ಇಂದು ಹಾಸನಾಂಬೆ ದರ್ಶನಕ್ಕೆ ಶಾಸ್ತ್ರೋಕ್ತ ತೆರೆ.. 24 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ, ಆದಾಯ ಎಷ್ಟು ಕೋಟಿ?

ತಾಯಿಯ ದರ್ಶನ ಪಡೆದು ಧನ್ಯರಾದರು. ಬೆಳಗ್ಗೆ 6ಗಂಟೆಯಿಂದಲೇ ಶುರುವಾದ ದೇವಿಯ ದರ್ಶನ ಸಂಜೆ 7 ಗಂಟೆವರಗೂ ಮುಂದುವರಿದಿತ್ತು. ನಂತ್ರ ಹಾಸನಾಂಬೆಯ ವಿಶೇಷ ಪೂಜೆಗಾಗಿ ಗರ್ಭಗುಡಿ ಬಾಗಿಲನ್ನ ಹಾಕಲಾಯಿತು. ಬಳಿಕ ತಡರಾತ್ರಿ ಸಿದ್ದೇಶ್ವರಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ನಡೀತು.

author-image
Bhimappa
HSN_HASANAMBA (1)

ಹಾಸನಾಂಬೆ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ

Advertisment
  • ಹಾಸನಾಂಬೆ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ
  • ಈ ವರ್ಷ 26 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ
  • ಟಿಕೆಟ್, ಲಡ್ಡು ಮಾರಾಟದಿಂದ 22 ಕೋಟಿ ಆದಾಯ ಸಂಗ್ರಹ

ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನಭಾಗ್ಯ ಕರುಣಿಸುವ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಬೀಳಲಿದೆ. ನಿನ್ನೆ ರಾತ್ರಿ ಸಾರ್ವಜನಿಕರ ದರ್ಶನ ಅಂತ್ಯ ಆಗಿದ್ದು, ಇಂದು ಯಾರಿಗೂ ದರ್ಶನ ಇರೋದಿಲ್ಲ. ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಹಾಕಿದ್ರೆ ಮುಂದಿನ ವರ್ಷವೇ ಬಾಗಿಲು ತೆರೆಯೋದು.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಅದಿದೇವತೆ ಹಾಸನಾಂಬೆಯ ಮಹಿಮೆ, ಪವಾಡ ಅಪಾರ. ದರ್ಶನಾಂತ್ಯದಲ್ಲಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ ಮಹಾದೀಪ ನಂದುವುದಿಲ್ಲ. ಹೂವು ಬಾಡಿರುವುದಿಲ್ಲ ಅನ್ನೋ ನಂಬಿಕೆ ಇರುವುದರಿಂದ ಅಮ್ಮನ ಪವಾಡ ಶಕ್ತಿ ಎಲ್ಲಡೆ ಪಸರಿಸಿದೆ. ಇಂತಹ ಶಕ್ತಿದೇವತೆ ಈ ಬಾರಿಯ ದರ್ಶನೋತ್ಸವಕ್ಕೆ ಇಂದು ಶಾಸ್ತ್ರೋಕ್ತವಾಗಿ ತೆರೆ ಬೀಳಲಿದೆ.

ಎರಡು ಬಾರಿ ನನಗೆ ಮನಸಿಲ್ಲದಿದ್ದರೂ ಸ್ಪರ್ಧಿಸಿದ್ದೇನೆ, ಈ ಬಾರಿ ಸ್ಪರ್ಧಿಸಲ್ಲ; ಸಚಿವ ಕೃಷ್ಣ ಬೈರೇಗೌಡ

ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ದೇವಾಲಯಕ್ಕೆ ಬೀಗ

ಕಳೆದ ಅಕ್ಟೋಬರ್ 9ರಿಂದ ಆರಂಭವಾಗಿದ್ದ ಹಾಸನಾಂಬೆಯ ದರ್ಶನೋತ್ಸವ ಇಂದು ಸಂಪನ್ನಗೊಳ್ಳಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಪೂಜೆ ಸಲ್ಲಿಸಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಬಾಗಿಲು ಹಾಕಲಾಗುತ್ತೆ. ಈ ವೇಳೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್​ಪಿ ಮಹಮದ್ ಸುಜೀತಾ, ದೇವಾಯಲದ ಆಡಳಿತಾಧಿಕಾರಿ ಮಾರುತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇರಲಿದ್ದಾರೆ. ಈಗಾಗಲೇ 24ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣೇಬೈರೇಗೌಡ ನ್ಯೂಸ್​​ಫಸ್​​ಗೆ ಮಾಹಿತಿ ನೀಡಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದಲ್ಲಿ ಈ ಬಾರಿ 22 ಕೋಟಿಗೂ ಅಧಿಕ ಆದಾಯ ಬಂದಿರೋದಾಗಿ ಹೇಳಿದರು. ಸುಗಮ ದರ್ಶನಕ್ಕೆ ಸಚಿವ ಕೃಷ್ಣಬೈರೇಗೌಡರು ಮಾಡಿದ ವಿನೂತನ ಪ್ರಯೋಗ ಯಶಸ್ವಿಯಾಗಿದ್ದು ಭಕ್ತಗಣಕ್ಕೆ ಅನುಕೂಲ ಆಗಿದೆ. 

ಈ ಹಿಂದಿನ ಎಲ್ಲ ಅವ್ಯವಸ್ಥೆಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಆದ್ಯತೆ ಕೊಡಬೇಕು ಎಂದಾಗ ಎಲ್ಲ ಶಾಸಕರು, ಸದಸ್ಯರು ಸಪೋರ್ಟ್​ ಮಾಡಿದರು. ಜನರು, ಅಧಿಕಾರಿಗಳು ಸಪೋರ್ಟ್ ಮಾಡಿದರು. ನನಗೆ ಹಾಸನದ ಅನುಭವ ಕಡಿಮೆಯಾದರೂ ಎರಡು ತಿಂಗಳಲ್ಲಿ ನೋಡಿದಾಗ ಜನ ನಮಗೆ ಸಹಕಾರ ಕೊಟ್ಟಿದ್ದಾರೆ. ಅವರ ಸಹಕಾರದಿಂದಲೇ ಹಾಸನಾಂಬೆ ದರ್ಶನ ಯಶಸ್ವಿಯಾಗಿದೆ. 

ಕೃಷ್ಣೇಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ 

ಇನ್ನು ನಿನ್ನೆ ಕೊನೇ ದಿನ ಕೂಡ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಧನ್ಯಾರಾದರು. ಬೆಳಗ್ಗೆ 6ಗಂಟೆಯಿಂದಲೇ ಶುರುವಾದ ದೇವಿಯ ದರ್ಶನ ಸಂಜೆ 7 ಗಂಟೆವರಗೂ ಮುಂದುವರಿತ್ತು. ನಂತ್ರ ಹಾಸನಾಂಬೆಯ ವಿಶೇಷ ಪೂಜೆಗಾಗಿ ಗರ್ಭಗುಡಿ ಬಾಗಿಲನ್ನ ಹಾಕಲಾಯಿತು. ಬಳಿಕ ತಡರಾತ್ರಿ ಸಿದ್ದೇಶ್ವರಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ನಡೀತು. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಸನಾಂಬೆ ಜಾತ್ರೋತ್ಸವ ಯಶಸ್ವಿಯಾಗಿ ನಡೆದಿದೆ ಅಂತ ಜಿಲ್ಲಾಧಿಕಾರಿ ಲತಾಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಎಲ್ಲರ ಸಹಕಾರ ಅಗತ್ಯ’  

ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ ನಾವು ಮಾಡಿದ್ದು. ಅವರು ನಮ್ಮ ಜಿಲ್ಲಾಡಳಿತದ ಬೆನ್ನೆಲುಬಾಗಿ ನಿಂತುಕೊಂಡಿದ್ದರು. ಜೊತೆಗೆ ಜನರ ಸಹಕಾರದೊಂದಿಗೆ ಜಿಲ್ಲಾಡಳಿತ ಎಲ್ಲವನ್ನು ಸುಗಮವಾಗಿ ಮಾಡಿತು. 

ಲತಾಕುಮಾರಿ, ಜಿಲ್ಲಾಧಿಕಾರಿ

ಇದನ್ನೂ ಓದಿ:ಗಿಲ್​ಗೆ ಒಲಿಯದ ಆರಂಭದ ಅದೃಷ್ಟ; ಮತ್ತೆ ಟೀಮ್ ಇಂಡಿಯಾ ಫಸ್ಟ್​ ಬ್ಯಾಟಿಂಗ್​, ಪ್ಲೇಯಿಂಗ್- 11?

HSN_LATHA_SUJITHA

ಸಾರ್ವಜನಿಕರಿಗೆ ಆದ್ಯತೆ ಕೊಟ್ಟೆವು

ಸಚಿವರು ಹೇಳಿದಂತೆ ನಮಗೆ ಪ್ರಮುಖ ಆದ್ಯತೆ ಇರುವುದು ಸಾರ್ವಜನಿಕರ ಕ್ಯೂ ಆಗಿತ್ತು. ಅವರಿಗೆ ಆದ್ಯತೆ ಕೊಟ್ಟು ಕ್ಯೂ ಅನ್ನು ಮೂ ಮಾಡಿಸಿದ್ದೇವೆ. ವಿಐಪಿ ಎನ್ನುವುದನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಶೇ.95 ಅಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ. ಪ್ರತಿ ದಿನ ಬ್ಯಾರಿಕೇಡ್​ಗಳನ್ನು ಹಾಕಿಕೊಂಡು ಹೋಗಿದ್ದೇವೆ. ನಿನ್ನೆ ಸಹ 1 ಕಿಲೋ ಮೀಟರ್​ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿತ್ತು. 

ಮೊಹಮ್ಮದ್ ಸುಜೀತಾ, ಎಸ್​ಪಿ



ಹಾಸನಾಂಬೆಯ ಇತಿಹಾಸದಲ್ಲಿಯೇ ಈ ಬಾರಿ ಭಕ್ತರ ದರ್ಶನ ಹಾಗೂ ಆದಾಯ ದಾಖಲೆ ಬರೆದಿದೆ. ಹಾಸನಾಂಬೆ ದರ್ಶನ ಮಾಡಿ ಭಕ್ತಗಣ ಪುನೀತವಾಗಿದೆ. ಇನ್ನೇನಿದ್ರೂ ಮನದ ಆರಾಧನೆ ಹೊರತುಪಡಿಸಿ ಮತ್ತೊಮ್ಮೆ ಅಮ್ಮನನ್ನು ಕಾಣಲು ಮುಂದಿನ ವರ್ಷದವರೆಗೂ ಕಾಯಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hasanamba Temple Hasana
Advertisment