ಬೇಲೂರಿನಲ್ಲಿ ನಾಪತ್ತೆಯಾಗಿದ್ದ ಸುಂದರಿ ಪ್ರಿಯಾಂಕಾ ಕುಣಿಗಲ್‌ ನಲ್ಲಿ ಪತ್ತೆಯಾಗಿದ್ದೇಗೆ? ಮಹಿಳೆ ಮಾಡಿದ್ದ ಪ್ಲ್ಯಾನ್ ಫೇಲ್ ಆಗಿದ್ದೇಗೆ?

ಮೊನ್ನೆ ದಿನ ಬೇಲೂರಿನಲ್ಲಿ ನಾಪತ್ತೆಯಾಗಿದ್ದ ಪ್ರಿಯಾಂಕಾ ಕುಣಿಗಲ್ ನಲ್ಲಿ ರಾತ್ರೋರಾತ್ರಿ ಪತ್ತೆಯಾಗಿದ್ದಳು. ತಾನು ನಾಪತ್ತೆ, ಕೊಲೆಯಾದಂತೆ ಸೀನ್ ಕ್ರಿಯೇಟ್ ಮಾಡಿದ್ದು ಇದೇ ಪ್ರಿಯಾಂಕಾ ಅನ್ನೋದು ಬಹಿರಂಗವಾಗಿದೆ. ಈಕೆಯ ಪ್ಲ್ಯಾನ್ ಫೇಲ್ ಆಗಿದ್ದು ಹೇಗೆ? ಈಗ ಪ್ರಿಯಾಂಕಾ ಎಲ್ಲಿದ್ದಾಳೆ? ಇಲ್ಲಿದೆ ಡೀಟೈಲ್ಸ್.

author-image
Chandramohan
PRIYANAKA MISSING IN HASSAN

ನಾಪತ್ತೆಯಾಗಿದ್ದ ಪ್ರಿಯಾಂಕಾ ಕುಣಿಗಲ್ ನಲ್ಲಿ ಪತ್ತೆ!

Advertisment
  • ನಾಪತ್ತೆಯಾಗಿದ್ದ ಪ್ರಿಯಾಂಕಾ ಕುಣಿಗಲ್ ನಲ್ಲಿ ಪತ್ತೆ!
  • ಗಂಡನನ್ನು ಬಿಟ್ಟು ಲವ್ವರ್ ಡೇವಿಡ್ ಜೊತೆ ಸಂಸಾರಕ್ಕೆ ಪ್ಲ್ಯಾನ್
  • ಇದಕ್ಕಾಗಿ ತಾನು ಕಿಡ್ನ್ಯಾಪ್, ಕೊಲೆಯಾದಂತೆ ಸೀನ್ ಕ್ರಿಯೇಟ್ ಮಾಡಿದ್ದ ಪ್ರಿಯಾಂಕಾ

ಹಾಸನದ ಮಹಿಳೆ ನಾಪತ್ತೆ ಕೇಸ್​ಗೆ ಭರ್ಜರಿ ಟ್ವಿಸ್ಟ್​ ಸಿಕ್ಕಿದೆ. ಮೈ ಮೇಲಿದ್ದ 30 ಲಕ್ಷದ ಒಡವೆಗಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂಬ ದೂರು ಕೇಳಿಬಂದಿತ್ತು. ಆದ್ರೆ ಕೆರೆ ಬಳಿ ಪತ್ತೆಯಾಗಿದ್ದ ಮಹಿಳೆಯ ಬಟ್ಟೆ, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪ್ರಕರಣದ ದಿಕ್ಕನ್ನೆ ಬದಲಿಸಿದೆ. ನಾಪತ್ತೆಯಾಗಿದ್ದವಳು ಪ್ರಿಯಕರನ ಜೊತೆ ಪೊಲೀಸರಿಗೆ ತಗ್ಲಾಕ್ಕೊಂಡಿದ್ದು ಇವಳ ಅಸಲಿಯತ್ತು ಗೊತ್ತಾಗಿ ಜನ ಛೀ ಥೂ ಅಂತಿದ್ದಾರೆ.
ಅಲೆಲೆಲೆ ಏನ್​ ಸ್ಕ್ರೀನ್​ ಪ್ಲೇ.. ಏನ್​ ಌಕ್ಟಿಂಗು.. ಪಕ್ಕಾ ಪ್ಲಾನ್​, ಪರ್ಫೆಕ್ಟ್​ ಕೊರಿಯೋಗ್ರಫಿ. ಮೊನ್ನೆ ಶನಿವಾರ, ಹಾಸನ ಮಾತ್ರವಲ್ಲ ರಾಜ್ಯದ ಜನರೇ ಅಯ್ಯೋ ಪಾಪ ಏನಾಯ್ತೋ ಏನೋ ಅಂತ ಮರುಕ ಹುಟ್ಟಿಸಿ, ಟೆನ್ಶನ್ ಆಗುವಂತೆ ಮಾಡಿದ್ದ ಕೇಸ್​ಗೆ ಯಾರೂ ಊಹಿಸದ  ಟ್ವಿಸ್ಟ್​ ಸಿಕ್ಕಿದೆ. ಅಷ್ಟಕ್ಕೂ ಈ ಎಲ್ಲ ಕಥೆ, ಚಿತ್ರಕಥೆ, ನಿರ್ದೇಶಕರು ಬೇಱರು ಅಲ್ಲ ಇದೇ ಮಹಿಳೆ.. ಈ ಮನೆಹಾಳಿಯೇ ಈ ಸ್ಟೋರಿಯ ಡೈರೆಕ್ಟರ್, ಆ್ಯಕ್ಟರ್‌ ಎಲ್ಲವೂ ಆಗಿದ್ದಾರೆ.  

ಪತಿ ಅಂದ್ರೆ ಇಷ್ಟವಿಲ್ಲ.. ಬೇರೊಬ್ಬನ ಜೊತೆ ಸಂಸಾರಕ್ಕೆ ಪ್ಲಾನ್​!
ಹಾಸನದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಡೇವಿಡ್ ಜೊತೆ ಪತ್ತೆ
ಇದು ರಣರೋಚಕ ಕಾರ್ಯಾಚರಣೆ.. ಕೆಲವೇ ಗಂಟೆಗಳಲ್ಲೇ ಒಂದು ನಾಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಗುರುವಾರ ಹಾಸನದ ಮದುವೆಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಕೊನೆಗೂ ತುಮಕೂರಿನಲ್ಲಿ ಪತ್ತೆಯಾಗಿದ್ದಾಳೆ. ಡೇವಿಡ್ ಎಂಬಾತನ ಜೊತೆಗೆ ಪ್ರಿಯಾಂಕ ಸಿಕ್ಕಿ ಬಿದ್ದಿದ್ದಾಳೆ.. ಅದೇನ್​ ಪ್ಲಾನ್​ ಅಬ್ಬಬ್ಬಾ.. ಈಕೆಯ ಹೆಸರು ಪ್ರಿಯಾಂಕಾ. ಕುಣಿಗಲ್​ನ ಯಲಿಯೂರು ಗ್ರಾಮದ ರುದ್ರೇಶ್ ಎಂಬುವವರ ಪತ್ನಿ.. ಕಳೆದ ಗುರುವಾರ ಮದುವೆಗೆಂದು ಚಿಕ್ಕಮಗಳೂರಿಗೆ ಹೋದವಳು ನಾಪತ್ತೆಯಾಗಿದ್ದಳು. ನಿನ್ನೆ ಪ್ರಿಯಾಂಕಳ ಬಟ್ಟೆ, ಚಪ್ಪಲಿ, ವ್ಯಾನಿಟಿ ಬ್ಯಾಗ್ ಹಾಸನದ ಕಲ್ಕೆರೆ ಕೆರೆ ಬಳಿ ಪತ್ತೆಯಾಗಿದ್ದವು. ಇದಕ್ಕೆ ಬೆಚ್ಚಿಬಿದ್ದ ಪತಿ ಮನೆಯವರು ಪ್ರಿಯಾಂಕಾ ಹಾಕಿದ್ದ 30 ಲಕ್ಷ ಚಿನ್ನಕ್ಕೆ ಕೊಲೆ ನಡೆದಿದೆ ಅಂತ ಆರೋಪಿಸಿದ್ದರು. ಕೆರೆಯಲ್ಲಿ ಮಹಿಳೆ ಶವಕ್ಕೆ ಶೋಧ ಕೂಡ ನಡೆಸಲಾಗಿತ್ತು. ಅಲ್ಲಿದ್ರೆ ತಾನೇ ಶವ ಸಿಗೋದು? ತನಿಖೆ ವೇಳೆ ಆ ದೃಶ್ಯ ಮಾತ್ರ ಪೊಲೀಸರನ್ನೇ ದಂಗುಬಡಿಸಿತ್ತು.


ನಾಪತ್ತೆಯಾದವಳು ಪ್ರೇಮಿಯ ಜೊತೆ ಪತ್ತೆ!
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಾಸನ ಪೊಲೀಸರು ಪ್ರಿಯಾಂಕಳ ಕಾಲ್ ಡಿಟೇಲ್ಸ್ ತೆಗೆದಿದ್ದರು. ಪ್ರಿಯಾಂಕ ಹೆಚ್ಚು ಹೊತ್ತು ಮಾತನಾಡಿದ ಮಧ್ಯ ಪ್ರದೇಶ ಮೂಲದ ಡೇವಿಡ್​ ಎಂಬಾತನ ಬಗ್ಗೆ ಮಾಹಿತಿ ಪಡೆದು ಆತನನ್ನು ಹುಡುಕಿ ಕುಣಿಗಲ್​ನ ಗೊಟ್ಟಿಕೆರೆಯ ಬಾಡಿಗೆ ಮನೆಯ ಬಾಗಿಲನ್ನು ತಟ್ಟಿದ್ರು. ಆಗ ಪೊಲೀಸರೇ ದಂಗಾಗುವಂತೆ ಮಾಡಿದ್ದು ಈ ಮಾಯಾಂಗನೆ ಪ್ರಿಯಾಂಕ. ಯಾಕಂದ್ರೆ ಅಲ್ಲಿ ಡೇವಿಡ್ ಜೊತೆಗಿದ್ದವಳು ಇದೇ ಪ್ರಿಯಾಂಕ. ಈ ಪ್ರಳಯಾಂತಕಿ ಗಂಡನ ಜೊತೆ ಸಂಸಾರ ಇಷ್ಟವಿಲ್ಲದಕ್ಕೆ ಪ್ರಿಯಕರನ ಜೊತೆ ಬೇಲೂರಿನಿಂದ ಬೈಕ್ ಹತ್ತಿ ಹೋಗಿದ್ದು ತನಿಖೆಯಲ್ಲಿ ಬಯಲಾಗಿದೆ. ತಾಯಿ ಮನೆಯಿಂದ ಬರುವಾಗ ತಾಯಿಯನ್ನು 2 ಬಾರಿ ಅಪ್ಪಿ ಪ್ರಿಯಾಂಕ ಕಣ್ಣೀರು ಹಾಕಿದ್ದ ವಿಷಯ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು. 8 ಗಂಟೆಗೆ ಡೇವಿಡ್ ಜೊತೆ ಬೈಕ್ ಹತ್ತಿದ್ದ ಪ್ರಿಯಾಂಕ, ಅಂದಾಲೆ ಕಾಡಲ್ಲಿ ಬಟ್ಟೆ ಬದಲಿಸಿದ್ದರು. ಮೊದಲು ಧರಿಸಿದ್ದ ಬಟ್ಟೆಯನ್ನು ಕಲ್ಕೆರೆ ಕೆರೆ ಬಳಿ ಎಸೆದಿದ್ದಳು. ಒಳ ಉಡುಪು, ಪ್ಯಾಂಟ್, ಚಪ್ಪಲಿ, ವ್ಯಾನಿಟಿ ಬ್ಯಾಗ್, ಆಧಾರ್ ಕಾರ್ಡ್ ಸಹ ಎಸೆದು, ಮಹಿಳೆ ಕೊಲೆ ಮಾಡಿ ಕೆರೆಗೆ ಎಸೆದಿರಬಹುದು ಎಂಬಂತೆ ಸೀನ್ ಸೃಷ್ಟಿಸಿದ್ದಳು. 
ಇನ್ನು ಕುಣಿಗಲ್​ ಫ್ಯಾಕ್ಟರಿಯಲ್ಲಿ ಮ್ಯಾನೇಜರ್​ ಆಗಿದ್ದ ಡೇವಿಡ್ ಜೊತೆ ಅಲ್ಲೇ ಕೆಲಸ ಮಾಡ್ತಿದ್ದ ಪ್ರಿಯಾಂಕ ಲವ್ವಿಡವ್ವಿಯಲ್ಲಿದ್ದು ಆಗಾಗ ಇಬ್ಬರು ಸುತ್ತಾಡುತ್ತಿದ್ದರು ಅನ್ನೋದು ಪೊಲೀಸರಿಗೆ ಗೊತ್ತಾಗಿತ್ತು. ಈ ಎಲ್ಲವನ್ನು ಆಧಾರವಾಗಿರಿಸಿ ತನಿಖೆ ಮಾಡಿದ ಪೊಲೀಸರಿಂದ ಈ ಮಾಯಾಂಗನೆಯ ಅಸಲಿಯತ್ತು ಬಯಲಾಗಿದೆ. ಪ್ರಿಯಾಂಕಗೆ ಗಂಡ ರುದ್ರೇಶ ಜೊತೆ ಸಂಸಾರ ಮಾಡಲು ಇಷ್ಟ ಇರಲಿಲ್ಲ. ಡೇವಿಡ್‌ಗೆ ಸದ್ಯದಲ್ಲೇ ಮಧ್ಯಪ್ರದೇಶಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ಆತನ ಜೊತೆ ಮಧ್ಯಪ್ರದೇಶಕ್ಕೆ ಹೋಗಿ ಸಂಸಾರ ಮಾಡಲು ಪ್ಲ್ಯಾನ್ ಮಾಡಿದ್ದಳು. ಗಂಡ, ಮನೆಯವರಿಗೆ ಹೇಳಿ ಹೋಗುವ ಬದಲು ತಾನು ಹತ್ಯೆಯಾಗಿದ್ದಾನೆ ಎಂಬಂತೆ ಸೀನ್ ಸೃಷ್ಟಿಸಿದ್ದರೇ, ಬಳಿಕ ಯಾರು ತಲೆ ಕೆಡಿಸಿಕೊಳ್ಳಲ್ಲ. ಶವ ಸಿಗಲಿಲ್ಲ ಅಂತ ಸುಮ್ಮನಾಗ್ತಾರೆ ಎಂದುಕೊಂಡಿದ್ದಳು ಪ್ರಿಯಾಂಕ. ಆದರೇ, ಕೇವಲ ಹತ್ತೇ ಹತ್ತು ಗಂಟೆಯಲ್ಲಿ ಆಕೆ ಜೀವಂತ ಇರುವುದನ್ನು ಪತ್ತೆ ಹಚ್ಚಿ ಆಕೆಯನ್ನು ಕುಣಿಗಲ್ ಗೊಟ್ಟಿಕೆರೆಯ ಮನೆಯಿಂದ ಸೀದಾ ಹಾಸನಕ್ಕೆ ಕರೆ ತಂದಿದ್ದಾರೆ. 


 ನಾಪತ್ತೆಯಾದ ದಿನವೇ ಪ್ರಿಯಾಂಕಾ, ಬೇಲೂರುನಲ್ಲಿ ಬಸ್ ಹತ್ತಿ, ನಂತರ ಒಂದೆರೆಡು ಹಳ್ಳಿ ಬಿಟ್ಟು ಬಸ್ ಇಳಿದಿದ್ದಾಳೆ. ಅಲ್ಲಿ ಡೇವಿಡ್ ಬೈಕ್ ಹತ್ತಿದ್ದಾಳೆ. ಕೆರೆ ಬಳಿ ಹೋಗಿ ತಾನು ಧರಿಸಿದ್ದ ಬಟ್ಟೆಗಳನ್ನು ಕೆರೆಯ ದಡದಲ್ಲಿ ಎಸೆದಿದ್ದಾಳೆ. ಜೊತೆಗೆ ಆಧಾರ್ ಕಾರ್ಡ್ ಅನ್ನು ಎಸೆದಿದ್ದಾಳೆ. ಇದರಿಂದ ತನ್ನನ್ನು ಯಾರೋ ಕೊಲೆ ಮಾಡಿರಬಹುದು. ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದಿದ್ದಾರೆ ಎಂಬ ಭಾವನೆ ಬರುವಂತೆ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಆದರೇ, ಬಟ್ಟೆಯನ್ನು ಕೆರೆ ಬಳಿ ಎಸೆದು ಡೇವಿಡ್ ಬೈಕ್ ಹತ್ತಿ ಅದೇ ದಿನ ರಾತ್ರಿ ಕುಣಿಗಲ್ ಟೌನ್ ಪಕ್ಕದ ಗೊಟ್ಟಿಕೆರೆಯ ಆತನ ಮನೆಗೆ ಬಂದು ಸೀಕ್ರೆಟ್ ಆಗಿಯೇ ಅಡಗಿಕೊಂಡಿದ್ದಾಳೆ. ಡೇವಿಡ್ ಮನೆಯಿಂದ ಹೊರಗೂ ಬಂದಿಲ್ಲ. ಮನೆಯೊಳಗಿದ್ದ ಪ್ರಿಯಾಂಕಾಗೆ ಡೇವಿಡ್‌ನೇ ಹೋಟೇಲ್ ನಿಂದ ಊಟ, ತಿಂಡಿ, ನೀರು ತಂದುಕೊಟ್ಟಿದ್ದಾನೆ.  ಹಾಸನ ಪೊಲೀಸರು ಸೀದಾ ರಾತ್ರಿ 9.30ರ ಸುಮಾರಿಗೆ ಡೇವಿಡ್ ಮನೆ ಬಳಿ ಬಂದಿದ್ದಾರೆ. ಮೊದಲಿಗೆ ಮಫ್ತಿಯಲ್ಲಿದ್ದ ಪೊಲೀಸರು ಡೇವಿಡ್ ನನ್ನು ಮನೆಯಿಂದ ಹೊರಗೆ ಕರೆ ತಂದಿದ್ದಾರೆ. ಕಾರ್ ಬಳಿ ವಿಚಾರಿಸಿ ಒಂದೆರೆಡು ಭಾರಿ ಬಿಸಿ ಮುಟ್ಟಿಸಿದ್ದಾರೆ. ಆಗ ಪ್ರಿಯಾಂಕಾ ತನ್ನದೇ ಮನೆಯಲ್ಲಿ ಬಾತ್ ರೂಮುನಲ್ಲಿ ಅಡಗಿದ್ದಾಳೆ ಎಂದು ಬಾಯಿ ಬಿಟ್ಟಿದ್ದಾನೆ. ತಕ್ಷಣವೇ ಹಾಸನ ಪೊಲೀಸರು, ಮನೆಗೆ ಹೋಗಿ ಪ್ರಿಯಾಂಕಾಳನ್ನು ಕರೆದುಕೊಂಡು ಹಾಸನಕ್ಕೆ ಹೋಗಿದ್ದಾರೆ. 
ಸದ್ಯ ಹಾಸನ ಪೊಲೀಸರು ಪ್ರಿಯಾಂಕ ಮತ್ತು ಡೇವಿಡ್​ನನ್ನು ಹಾಸನ ಗ್ರಾಮಾಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಚಿನ್ನಾಭರಣಕ್ಕೆ ಮಹಿಳೆಯ ಕೊಲೆಯಾಗಿದೆ ಅಂತ ಸೀನ್ ಕ್ರಿಯೇಟ್ ಮಾಡಿ ಗಂಡ, ಮಗು ತೊರೆದು ಪ್ರಿಯಕರನ ಜೊತೆ ಸಂಸಾರ ಮಾಡಲು ಪ್ಲಾನ್ ಮಾಡಿದ್ದ ಚಾಲಾಕಿಯ ಪ್ಲಾನ್ ಕಡೆಗೂ ಬಯಲಾಗಿದೆ. ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಲೇಡಿ ಮಿಸ್ಸಿಂಗ್ ಕೇಸ್ ಭೇದಿಸಿ ಸುಖಾಂತ್ಯ ನೀಡುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಸಮಾಜ ಹಾಗೂ ಪೊಲೀಸರ ದಿಕ್ಕು ತಪ್ಪಿಸಿದ ಪ್ರಿಯಾಂಕ- ಡೇವಿಡ್​ಗೆ ಶಿಕ್ಷೆಯಾದರೆ, ಇಂಥ ಮನೆಹಾಳು ಐಡಿಯಾ ಮಾಡೋರಿಗೆ ಬುದ್ದಿ ಕಲಿಸಿದಂತಾಗುತ್ತದೆ.
ಆದರೇ, ಸದ್ಯ ಪ್ರಿಯಾಂಕಾ ಮಾತ್ರ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾಳೆ. ಗಂಡ ರುದ್ರೇಶ ಜೊತೆ ಹೋಗಲ್ಲ. ಪ್ರಿಯಕರ ಡೇವಿಡ್ ಜೊತೆ ಹೋಗುವುದಾಗಿ ಪೊಲೀಸರಿಗೆ ಹೇಳಿದ್ದಾಳೆ. ಹೀಗಾಗಿ ಪ್ರಿಯಾಂಕಾಳನ್ನು ಸದ್ಯಕ್ಕೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿದ್ದಾರೆ. ಇನ್ನೂ ಪ್ರಿಯಕರ ಡೇವಿಡ್ ನನ್ನು ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಹೋಗುವುದಾದರೇ, ಕಾನೂನು ಪ್ರಕಾರ, ಡಿವೋರ್ಸ್ ನೀಡಿ ಹೋಗಬೇಕು. ಡಿವೋರ್ಸ್ ಪಡೆಯಲು ಕೋರ್ಟ್ ನಲ್ಲಿ ಕೇಸ್ ಹಾಕಬೇಕು. ಡಿವೋರ್ಸ್ ಪಡೆದು ಡೇವಿಡ್ ಜೊತೆ ಪ್ರಿಯಾಂಕಾ ಹೋಗಬೇಕು. ಇಲ್ಲಿ ಗಂಡ- ಹೆಂಡತಿಯ ಮನಸ್ತಾಪ, ಜಗಳಗಳು ಇದ್ದಿರಬಹುದು. ಇದೆಲ್ಲದರ ಬಗ್ಗೆ ಕೋರ್ಟ್ ಕೂಡ ಈ ಕೇಸ್ ಅನ್ನು ಕೌನ್ಸಿಲಿಂಗ್‌ ಗೆ ಕಳಿಸಬಹುದು. 

ಕಿರಣ್, ನ್ಯೂಸ್​ ಫಸ್ಟ್​,  ಹಾಸನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MISSING WOMEN FOUND WITH LOVER women missing in Hassan
Advertisment