/newsfirstlive-kannada/media/media_files/2025/08/19/tumakuru-bs-rain-2025-08-19-07-26-31.jpg)
ಮಳೆಗೆ ನಿಯಂತ್ರಣ ತಪ್ಪಿ ಬಸ್ ಪಲ್ಟಿ..
/newsfirstlive-kannada/media/media_files/2025/08/19/mandya-rain-2025-08-19-07-28-25.jpg)
ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ!
ಶ್ರೀರಂಗಪಟ್ಟಣದ ರೈಲ್ವೇ ಬ್ರಿಡ್ಜ್ ಬಳಿ ಭೋರ್ಗೆರೆವ ಕಾವೇರಿ ನದಿಯಲ್ಲಿ ಸಿಲುಕಿದ್ದ ಉತ್ತರ ಪ್ರದೇಶ ಮೂಲದ ಲಕ್ಷ್ಮಣ್ ಎಂಬ ವ್ಯಕ್ತಿಯನ್ನ ರಕ್ಷಣೆ ಮಾಡಲಾಗಿದೆ. ಕೆಆರ್ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ನಡುಗಡ್ಡೆಯಲ್ಲಿ ಸಿಲುಕಿದ ಲಕ್ಷ್ಮಣ್, ತನ್ನನ್ನ ರಕ್ಷಣೆ ಮಾಡಿ ಎಂದು ಚೀರಾಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.
/newsfirstlive-kannada/media/media_files/2025/08/19/dharwad-rain-2025-08-19-07-29-00.jpg)
ಧಾರಾಕಾರ ಮಳೆ ನಡುವೆ ಸಿಲುಕಿದ ವಾಹನಗಳು.. ಪರದಾಟ!
ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ಭಾರೀ ಮಳೆಗೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೊಂಡೇಕಾನ್ ಬಳಿ ಪ್ರವಾಸಿ ವಾಹನಗಳು ಸಿಲುಕಿಕೊಂಡಿದ್ದವು. ನೆರವಿಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಮಳೆ ನೀರು ಬೇರೆಡೆಗೆ ಹೋಗುವಂತೆ ಮಾಡಿ ವಾಹನಗಳನ್ನು ಸುಗಮವಾಗಿ ಸಂಚರಿಸುವಂತೆ ಮಾಡಿದ್ದಾರೆ.
/newsfirstlive-kannada/media/media_files/2025/08/19/tumakuru-bs-rain-2025-08-19-07-26-31.jpg)
ಮಳೆಗೆ ನಿಯಂತ್ರಣ ತಪ್ಪಿ ಬಸ್ ಪಲ್ಟಿ.. ಪ್ರಯಾಣಿಕರಿಗೆ ಗಾಯ!
ಸೋನೆ ಮಳೆಯಲ್ಲಿ ಶಿರಾ ತಾಲ್ಲೂಕಿನ ರಂಗಾಪುರ ಗೇಟ್ ಬಳಿ ಶಿರಾ ಖಾಸಗಿ ಬಸ್ ಪಲ್ಟಿಯಾಗಿದೆ. ರಂಗಾಪುರ ಗೇಟ್ನಲ್ಲಿ ಎದುರಿಗೆ ಬಂದ ದ್ವಿಚಕ್ರ ವಾಹನದ ಅಪಘಾತ ತಪ್ಪಿಸಲು ಹೋಗಿ ಚಾಲಕ ಬಸ್ ಎಡಬದಿಗೆ ತಿರುಗಿಸಿದ ಪರಿಣಾಮ ಬಸ್ ಉರುಳಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
/newsfirstlive-kannada/media/media_files/2025/08/19/chikkodi-rain-2025-08-19-07-29-50.jpg)
ಚಿಕ್ಕೋಡಿಯ 8 ಕೆಳ ಹಂತದ ಸೇತುವೆಗಳು ಮತ್ತೆ ಜಲಾವೃತ!
ಭಾರೀ ಮಳೆಯಾಗ್ತಿದ್ದು ಚಿಕ್ಕೋಡಿ ವ್ಯಾಪ್ತಿಯಲ್ಲಿ ಒಂದೇ ರಾತ್ರಿ 8 ಕೆಳ ಹಂತದ ಸೇತುವೆಗಳು ಮತ್ತೆ ಜಲಾವೃತವಾಗಿದೆ. ಅಕ್ಕೋಳ-ಸಿದ್ದಾಳ, ಜತ್ರಾಟ-ಭೀವಶಿ, ಬಾರವಾಡ-ಕುನ್ನೂರ, ಕಾರದಗಾ-ಬೋಜ್ ಸೇರಿದಂತೆ 8 ಸೇತುವೆ ಮುಳುಗಿವೆ. 16 ಗ್ರಾಮಗಳ ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಪರದಾಡುವಂತಾಗಿದೆ.
/newsfirstlive-kannada/media/media_files/2025/08/19/dharwad-rain-car-2025-08-19-07-30-15.jpg)
ಗಾಳಿ ಮಳೆಗೆ ಧರೆಗುರುಳಿದ ಮರ, 2 ಕಾರು ಜಖಂ!
ನಿರಂತರ ಮಳೆಗೆ ಧಾರವಾಡದ ಕೋರ್ಟ್ ವೃತ್ತದ ಬೃಂದಾವನ ಹೊಟೇಲ್ ಬಳಿ ಮರ ಒಂದು ಧರೆಗುರುಳಿದೆ. ಮರ ಬಿದ್ದ ಪರಿಣಾಮ ಪಾರ್ಕಿಂಗ್ ಮಾಡಿದ್ದ 2 ಕಾರುಗಳು ಜಖಂಗೊಂಡಿದೆ.
/newsfirstlive-kannada/media/media_files/2025/08/19/bidra-rain-2025-08-19-07-26-02.jpg)
ಸುರಿದ ಭಾರಿ ಮಳೆಗೆ.. ನೂರಾರು ಎಕರೆಯ ಬೆಳೆ ಹಾನಿ!
ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಔರಾದ್ ತಾಲೂಕಿನ ಭೋಂತಿ ನಾಮಾನಾಯಕ ಗ್ರಾಮದ ಕೆರೆ ಒಡೆದು ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಾನಿಗೊಳಗಾದ 500 ಎಕರೆ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿದರು.
/newsfirstlive-kannada/media/post_attachments/wp-content/uploads/2024/10/RAIN-SCHOOL-1.jpg)
ರೆಡ್ ಅಲರ್ಟ್, ಮಳೆ ಮುನ್ನೆಚ್ಚರಿಕೆ ಇರೋ ಕಾರಣ ರಾಜ್ಯದ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಜಿಲ್ಲೆಯಾದ್ಯಂತ ಇಂದು ಭಾರೀ ಮುನ್ಸೂಚನೆ ಹಿನ್ನೆಲೆ ಬೈಲಹೊಂಗಲ, ಕಿತ್ತೂರು, ಖಾನಾಪುರ, ಸವದತ್ತಿ, ರಾಮದುರ್ಗ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಿದ್ದು, ಎಲ್ಲಾ ಶಾಲಾ-ಕಾಲೇಜಿಗೆ ರಜೆಯ ಆದೇಶ ಹೊರಡಿಸಲಾಗಿದೆ. ಅತ್ತ ಬೀದರ್ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ. ಚಿಕ್ಕಮಗಳೂರು ತಾಲೂಕು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್ ಆರ್.ಪುರ, ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 11 ತಾಲೂಕುಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಧಾರವಾಡದಲ್ಲೂ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿಗೆ ರಜೆ ಕೊಟ್ಟಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಭಾರೀ ಮಳೆಯ ಕಾರಣ ಹಾಸನದ ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಮಳೆಯ ಅವಾಂತರಗಳಿಂದ ಜನರಿಗೆ ಜಲ ಸಂಕಷ್ಟ ಶುರುವಾಗಿದೆ.. ಬೆಳಹಾನಿಯಿಂದ ರೈತರಿಗೆ ಕೆಲವೆಡೆ ನಷ್ಟವೂ ಆಗ್ತಿದೆ. ಒಟ್ಟಾರೆ ಸಾಕಷ್ಟು ಅವಾಂತರಗಳನ್ನ ವರುಣ ಸೃಷ್ಟಿಸಿದ್ದಾನೆ.