ಗೆಳೆಯನಿಗೆ ‘ಹುಡುಗರು’ ಸ್ಟೈಲ್​ನಲ್ಲಿ ಮದ್ವೆ ಮಾಡಿಸಲು ಮುಂದಾದ ಸ್ನೇಹಿತರು.. ಕಾರು ಆ್ಯಕ್ಸಿಡೆಂಟ್! ಗೆಳೆಯರ ಬಿಟ್ಟು ಕಾಲ್ಕಿತ್ತ ಗೆಳತಿ

ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ ಲವ್ ಮ್ಯಾರೇಜ್ (Love Marriage) ಮಾಡಿಸುವ ಭರದಲ್ಲಿ, ಅತಿಯಾದ ವೇಗದಿಂದಾಗಿ ಕಾರು ಪಲ್ಟಿಯಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಹಳ್ಳಿ ತಾಂಡಾದ ಬಳಿ ನಡೆದಿದೆ.

author-image
Ganesh Kerekuli
car accident (2)
Advertisment

ಹಾವೇರಿ: ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ ಲವ್ ಮ್ಯಾರೇಜ್ (Love Marriage) ಮಾಡಿಸುವ ಭರದಲ್ಲಿ, ಅತಿಯಾದ ವೇಗದಿಂದಾಗಿ ಕಾರು ಪಲ್ಟಿಯಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಹಳ್ಳಿ ತಾಂಡಾದ ಬಳಿ ನಡೆದಿದೆ.
ಅಪಘಾತದಲ್ಲಿ ಪ್ರಿಯಕರ ಸೇರಿ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದ ಯುವತಿ ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾಳೆ.

ಘಟನೆಯ ಸಂಪೂರ್ಣ ವಿವರ

ಮೂಲತಃ ಕಲಬುರಗಿ (ಗುಲ್ಬರ್ಗ) ಜಿಲ್ಲೆಯ ಜೇವರ್ಗಿ ಮೂಲದ ಇರ್ಫಾನ್, ಚಂದ್ರು ಮತ್ತು ಗುರುರಾಜ್ ಎಂಬುವವರು ಗಾಯಗೊಂಡ ಯುವಕರು. ಇವರು ಪ್ರಸ್ತುತ ಬೆಂಗಳೂರಿನಲ್ಲಿದ್ದು, ಅಲ್ಲಿಂದ ಹಾವೇರಿ ಜಿಲ್ಲೆಯ ಚನ್ನಹಳ್ಳಿ ತಾಂಡಾಕ್ಕೆ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು.

chandragutti temple (3)

ಯುವತಿಯನ್ನು ಕರೆದೊಯ್ಯುವಾಗ ಅವಘಡ

ಗಾಯಾಳುಗಳ ಪೈಕಿ ಇರ್ಫಾನ್ ಎಂಬುವವನು ಚನ್ನಹಳ್ಳಿ ತಾಂಡಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗುವ ಪ್ಲಾನ್ ಮಾಡಿಕೊಂಡಿದ್ದ ಈ ಮೂವರು ಸ್ನೇಹಿತರು, ತಾಂಡಾಕ್ಕೆ ಬಂದು ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಯುವತಿಯನ್ನು ಕರೆದೊಯ್ಯುವ ಧಾವಂತದಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸಿದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.

car accident (3)

ಪ್ರಿಯತಮೆ ಎಸ್ಕೇಪ್

ಕಾರು ಅಪಘಾತಕ್ಕೀಡಾಗುತ್ತಿದ್ದಂತೆ ಕಾರಿನಲ್ಲಿದ್ದ ಯುವತಿ ಗಾಬರಿಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಕಾರಿನಲ್ಲಿದ್ದ ಇರ್ಫಾನ್, ಚಂದ್ರು ಮತ್ತು ಗುರುರಾಜ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Haveri news love marriage threatening
Advertisment