ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಱಲಿಗೆ 6 ಸಾವಿರ ಪೊಲೀಸರಿಂದ ಭದ್ರತಾ ವ್ಯವಸ್ಥೆ

ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೋಟ್ ಅಧಿಕಾರ್ ಱಲಿ ನಡೆಸುವರು. ಕಾಂಗ್ರೆಸ್ ಱಲಿಗೆ 6 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆಯೇ 500 ಮಂದಿ ಪೊಲೀಸರು ಇರುತ್ತಾರೆ. ಎಲ್ಲೆಡೆ ಖಾಕಿ ಹದ್ದಿನಕಣ್ಣು ಇರಲಿದೆ

author-image
Chandramohan
RAHUL GANDHI BANGALORE RALLY

ಆಗಸ್ಟ್ 8ರಂದು ಬೆಂಗಳೂರಿಗೆ ಬರುವ ರಾಹುಲ್ ಗಾಂಧಿ

Advertisment
  • ನಾಳೆ(ಆಗಸ್ಟ್ 8) ಬೆಂಗಳೂರಿಗೆ ಬರುವ ರಾಹುಲ್ ಗಾಂಧಿ
  • ರಾಹುಲ್ ಕಾರ್ಯಕ್ರಮದ ಭದ್ರತೆಗಾಗಿ 6 ಸಾವಿರ ಪೊಲೀಸರ ನಿಯೋಜನೆ
  • ಬೆಂಗಳೂರಿನ ಪ್ರಮುಖ ಜಂಕ್ಷನ್ ಗಳಲ್ಲಿ ಖಾಕಿ ಹದ್ದಿನಕಣ್ಣು

ನಾಳೆ( ಆಗಸ್ಟ್ 8) ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ ಹಿನ್ನಲೆಯಲ್ಲಿ  ಪೊಲೀಸರು ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿ ರಾಹುಲ್ ಗಾಂಧಿ ಱಲಿ ನಡೆಸುತ್ತಿದ್ದಾರೆ. ಱಲಿಗೆ ವೋಟ್ ಅಧಿಕಾರ್ ಱಲಿ ಎಂದು ಕಾಂಗ್ರೆಸ್ ಪಕ್ಷ ಹೆಸರಿಟ್ಟಿದೆ. ಈ ಱಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಕ್ಯಾಬಿನೆಟ್ ಸಚಿವರೆಲ್ಲಾ ಭಾಗವಹಿಸುತ್ತಿದ್ದಾರೆ.


ಫ್ರೀಡಂ ಪಾರ್ಕ್ ನಲ್ಲಿ ರಾಷ್ಟ್ರ ಮಟ್ಟದ ನಾಯಕರಿಂದ ಹಿಡಿದು ಗ್ರಾಮ ಪಂಚಾಯಿತಿವರೆಗಿನ ಎಲ್ಲ ನಾಯಕರು ಭಾಗವಹಿಸುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಕಾಂಗ್ರೆಸ್ ಪಕ್ಷದ ಱಲಿ ನಡೆಯಲಿದೆ. 

ಬೆಂಗಳೂರು ಪೊಲೀಸರು, ಫ್ರೀಡಂ ಪಾರ್ಕ್ ಸುತ್ತಮುತ್ತಲ ಪ್ರದೇಶವನ್ನು  ಭದ್ರತೆಯ ಉದ್ದೇಶದಿಂದ 15 ಸೆಕ್ಟರ್ ಗಳಾಗಿ ವಿಂಗಡಣೆ ಮಾಡಿಕೊಂಡಿದ್ದಾರೆ. ಪ್ರತಿ ಸೆಕ್ಟರ್ ಗೆ ಓರ್ವ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗುತ್ತಿದೆ. 

ರಾಹುಲ್ ಗಾಂಧಿಗೆ ಱಲಿಗೆ 6 ಸಾವಿರ ಪೊಲೀಸರ ಭದ್ರತೆ

ನಾಳೆ ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಬೆಂಗಳೂರು ಪೊಲೀಸರು ತಾತ್ಕಾಲಿಕ ಕಂಟ್ರೋಲ್ ರೂಂ ತೆಗೆದು ಭದ್ರತಾ ಕಾರ್ಯ ನಿರ್ವಹಿಸುವರು. 6000  ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಪ್ರತಿಭಟನಾನಿರತರ ನಡುವೆ 500 ಪೋಲಿಸರ ನಿಯೋಜನೆ ಮಾಡಲಾಗುತ್ತಿದೆ. 

ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಡಿಸಿಪಿಗಳ ನೇತೃತ್ವದಲ್ಲಿ 15 ಸೆಕ್ಟರ್ ಗಳಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು  ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಗರುಡ ಪೋರ್ಸ್ ಮತ್ತು ಡಿ ಸ್ವಾತ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

RAHUL GANDHI BANGALORE RALLY POLICE22

ಮುಂಜಾಗ್ರತಾ ಕ್ರಮವಾಗಿ ಅಂಬ್ಯುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್, ಅಗ್ನಿಶಾಮಕ ದಳ ವಾಹನಗಳು ಸ್ಥಳದಲ್ಲಿ ಇರಲಿವೆ. 5 ವಾಯುವಜ್ರ ಬಸ್ ಸೇರಿದಂತೆ ಒಟ್ಟು 15 ಬಸ್ ಗಳನ್ನು ತುರ್ತು ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ.  ಜನರ ಆರೋಗ್ಯ ಕಾಪಾಡಲು ತುರ್ತು ಉದ್ದೇಶಗಳಿಗಾಗಿ ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. 

ಪ್ರತಿಭಟನಾ ಮೆರವಣಿಗೆ ಸಾಗುವ ಮಹಾರಾಣಿ ಜಂಕ್ಷನ್, ಮುಖ್ಯ ಚುನಾವಣಾಯುಕ್ತರ ಕಚೇರಿ , ಕಾವೇರಿ ಗೆಸ್ಟ್ ಹೌಸ್, ಬಿಎಂಸಿ ಹಾಸ್ಟೇಲ್ ಬಳಿ, ಓಣಿ ಆಂಜನೇಯ ದೇವಾಲಯ, ಜ್ಞಾನ ಜ್ಯೋತಿ ಆಡಿಟೋರಿಯಂ, ಪ್ಯಾಲೇಸ್ ರಸ್ತೆ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕುರುಬರ ಸಂಘ ಸರ್ಕಲ್, ಸಾಗರ್ ಜಂಕ್ಷನ್, ಗಾಂಧೀ ನಗರ, ಪೋತಿಸ್ ಜಂಕ್ಷನ್ ಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ  ಘಟನೆ ನಡೆಯದಂತೆ ಕಟ್ಟೆಚ್ಚರವನ್ನು  ಪೊಲೀಸರು ವಹಿಸಿದ್ದಾರೆ. 

RAHUL GANDHI BANGALORE RALLY POILICE

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rahul Gandhi Rahul Gandhi on election fraud
Advertisment