/newsfirstlive-kannada/media/media_files/2025/09/21/hsn_ganesh-1-2025-09-21-16-22-05.jpg)
ಹಾಸನ: ಬೇಲೂರಿನಲ್ಲಿ ದೇವಾಲಯದ ಒಳಗಿನ ಗಣಪನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ದೇವಸ್ಥಾನದ ಅಧ್ಯಕ್ಷರು ದೂರು ದಾಖಲು ಮಾಡಿದ್ದಾರೆ.
ಪುರಸಭೆ ಆವರಣದಲ್ಲಿರುವ ದೇವಸ್ಥಾನದ ಒಳಗಿನ ಗಣಪತಿ ಮೂರ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಹಾರ ಹಾಕಿದ್ದಾರೆ. ಮಹಿಳೆ ಒಳ ಬಂದಿರುವುದು, ಹೊರ ಹೋಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ದೂರು ದಾಖಲು ಮಾಡಿದ್ದಾರೆ.
ಬೇಲೂರಿನಲ್ಲಿ ಎಎಸ್​ಪಿ ಮೊಹಮ್ಮದ ಸುಜೀತಾ ಅವರು ಮಾತನಾಡಿ, ಮಹಿಳೆ ರಾತ್ರಿ 12:30ರ ಸಮಯದಲ್ಲಿ ದೇವಾಲಯದ ಒಳಗೆ ಬರುವುದು ಪತ್ತೆಯಾಗಿದೆ. ಸ್ಥಳೀಯರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಮಹಿಳೆ ಸ್ಟೇಬಲ್ ಇಲ್ಲ ಅನ್ನೊದನ್ನ ಕೆಲವು ಸ್ಥಳೀಯರು ಹೇಳುತ್ತಿದ್ದಾರೆ. ದೇವರಿಗೆ ಮುಡಿಸಿದ ಹೂವುಗಳನ್ನ ಆಕೆ ತೆಗೆದು ಮತ್ತೆ ಮಾರುತ್ತಿದ್ದಳು ಅನ್ನೋ ಮಾಹಿತಿಯು ಕೂಡ ಇದೆ ಎಂದು ಹೇಳಿದ್ದಾರೆ.
ಆ ಮಹಿಳಾ ಆರೋಪಿ ಪತ್ತೆಗೆ ಎಂಟು ತಂಡ ರಚನೆ ಮಾಡಲಾಗಿದೆ. ಚಪ್ಪಲಿಯನ್ನು ದಾರದಲ್ಲಿ ಕಟ್ಟಿ ಇಟ್ಟಿಲ್ಲ. ಆಕೆ ಒಳಹೋಗುವಾಗ ಚಪ್ಪಲಿ ಇತ್ತು. ಆಕೆ ಹೊರಬರುವಾಗ ಚಪ್ಪಲಿ ಇರಲಿಲ್ಲ. ಮಾರ್ಕೆಟ್​ನವರು ಪೂಜೆ ಮಾಡ್ತಾರೆ ಎಂದು ದೇವರ ಗುಡಿಗೆ ಬಾಗಿಲು ಹಾಕುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆ ಮಹಿಳೆಯನ್ನು ಇಲ್ಲಿ ಕೆಲ ಸ್ಥಳೀಯರು ನೋಡಿದ್ದಾರೆ. ಇಲ್ಲೆ ಓಡಾಡಿಕೊಂಡಿದ್ದಳು. ಆಗಾಗ ಚಿಕಮಗಳೂರಿಗೆ ಹೋಗಿ ಬರುತ್ತಿದ್ದಳು. ದೇವರ ಮೇಲಿದ್ದ ಹೂವನ್ನು ಆಕೆ ತೆಗೆದು ಪುನಃ ಮಾರಾಟ ಮಾಡುತ್ತಿದ್ದಳು ಎಂಬ ಮಾಹಿತಿಯನ್ನ ಸ್ಥಳೀಯರು ನೀಡಿದ್ದಾರೆ ಎಂದು ಎಸ್​​ಪಿ ಮೊಹಮ್ಮದ್ ಸುಜೀತಾ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ