ಸೈಟ್ ಗಲಾಟೆ: GPA ಹೋಲ್ಡರ್-ಯಶ್ ತಾಯಿ ಮಧ್ಯೆ ಜಟಾಪಟಿ..!

ರಾಕಿಂಗ್ ಸ್ಟಾರ್ ಯಶ್ ಅವರ ಹಾಸನದ ನಿವಾಸದ ಬಳಿ ಸೈಟ್ ವಿವಾದವೊಂದು ಸ್ಫೋಟಗೊಂಡಿದ್ದು, ಯಶ್ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವೆ ರಸ್ತೆಯಲ್ಲೇ ವಾಗ್ವಾದ ನಡೆದಿದೆ. ಸೈಟ್ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಈ ಗದ್ದಲಕ್ಕೆ ಕಾರಣವಾಗಿದೆ.

author-image
Ganesh Kerekuli
yash mother (1)
Advertisment

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಹಾಸನದ ನಿವಾಸದ ಬಳಿ ಸೈಟ್ ವಿವಾದವೊಂದು ಸ್ಫೋಟಗೊಂಡಿದ್ದು, ಯಶ್ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವೆ ರಸ್ತೆಯಲ್ಲೇ ವಾಗ್ವಾದ ನಡೆದಿದೆ. ಸೈಟ್ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಈ ಗದ್ದಲಕ್ಕೆ ಕಾರಣವಾಗಿದೆ.

ಏನಿದು ವಿವಾದ?

ಹಾಸನ ನಗರದ ವಿದ್ಯಾನಗರದಲ್ಲಿ ನಟ ಯಶ್ ಅವರ ಮನೆಯಿದೆ. ಈ ಮನೆಯ ಪಕ್ಕದಲ್ಲೇ ಇರುವ ಸೈಟ್‌ಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಈ ಹಿಂದೆ ಜಿಪಿಎ ಹೋಲ್ಡರ್ ದೇವರಾಜ್ ಅವರು ಈ ಸೈಟ್‌ನಲ್ಲಿದ್ದ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದರು. ಆದರೆ, ಇಂದು ಯಶ್ ತಾಯಿ ಪುಷ್ಪಾ ಅವರು ಅದೇ ಜಾಗದಲ್ಲಿ ಮತ್ತೆ ಕಾಂಪೌಂಡ್ ನಿರ್ಮಿಸಲು ಮುಂದಾದಾಗ ಗಲಾಟೆ ಆರಂಭವಾಗಿದೆ.

ಮಾತಿನ ಚಕಮಕಿ - ಹಾದಿಬೀದಿ ಜಗಳ

ಕಾಂಪೌಂಡ್ ನಿರ್ಮಾಣಕ್ಕೆ ದೇವರಾಜ್ ಅಡ್ಡಿಪಡಿಸಿದಾಗ, ಪುಷ್ಪಾ ಮತ್ತು ದೇವರಾಜ್ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ಪರಸ್ಪರ ಏಕವಚನದಲ್ಲೇ ನಿಂದಿಸಿಕೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಕ್ರಮ ಪ್ರವೇಶದ ಆರೋಪ

ಜಿಪಿಎ ಹೋಲ್ಡರ್ ದೇವರಾಜ್ ವಿರುದ್ಧ ಪುಷ್ಪಾ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ನಮ್ಮ ಜಾಗಕ್ಕೆ ಇವನು ಅಕ್ರಮವಾಗಿ ಪ್ರವೇಶಿಸಿದ್ದಾನೆ" ಎಂದು ಆರೋಪಿಸಿದ ಅವರು, ಸೈಟ್ ವಿಚಾರದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆ, ದೇವರಾಜ್ ಅವರು ಇದು ಒತ್ತುವರಿ ಜಾಗ ಎಂದು ವಾದಿಸುತ್ತಿದ್ದಾರೆ. ವಿದ್ಯಾನಗರದ ಯಶ್ ಮನೆ ಮುಂಭಾಗವೇ ಈ ಹೈಡ್ರಾಮಾ ನಡೆದಿದ್ದು, ಸ್ಥಳೀಯರು ಈ ದೃಶ್ಯವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಪೊಲೀಸ್ ಮೆಟ್ಟಿಲೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಶೇ.27 ರಷ್ಟು ಕುಸಿತ! ಪ್ರತಿ ಕೆ.ಜಿ.ಗೆ 2.92 ಲಕ್ಷ ರೂಪಾಯಿಗೆ ಕುಸಿತ : ಕಾರಣವೇನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hassan Yash mother Pushpa
Advertisment