/newsfirstlive-kannada/media/media_files/2025/10/19/hasanambe-rishab-123-2025-10-19-13-46-42.jpg)
ಹಾಸನ:ಕಾಂತಾರ ಚಾಪ್ಟರ್​​ 1 ನಿರೀಕ್ಷೆಗೂ ಮೀರಿದ ಸಕ್ಸಸ್​​ ಕಂಡಿದೆ. ಬಿಡುಗಡೆಯಾದ 17 ದಿನದಲ್ಲಿ ಕಾಂತಾರ ಚಾಪ್ಟರ್​ 1 ಸುಮಾರು 717.50 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ ಅಂತ ಚಿತ್ರತಂಡ ತಿಳಿಸಿದೆ. ಕಾಂತಾರ ಸಕ್ಸಸ್​ ಬೆನ್ನಲ್ಲೇ ನಟ, ನಿದೇರ್ಶಕ ರಿಷಬ್​ ಶೆಟ್ಟಿ ವಿಜಯ ಯಾತ್ರೆ ಆರಂಭಿಸಿದ್ದಾರೆ. ಮೊನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡಿ ತಾಯಿಯ ದರ್ಶನ ಪಡೆದಿದ್ದ ರಿಷಬ್,​ ಇಂದು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಪತ್ನಿ ಹಾಗೂ ಕುಟುಂಬ ಸಮೇತರಾಗಿ ನಟ ರಿಷಬ್​ ಶೆಟ್ಟಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆದು ರಿಷಬ್​ ಪುನೀರತಾದರು. ಬಳಿಕ ಮಾತನಾಡಿದ ರಿಷಬ್​ ಶೆಟ್ಟಿ, ಒಂದು ಸಿನಿಮಾನ ದೈವದ ಬಗ್ಗೆ ಆಧ್ಯಾತ್ಮದ ಬಗ್ಗೆ ನಂಬಿಕೆ ಇಟ್ಟು ಮಾಡಿರುತ್ತೀವಿ.ನಂಬಿಕೆ ಇಟ್ಟು ಸಿನಿಮಾ ಮಾಡಿದಾಗ ಮಾತ್ರ ಅದು ಸರಿಯಾದ ರೀತಿಯಲ್ಲಿ ಬರೋದಕ್ಕೆ ಸಾಧ್ಯ. ಇವತ್ತು ಜನರ ಆಶೀರ್ವಾದದಿಂದ, ದೈವ ದೇವರ ಆಶೀರ್ವಾದದಿಂದ ಕಾಂತಾರ ಯಶಸ್ಸು ಕಂಡಿದೆ ಅಂತ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಹೇಳಿದ್ದಾರೆ.
ಶಿವಣ್ಣನ ಮಾತನಾಡಿಸಿದ ರಿಷಬ್​
ಇದೇ ವೇಳೆ ಶಿವರಾಜ್​ ಕುಮಾರ್​ ಅವರು ಕೂಡ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಹಾಸನಾಂಬೆ ದರ್ಶನೋತ್ಸವದ ಹತ್ತನೇ ದಿನಕ್ಕೆ ಶಿವರಾಜ್​ ಕುಮಾರ್​ ಕುಟುಂಬ ಸಮೇತರಾಗಿ ದೇವಿಯ ದಶರ್ನ ಪಡೆದು ಪುನೀತರಾದರು. ಈ ವೇಳೆ ದೇವಿಯ ದರ್ಶನ ಪಡೆದು ತೆರಳುತ್ತಿದ್ದ ಶಿವಣ್ಣರನ್ನ, ರಿಷಬ್​ ಶೆಟ್ಟಿ ಮಾತನಾಡಿಸಿದರು. ರಿಷಬ್​ ಶೆಟ್ಟಿಯವರಿಗೆ ಶಿವಣ್ಣ ಅಪ್ಪುಗೆ ನೀಡಿ ಕಳುಹಿಸಿಕೊಟ್ಟರು.