/newsfirstlive-kannada/media/media_files/2025/08/05/deeksha_lawyer-2025-08-05-17-54-41.jpg)
ಬೆಂಗಳೂರು: ನಾಳೆಯಿಂದ ಮುಷ್ಕರ ಇರಲ್ಲ. ತಕ್ಷಣದಿಂದಲೇ ಮುಷ್ಕರ ನಿಲ್ಲಿಸಬೇಕು ಎಂದು ಕೋರ್ಟ್ ಆದೇಶ ಮಾಡಿದ್ದು ಮುಂದಿನ ವಿಚಾರಣೆ ಗುರುವಾರ (ಆಗಸ್ಟ್ 7)ದಂದು ಇದೆ ಎಂದು ಹೈಕೋರ್ಟ್ ವಕೀಲೆ ದೀಕ್ಷಾ ಅಮೃತೇಶ್ ಅವರು ಹೇಳಿದ್ದಾರೆ.
ಹೈಕೋರ್ಟ್ ಆವರಣದಲ್ಲಿ ಮಾತನಾಡಿದ ವಕೀಲೆ ದೀಕ್ಷಾ ಅಮೃತೇಶ್ ಅವರು, ಸಾರಿಗೆ ಮುಷ್ಕರದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿತು. ಯೂನಿಯನ್ ಅನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಕೇಳಿತು. ಕೆಎಸ್ಆರ್ಟಿಸಿ ಪರ ವಕೀಲರು ಕೇವಲ 3 ಸಿಬ್ಬಂದಿ ಮಾತ್ರ ರಜೆ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಬಸ್ ಸಂಚಾರ ಇದ್ದು, ಬೇರೆ ಜಿಲ್ಲೆಗಳಲ್ಲಿ ಮುಷ್ಕರ ಮಾಡಲಾಗುತ್ತಿದೆ ಎಂದು ಕೋರ್ಟ್ಗೆ ಗಮನಕ್ಕೆ ತರಲಾಯಿತು ಎಂದು ಹೇಳಿದ್ದಾರೆ.
ಬೇರೆ ಜಿಲ್ಲೆಗಳಲ್ಲಿ ಮುಷ್ಕರ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ಕೋರ್ಟ್ ಗರಂ ಆಗಿ, ಆದೇಶ ಇದ್ದರೂ ಹೇಗೆ ಮುಷ್ಕರ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದೆ. ಇದು ಕಾನೂನುಬಾಹಿರವಾಗುತ್ತದೆ. ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಲಾಗಿದ್ದು ಅನಧಿಕೃತ ಪ್ರತಿಭಟನೆ ಆದಲ್ಲಿ ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ಹೇಳಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ:ಸಾರಿಗೆ ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಲು ಜಂಟಿ ಕ್ರಿಯಾ ಸಮಿತಿಯ ಸೂಚನೆ
5 ಯೂನಿಯನ್ಗಳು ಸೇರಿ ಜಂಟಿಯಾಗಿ ಮುಷ್ಕರವನ್ನು ಮಾಡಿವೆ ಎನ್ನುವುದು ಕೋರ್ಟ್ ಗಮನಕ್ಕೆ ತರಲಾಯಿತು. ಆದರೆ ಅವರು ಕೇವಲ ಒಂದು ಯೂನಿಯನ್ ಮಾತ್ರ ರೆಪ್ರೆಜೆಂಟ್ ಮಾಡಿದೆ ಎಂದು ಹೇಳಿ, ಅವರು ಟೆಕ್ನಿಕಲ್ ಗ್ಲಿಚ್ ಮೇಲೆ ಹೋಗಲು ನೋಡಿದರು. ಮರೆ ಮಾಚೋಕೆ ಗೊತ್ತಾಗಲಿಲ್ಲ, ನಮಗೆ 7 ಗಂಟೆಗೆ ಗೊತ್ತಾಯಿತು ಅಂತ ಕೋರ್ಟ್ಗೆ ಹೇಳಿದ್ರು. ಬಾಗಲಕೋಟೆಯಲ್ಲಿ, ಕೊಪ್ಪಳದಲ್ಲಿ ಪರೀಕ್ಷೆ ನಿಲ್ಲಿಸಬೇಕಾಯಿತು. ಬೆಳಗಾವಿಯಲ್ಲಿ ತೊಂದರೆ ಆಯಿತು. ಮೈಸೂರಿನಲ್ಲಿ ಸ್ಥಳೀಯ ಬಸ್ಗಳು ರಸ್ತೆಗೆ ಇಳಿದಿರಲಿಲ್ಲ ಎಂದು ಹೇಳಿದರು.
ನಾಳೆಯಿಂದ ಮುಷ್ಕರ ಇಲ್ಲ. ತಕ್ಷಣದಿಂದಲೇ ಮುಷ್ಕರ ನಿಲ್ಲಿಸಬೇಕು ಎಂದು ಕೋರ್ಟ್ ಆದೇಶ ಮಾಡಿದೆ. ಮುಂದಿನ ವಿಚಾರಣೆಯೂ ಗುರುವಾರ (ಆಗಸ್ಟ್ 7)ದಂದು ಇದೆ. ಸಾರಿಗೆ ಇಲಾಖೆ ದೊಡ್ಡದಾಗಿದ್ದರೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಷ್ಕರ ಮಾಡಬಾರದು. ಕಾನೂನುಬಾಹಿರವಾಗಿ ಮುಷ್ಕರ ಮಾಡಿದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ ಅಂತ ವಕೀಲೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ