/newsfirstlive-kannada/media/media_files/2025/11/19/yakshagana-and-bilimale-2025-11-19-12-03-32.jpg)
ಯಕ್ಷಗಾನದೊಳಗೆ ಸಲಿಂಗಕಾಮ ಬೆಳೆಯುತ್ತೆ ಎಂದ ಪುರುಷೋತ್ತಮ ಬಿಳಿಮಲೆ!
ಯಕ್ಷಗಾನದ ಒಳಗೆ ಎಷ್ಟೋ ಬಾರಿ ಸಲಿಂಗಕಾಮ (ಹೋಮೊಸೆಕ್ಸ್) ಬೆಳೆಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯ ಪ್ರಸಾರಂಗದಲ್ಲಿ ಧರೆಗೆ ದೊಡ್ಡವರ ಏಳು ಕಾವ್ಯದ ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿ ಬಿಡುಗಡೆ ಮಾಡಿ ಮಾತನಾಡಿರುವ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಯಕ್ಷಗಾನದ ಮೇಳದ ಸಲುವಾಗಿ, ಜನಪದ ಕಾರ್ಯಕ್ರಮದ ಸಲುವಾಗಿ ಆರು ತಿಂಗಳ ಕಾಲ ಮನೆಯಿಂದ ದೂರ ಇರುತ್ತಾರೆ . ಅಂತಹ ಸಮಯದಲ್ಲಿ ಕಲಾವಿದರ ಕಾಮ ಹೇಗಿರುತ್ತೆ ? ಯಕ್ಷಗಾನದ ಒಳಗಡೆ ಅದು ಅನಿವಾರ್ಯ . ಸ್ತ್ರೀ ವೇಷಧಾರಿಗಳಿಗೆ ಹೆಚ್ಚು ಒತ್ತಡವಿರುತ್ತದೆ . ಸ್ತ್ರೀ ವೇಷಧಾರಿಯ ಮೇಲೆ ಇತರರ ಕಣ್ಣು ಇರುತ್ತೆ. ಇದು ಕಲಾವಿದರ ಸಂಬಂಧ . ಸ್ತ್ರೀ ವೇಷಧಾರಿ ಅದನ್ನು ನಿರಾಕರಿಸಿದರೆ ಮರು ದಿವಸ ಭಾಗವತರು ಅವನಿಗೆ ಹೆಚ್ಚು ಪದ್ಯ ಕೊಡುವುದಿಲ್ಲ . ಇದು ಬದುಕಿನ ಪ್ರಶ್ನೆ . ಕಲೆ, ದೈಹಿಕ ಕಾಮನೆಗಳು ರಂಗಭೂಮಿಯ ಎದುರು ಕಾಣುವ ಲೋಕಕ್ಕಿಂತ ಭಿನ್ನವಾಗಿರುವ ಕುರಿತು ವಿದ್ವಾಂಸರು ತಿಳಿದು ಅರ್ಥಮಾಡಿಕೊಂಡು ಯಾರಿಗೂ ನೋವಾಗದಂತೆ ಬರೆದರೆ ಜಾನಪದಕ್ಕೆ ಹೊಸ ಆಯಾಮ ಬರುತ್ತೆ ಎಂದು ಕಾರ್ಯಕ್ರಮದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಇದು ತೀವ್ರ ವಿರೋಧ ಹಾಗೂ ಆಕ್ಷೇಪಕ್ಕೆ ಕಾರಣವಾಗಿದೆ. ಡಾ.ಪುರುಷೋತ್ತಮ ಬಿಳಿಮಲೆ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ.
ತಮ್ಮ ಹೇಳಿಕೆಗೆ ವಿರೋಧ ಮತ್ತು ಆಕ್ಷೇಪ ವ್ಯಕ್ತವಾದ ಬಳಿಕ ಡಾ.ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/19/dr-purushotham-bilimale-2025-11-19-12-07-01.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us