿ, ದಾರವಾಡ, ವಿಜಯಪುರ,ಯಾದಗಿರಿ ಸೇರಿ ಇತರೆಡೆ
ಮೆಜೆಸ್ಟಿಕ್ To ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೆ ಬಸ್ ಗಳು ಲಭ್ಯ
2.ಸ್ಯಾಟಲೈಟ್ ಬಸ್ ನಿಲ್ದಾಣ
ಮೈಸೂರು ಭಾಗದ ಎಲ್ಲಾ ಕಡೆ ಬಸ್ ಗಳ ಕಾರ್ಯಾಚರಣೆ
ಮಂಡ್ಯ,ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು,ವೀರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ ಗಳು ಲಭ್ಯಇವೆ.
3. ಶಾಂತಿನಗರ ಬಸ್ ನಿಲ್ದಾಣ
ತಮಿಳುಳುನಾಡು ಮತ್ತು ಕೇರಳ ಕಡೆಗೆ
ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ,
ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್ ಗಳು ಲಭ್ಯ
ಪ್ರಯಾಣಿಕರು ಮುಂಚಿತವಾಗಿ ಸೀಟ್ ಬುಕ್ ಮಾಡಿದ್ರೆ 5% ರಿಯಾಯ್ತಿ ಆಫರ್ ಕೂಡ ಇದೆ.
ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದ್ರೆ 10% ರಿಯಾಯಿತಿ ಆಫರ್ ಕೂಡ ಇದೆ.
www.ksrtc.Karnataka.gov.in ವೆಬ್ ಸೈಟ್ ನಲ್ಲಿ ಬಸ್ ಬುಕ್ ಮಾಡಲು ಅವಕಾಶ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.