/newsfirstlive-kannada/media/media_files/2026/01/08/winzo-games-should-co-operate-in-ed-probe-1-2026-01-08-19-39-43.jpg)
ವಿನ್ಜೋ ಗೇಮ್ಸ್ ಗೆ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ
ವಿನ್ಜೋ ಗೇಮಿಂಗ್ ಆ್ಯಪ್ ನಲ್ಲಿ ಪಾನ್ ಕಾರ್ಡ್ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ಸಹಕರಿಸಲು ವಿನ್ಜೋ ಗೇಮ್ಸ್ ಪ್ರೈ. ಲಿ.ಗೆ ಹೈಕೋರ್ಟ್ ಸೂಚನೆ ನೀಡಿದೆ. ತಮ್ಮ ಪ್ಯಾನ್ ಕಾರ್ಡ್ ದುರುಪಯೋಗವಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ವಿವರ ನೀಡಿ ದೂರು ದಾಖಲಿಸುವಂತೆ ವಿನ್ಜೋ ಗೇಮ್ಸ್ ಪ್ರೈ.ಲಿ ತಿಳಿಸಿತ್ತು. ಈ ಕೇಸ್ ನಲ್ಲಿ ಪೊಲೀಸರು ತನಿಖೆಗೆ ಹಾಜರಾಗುವಂತೆ ವಿನ್ಜೋ ಗೇಮ್ಸ್ ಪ್ರೈ.ಲಿಮಿಟೆಡ್ ಗೆ ಸಮನ್ಸ್ ನೀಡಿದ್ದರು. ಜನವರಿ 12 ರಂದು ಪೊಲೀಸರ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ವಿನ್ಜೋ ಗೇಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹೈಕೋರ್ಟ್ ಸೂಚನೆ ನೀಡಿದೆ. ವಿಚಾರಣೆ ನೆಪದಲ್ಲಿ ಕಿರುಕುಳ ನೀಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಕೇಸ್ ಹಿನ್ನೆಲೆ ಏನು ಗೊತ್ತಾ?
ವಿನ್ಜೋ ಗೇಮಿಂಗ್ ಆ್ಯಪ್ ಹಗರಣ.
ಖ್ಯಾತ ವಿನ್ಜೋ ಆ್ಯಪ್ ನಿಂದ ಲಕ್ಷಾಂತರ ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಕ್ರಮ ಹಣ ವ್ಯವಹಾರ ಸಂಬಂಧ ವಿನ್ಜೋ ಆ್ಯಪ್ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ.
ನವೆಂಬರ್ ನಲ್ಲಿ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು. ದೇಶದ ಹಲವು ರಾಜ್ಯಗಳಲ್ಲಿ ವಿನ್ಜೋ ಗೇಮಿಂಗ್ ಆ್ಯಪ್ ವಿರುದ್ಧ ಕೇಸ್ ದಾಖಲಾಗಿದೆ. ದೆಹಲಿ, ಕರ್ನಾಟಕ, ಗಾಜಿಯಾಬಾದ್, ರಾಜಸ್ಥಾನದಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಇ.ಡಿ ಅಧಿಕಾರಿಗಳು ಕೂಡ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವಿನ್ಜೋ ಕೋ ಫೌಂಡರ್ ಸೌಮ್ಯ ಸಿಂಗ್ ಹಾಗೂ ಸಿಇಒ ಪವನ್ ನಂದಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಎಐ ತಂತ್ರಜ್ಞಾನ ಬಳಸಿ ಜನರಿಗೆ ಮೋಸ ಮಾಡ್ತಿರುವ ಬಗ್ಗೆ ದೂರು ಬಂದಿತ್ತು. ದೂರಿನ ಅನ್ವಯ ತನಿಖೆ ವೇಳೆ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವ್ಯವಹಾರ ಪತ್ತೆಯಾಗಿತ್ತು. ಸುಮಾರು 500 ಕೋಟಿಗೂ ಹೆಚ್ಚು ಹಣವನ್ನು ಇ.ಡಿ. ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.
ಇತ್ತೀಚೆಗೆ ಪ್ರಕರಣ ಸಂಬಂಧ ಕೋ ಫೌಂಡರ್ ಸೌಮ್ಯ ಸಿಂಗ್ ರಾಥೋಡ್ ಜಾಮೀನು ಪಡೆದಿದ್ದಾರೆ. ಮತ್ತೋರ್ವ ಆರೋಪಿ ಪವನ್ ನಂದಾ ಇ.ಡಿ. ಕಸ್ಟಡಿಗೆ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡಿ ಸೆಷನ್ಸ್ ಕೋರ್ಟ್ ಆದೇಶ ನೀಡಿತ್ತು.
ಇಂದು ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ಪವನ್ ನಂದಾನ ಕೋರ್ಟ್ ಗೆ ಇ.ಡಿ. ಹಾಜರುಪಡಿಸಿತ್ತು. ಇ.ಡಿ. ಪರ ಎಸ್.ಪಿ.ಪಿ ಮಧು ಎನ್ ರಾವ್ ವಾದ ಮಂಡಿಸಿದ್ದರು.
/filters:format(webp)/newsfirstlive-kannada/media/media_files/2026/01/08/winzo-games-should-co-operate-in-ed-probe-2026-01-08-19-40-34.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us