Advertisment

ಪ್ರೀತಿಸಿದ ಯುವಕ ಕೈ ಕೊಟ್ಟಿದ್ದರಿಂದ ಯುವತಿ ಆತ್ಮಹ* ತ್ಯೆ : ಯುವತಿ ಪೋಷಕರಿಂದ ಶವವಿಟ್ಟು ಪ್ರತಿಭಟನೆ

ಹಾವೇರಿ ಜಿಲ್ಲೆಯ ಶಂಕರಿಪುರ ಗ್ರಾಮದಲ್ಲಿ ಸಿಂಧೂ ಎಂಬ ಸುಂದರಿ ಯುವತಿ ಆತ್ಮಹತ್ಯೆೆಗೆ ಶರಣಾಗಿದ್ದಾಳೆ. ಇದಕ್ಕೆ ಪ್ರೇಮ ವೈಫಲ್ಯವೇ ಕಾರಣ. ಸಿಂಧೂ , ಶರತ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಗರ್ಭಿಣಿಯೂ ಆಗಿದ್ದಳು. ಆದರೇ, ಶರತ್, ಸಿಂಧೂಳನ್ನು ಮದುವೆಯಾಗಲು ನಿರಾಕರಿಸಿದ್ದ.

author-image
Chandramohan
love failure Haveri girl committs suicide

ಮದುವೆಯಾಗಲು ಪ್ರಿಯತಮ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆ

Advertisment
  • ಮದುವೆಯಾಗಲು ಪ್ರಿಯತಮ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆ
  • ಯುವಕನ ಮನೆ ಮುಂದೆ ಯುವತಿ ಶವ ಇಟ್ಟು ಪೋಷಕರ ಪ್ರತಿಭಟನೆ

ಪ್ರೀತಿಯ ಹೆಸರಿನಲ್ಲಿ ಊರೆಲ್ಲಾ ಸುತ್ತಾಡಿ ಗರ್ಭೀಣಿಯಾದ ಬಳಿಕ ಪ್ರೇಮಿ ಕೈ ಕೊಟ್ಟಿದ್ದರಿಂದ  ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾವೇರಿ ಜಿಲ್ಲೆಯ ಶಂಕರಿಪುರ ಗ್ರಾಮದ ಸಿಂಧೂ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಯುವತಿ ಸಾವಿಗೆ  ಆಕೆ ಪ್ರೀತಿಸುತ್ತಿದ್ದ ಯುವಕನೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ ಯುವತಿಯ ಪೋಷಕರು ಯುವಕ ಶರತ್ ಮನೆ ಮುಂದೆ ಸಿಂಧೂ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. 
ಶಂಕರಿ ಪುರ ಗ್ರಾಮದ ಸಿಂಧೂ ಎಂಬಾಕೆ ಕಳೆದ ನಾಲ್ಕು ವರ್ಷಗಳಿಂದ ಶರತ್ ಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಜೊತೆಯಾಗಿ ಓಡಾಡಿದ್ದರು. ಮನಸ್ಸು ಮನಸ್ಸು ಬೆರೆತಿದ್ದವು. ಪ್ರಿಯತಮನಿಗೆ ಸಿಂಧೂ ತನ್ನ ತನು ಮನವನ್ನು ಅರ್ಪಿಸಿಕೊಂಡಿದ್ದಳು. ಇದರಿಂದಾಗಿ ಸಿಂಧೂ ಗರ್ಭಿಣಿಯಾಗಿದ್ದಳು.  ಆದರೇ, ಸಿಂಧೂ ಗರ್ಭಿಣಿಯಾದ ಬಳಿಕ ಶರತ್ ಕುಮಾರ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. 
ಈ ವಿಷಯ ಸಿಂಧೂ ಪೋಷಕರಿಗೂ ಗೊತ್ತಾಗಿದೆ. ತಮ್ಮ ಮಗಳನ್ನು ಮದುವೆಯಾಗುವಂತೆ ಸಿಂಧೂ ಪೋಷಕರು, ಶರತ್ ಕುಮಾರ್ ನನ್ನು ಕೇಳಿದ್ದಾರೆ , ಆತ ಮದುವೆಯಾಗಲು ಒಪ್ಪಿಲ್ಲ.   ಇನ್ನೂ ಸಿಂಧೂ ಕೂಡ ಪ್ರಿಯತಮ ಶರತ್ ನನ್ನು ಮದುವೆಯಾಗುವಂತೆ ಬೇಡಿಕೊಂಡಿದ್ದಾಳೆ. ಅದಕ್ಕೂ ಜಪ್ಪಯ್ಯ ಅಂದಿಲ್ಲ. ಇದರಿಂದ ನೊಂದ ಸಿಂಧೂ ಸಾಯುವ ದುಡುಕಿನ ನಿರ್ಧಾರ ಮಾಡಿದ್ದಾಳೆ. ಸಿಂಧೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. 
ಇದರಿಂದಾಗಿ ಆಕ್ರೋಶಗೊಂಡ ಸಿಂಧೂ ಪೋಷಕರು ಶರತ್ ಮನೆ ಮುಂದೆ ಸಿಂಧೂ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ . ಶರತ್ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ ಬಳಿಕ ಪೋಷಕರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

HAVERI GIRL COMMITTS SUICIDE
Advertisment
Advertisment
Advertisment