ಈ ಯೋಜನೆಗಳನ್ನು ಪಡೆಯಬೇಕು ಎಂದರೆ ವಾಹನಗಳ ಚಾಲಕರು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಮಾನ್ಯವಾದ ಪರವಾನಗಿ (ಲೈಸೆನ್ಸ್) ಹೊಂದಿರಲೇಬೇಕು. ನಿರ್ವಾಹಕರು ಹಾಗೂ ಕ್ಲೀನರ್ಗಳು ಅಧಿಸೂಚಿಸಲ್ಪಟ್ಟ ಆಯಾ ಜಿಲ್ಲೆಯ ನೋಂದಣಿ ಅಧಿಕಾರಿಯಿಂದ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಬೇಕು.
ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ಅಪಘಾತದಿಂದ ಮೃತಪಟ್ಟರೇ ಅವರ ನಾಮ ನಿರ್ದೇಶಿತರಿಗೆ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ. ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ಅಪಘಾತದಿಂದ ಶಾಶ್ವತ ದುರ್ಬಲರಾದರೆ ಗರಿಷ್ಠ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ