/newsfirstlive-kannada/media/media_files/2025/10/11/bng_rain-2025-10-11-07-06-51.jpg)
ರಾಜ್ಯದಲ್ಲಿ ಅಕ್ಟೋಬರ್ 25ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಇಂದು ಮತ್ತು ನಾಳೆ ಅತ್ಯಧಿಕ ಮಳೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ 7 ದಿನಗಳ #ಮಳೆ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ ಹಾಗೂ ಇಂದು ಮತ್ತು ನಾಳೆ ಅಲ್ಲಲ್ಲಿ ಅತಿ ಭಾರಿ ಮಳೆ. pic.twitter.com/lc8KtL4lPv
— Karnataka State Natural Disaster Monitoring Centre (@KarnatakaSNDMC) October 22, 2025
ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಸೇರಿದಂತೆ ಉಳಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಳಿಯು ಗಂಟೆಗೆ 30-40km ವೇಗದಲ್ಲಿ ಬೀಸಲಿದ್ದು., ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ಮಳೆಯ ಬಗ್ಗೆ ಮುನ್ಸೂಚನೆ ನೀಡಿದೆ.
/filters:format(webp)/newsfirstlive-kannada/media/media_files/2025/10/22/indian-meterological-dept-bangalore-2025-10-22-14-58-21.jpg)
ಇನ್ನೂ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿದಿದೆ. ನಿನ್ನೆ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ಜಲಾವೃತ್ತ ಆಗಿವೆ. ಗುಬ್ಬಿ ಬಸ್ ನಿಲ್ದಾಣದ ಎದುರಿನ ಶಿವಮೊಗ್ಗ ತುಮಕೂರು ರಸ್ತೆ ಜಲಾವೃತ್ತವಾಗಿತ್ತು. ರಸ್ತೆ ಮೇಲೆ ನಿಂತ ಮಳೆ ನೀರಿನಿಂದ ಜನರ ಓಡಾಟಕ್ಕೆ ತೊಂದರೆಯಾಗಿತ್ತು. ಮಂಡಿ ಎತ್ತರದ ನೀರಿನಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಅವಾಂತರ ಸೃಷ್ಟಿಯಾಗಿತ್ತು.
ಇನ್ನೂ ಗುಬ್ಬಿ ತಾಲ್ಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಕಾರ್ ಕೊಚ್ಚಿ ಹೋಗಿದೆ. ಸಮಯ ಪ್ರಜ್ಞೆಯಿಂದ ಕಾರ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಗುಬ್ಬಿ ತಾಲ್ಲೂಕಿನ ತೋಟಸಾಗರದ ತೊರೆಯಲ್ಲಿ ಈ ಅವಘಡ ಸಂಭವಿಸಿದೆ. ತೋಟಸಾಗರ ಗ್ರಾಮದ ನಿವಾಸಿ ಮಂಜುನಾಥ್ ಕಾರ್ ನಲ್ಲಿ ತೊರೆ ದಾಟುವಾಗ ನೀರಿನ ಹರಿವು ಹೆಚ್ಚಾಗಿತ್ತು. ಕಾರಿನಲ್ಲಿ ತೊರೆ ದಾಟಲು ಯತ್ನಿಸಿದಾಗ, ಕಾರ್ ತೊರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಾರ್ ಕೊಚ್ಚಿ ಹೋಗುವ ಮುನ್ನವೇ ಕಾರ್ ಚಾಲಕ ಮಂಜುನಾಥ್ ಕಾರಿನಿಂದ ಕೆಳಗೆ ಇಳಿದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಕಾರ್ ಪಕ್ಕದಲ್ಲೇ ಟೆಂಪೋ ಕೂಡ ಹೋಗುತ್ತಿತ್ತು. ಟೆಂಪೋದ ನೀರಿನ ರಭಸಕ್ಕೆ ಕಾರ್ ತೊರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಬಳಿಕ 2 ಗಂಟೆಗಳ ಸತತ ಪ್ರಯತ್ನದಿಂದ ಕಾರ್ ಅನ್ನು ತೊರೆಯಿಂದ ಮೇಲಕ್ಕೆ ಎತ್ತಲಾಗಿದೆ.
ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆಯ ತಾಲ್ಲೂಕು ಆದ ಕಡೂರು ತಾಲ್ಲೂಕಿನಲ್ಲಿ ಭಾರಿ ಮಳೆ ನೀರಿನಂದಾಗಿ ಹಳ್ಳದ ನೀರಿನಲ್ಲಿ ಎತ್ತು ಮತ್ತು ಎತ್ತಿನ ಗಾಡಿ ಕೊಚ್ಚಿಕೊಂಡು ಹೋಗಿವೆ. ಕಡೂರು ತಾಲ್ಲೂಕಿನ ತುರುವನಹಳ್ಳಿ ಹಳ್ಳದಲ್ಲಿ ಎತ್ತು ಮತ್ತು ಎತ್ತಿನ ಗಾಡಿ ಕೊಚ್ಚಿಕೊಂಡು ಹೋಗಿವೆ. ಕಡೂರು ತಾಲ್ಲೂಕಿನ ಉಲ್ಲೇನಹಳ್ಳಿಯ ಲಕ್ಷ್ಮಣ್ ಎಂಬುವವರಿಗೆ ಸೇರಿದ್ದ ಎತ್ತು ಮತ್ತು ಎತ್ತಿನ ಗಾಡಿ ಕೊಚ್ಚಿಕೊಂಡು ಹೋಗುತ್ತಿದ್ದಂತೆ, ರೈತ ಲಕ್ಷ್ಮಣ್ ಗಾಡಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us