/newsfirstlive-kannada/media/media_files/2025/08/18/bengaluru-rain-2025-08-18-07-33-10.jpg)
/newsfirstlive-kannada/media/media_files/2025/08/18/shimogga-rain-2025-08-18-07-33-49.jpg)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೋನ್ನೆತಾಳು ಗ್ರಾಮದಲ್ಲಿ ಮಾಲತಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಕೊಪ್ಪ, ಶೃಂಗೇರಿ ಕಮ್ಮರಡಿ, ಆಗುಂಬೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜನ ಜೀವನ ಅಸ್ತವ್ಯಸ್ತವಾಗಿದೆ. ಹೋನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ ಸಮೀಪದ ನಾಬಳ ಬಳಿ ರಸ್ತೆ ಬಂದ್ ಆಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರವೇ ಸವಾಲಾಗಿದೆ
/newsfirstlive-kannada/media/media_files/2025/08/18/shimogga-rammantapa-2025-08-18-07-34-09.jpg)
ಮಳೆಯಾರ್ಭಟಕ್ಕೆ ತೀರ್ಥಹಳ್ಳಿ ಪಟ್ಟಣದಲ್ಲಿರುವ ರಾಮ ಮಂಟಪ 3ನೇ ಬಾರಿಗೆ ಮುಳುಗಡೆಯಾಗಿದೆ. ನೀರಂತರ ಮಳೆಯಿಂದಾಗಿ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಸಂಸ್ಕೃತ ನಗರ ಎಂದೇ ಖ್ಯಾತಿಯಾದ ಮತ್ತೂರಿನಲ್ಲಿ ತೋಟಗಳಿಗೆ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕುಸ್ಕೂರು, ಸಿದ್ದರಹಳ್ಳಿ, ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ ಸಾಧ್ಯತೆಯೂ ಇದೆ.
/newsfirstlive-kannada/media/media_files/2025/08/18/jayanagara-tree-2025-08-18-07-34-31.jpg)
ಇದು ಬೆಂಗಳೂರಿನ ಜಯನಗರದ ಯಡೆಯೂರು ಕೆರೆ ಸಮೀಪ ನಡೆದ ದುರಂತ.. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಮೇಲೆ ಬೃಹತ್ ಮರ ಉರುಳಿಬಿದ್ದಿದ್ದು, ಮೂರು ವಿದ್ಯುತ್ ಕಂಬಗಳು.. ಬಸ್ ನಿಲ್ದಾಣದ ಹಿಂದೆ ನಿಲ್ಲಿಸಿದ್ದ ಒಂದು ಬೈಕ್ ಜಖಂಕೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಬಿಬಿಎಂಪಿ ಅರಣ್ಯ ಘಟನೆ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ ದೌಡಾಯಿಸಿ ತೆರವು ಕಾರ್ಯ ಮಾಡಿದ್ದಾರೆ.
/newsfirstlive-kannada/media/media_files/2025/08/18/chikkamagalore-rain-2-2025-08-18-07-35-08.jpg)
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೌಡಹಳ್ಳಿಯಲ್ಲಿ ಭಾರೀ ಮಳೆಗೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಕಾಲುವೆಗಳಂತೆ ಬದಲಾಗಿದೆ. ಕುದುರೆಮುಖ ಭಾಗದಲ್ಲಿ ಭಾರಿ ಮಳೆಯಿಂದಾಗಿ ಭದ್ರಾ ನದಿಯ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಪರಿಣಾಮ ಕಳಸ ಸಮೀಪದ ಹೊರನಾಡು ಸಂಪರ್ಕಿಸುವ ಹಳೇಯ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
/newsfirstlive-kannada/media/media_files/2025/08/18/chikkamagalore-rain-1-2025-08-18-07-35-29.jpg)
ಮಹಾ ಮಳೆಗೆ ಶೃಂಗೇರಿ ಅಕ್ಷರಶಃ ಜಲಾವೃತವಾಗಿದ್ದು, ತುಂಗೆಯ ಹಬ್ಬರಕ್ಕೆ ನದಿಯ ಇಕ್ಕೆಲಗಳ ಹೊಲ-ಗದ್ದೆ-ತೋಟಗಳಿಗೆ ನೀರು ನುಗ್ಗಿದೆ. ಭಾರೀ ಮಳೆಗೆ ಶೃಂಗೇರಿ ಪಟ್ಟಣ ಬಹುತೇಕ ಮುಳುಗಡೆಯಾದ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಗಾಂಧಿ ಮೈದಾನದಲ್ಲಿದ್ದ ಕಾರುಗಳು ಮುಳುಗಿದೆ.
/newsfirstlive-kannada/media/media_files/2025/08/18/gadaga-rain-2025-08-18-07-35-52.jpg)
ಮಳೆಯಿಂದ ಗದಗ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಜನರ ಸಮಸ್ಯೆ ಬಗೆಹರಿಸಬೇಕಾದ ಜಿಲ್ಲಾಡಳಿತ ಭವನವೇ ಸೋರುತ್ತಿದ್ದು, ಕಚೇರಿಯಲ್ಲಿ ಪ್ಲಾಸ್ಟಿಕ್ ಹಾಕಿ, ನೀರು ಬಾರದ ಹಾಗೇ ಕಡತಗಳನ್ನ ರಕ್ಷಿಸೋದೇ ಸವಾಲಾಗಿದೆ.
/newsfirstlive-kannada/media/post_attachments/wp-content/uploads/2024/10/RAIN-SCHOOL.jpg)
ರೆಡ್ ಅಲರ್ಟ್, ಮಳೆ ಮುನ್ನೆಚ್ಚರಿಕೆ ಇರೋ ಕಾರಣ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಸೂಚಿಸಿದ್ದು, ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಿವಮೊಗ್ಗದಲ್ಲೂ ಶಾಲಾ-ಕಾಲೇಜುಗಳಿಗೆ ರೈನ್ ಹಾಲಿ ಡೇ ಅನೌನ್ಸ್ ಮಾಡಲಾಗಿದೆ. ಭಾರೀ ಮಳೆಯ ಕಾರಣ ಹಾಸನದ ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್ ಆರ್.ಪುರ, ಕಳಸ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
/newsfirstlive-kannada/media/media_files/2025/08/18/vanani-vilasa-2025-08-18-07-37-18.jpg)
ಕಳೆದ ಮೂರ್ನಾಲ್ಕು ದಿನಗಳಿಂದ ಭರ್ಜರಿ ಮಳೆಯಾಗಿತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ 700 ಕ್ಯೂಸೆಕ್ಸ್ ನೀರಿನ ಹರಿದು ಬರುತ್ತಿದೆ.
/newsfirstlive-kannada/media/media_files/2025/08/18/tumakuru-rain-2025-08-18-07-37-51.jpg)
ತುಮಕೂರು ನಗರ ಸೇರಿ ವಿವಿಧ ತಾಲೂಕುಗಳಲ್ಲಿ ಧಾರಕಾರ ಮಳೆಯಾಗ್ತಿದೆ. ಸತತ ಅರ್ಧ ಗಂಟೆ ಸುರಿದ ಮಳೆಗೆ ನಗರದ ರಸ್ತೆಗಳು ಕೆರೆಯಂತಾಗಿದೆ. ಮಳೆಯ ಅವಾಂತರಗಳಿಂದ ಜನರಿಗೆ ಜಲ ಸಂಕಷ್ಟ ಶುರುವಾಗಿದೆ.. ಬೆಳಹಾನಿಯಿಂದ ರೈತರಿಗೆ ಕೆಲವೆಡೆ ನಷ್ಟವೂ ಆಗ್ತಿದೆ. ಮಕ್ಕಳಿಗೆ ಶಾಲೆಗೆ ರಜೆಯೂ ಸಿಕ್ಕಿದೆ. ಮಳೆಯಿಂದಾಗಿ ನೋವು-ನಲಿವುಗಳೆರಡು ಕಾಣಸಿಕ್ಕಿದೆ.