/newsfirstlive-kannada/media/media_files/2025/08/02/bk_singh_sit-2025-08-02-18-15-05.jpg)
ವಿಡಿಯೋ ಪ್ರಜ್ವಲ್ನದ್ದೇ ಅಂತ ಪತ್ತೆ ಹಚ್ಚಿದ್ದು ಇದೇ ಟೆಕ್ನಾಲಜಿ! ಉಗುರು, ಕೈ ಬೆರಳು, ಚರ್ಮ.. ಹೇಗೆ ನಡೆಯುತ್ತೆ ಪರೀಕ್ಷೆ ? ಜಪಾನ್, ಟರ್ಕಿಲಿ ಬಳಕೆ.. ಭಾರತದಲ್ಲಿ ಇದೇ ಮೊದಲ ಪ್ರಯೋಗ! ಯಾವ ತಂತ್ರಜ್ಞಾನವನ್ನು ಬಳಕೆ ಮಾಡಿ, ಪ್ರಾಸಿಕ್ಯೂಷನ್ ಸೆಕ್ಸ್ ವಿಡಿಯೋಗಳಲ್ಲಿ ಇರೋದು ಪ್ರಜ್ವಲ್ ರೇವಣ್ಣನೇ ಅಂತ ಕೋರ್ಟ್ ನಲ್ಲಿ ಸಾಬೀತುಪಡಿಸಿದ್ದರು ಅನ್ನೋದು ಸಖತ್ ಇಂಟರೆಸ್ಟಿಂಗ್ ಆಗಿದೆ. ಜಪಾನ್, ಜರ್ಮನಿ, ಟರ್ಕಿ ದೇಶಗಳಲ್ಲಿ ಬಳಕೆಯಲ್ಲಿದ್ದ ಆ ತಂತ್ರಜ್ಞಾನವನ್ನು ಎಸ್‌ಐಟಿ ಪೊಲೀಸರು ಪ್ರಜ್ವಲ್ ವಿರುದ್ಧದ ರೇಪ್ ಕೇಸ್ ತನಿಖೆಯಲ್ಲಿ ಬಳಕೆ ಮಾಡಿದ್ದಾರೆ. ಹಾಗಾದರೇ, ಆ ತಂತ್ರಜ್ಞಾನ ಯಾವುದು? ಅದನ್ನು ಹೇಗೆ ಬಳಕೆ ಮಾಡಿ, ಸೆಕ್ಸ್ ವಿಡಿಯೋಗಳಲ್ಲಿರುವುದು ಪ್ರಜ್ವಲ್ ರೇವಣ್ಣ ಎಂದು ಹೇಗೆ ಕೋರ್ಟ್ ನಲ್ಲಿ ಸಾಬೀತುಪಡಿಸಲಾಯಿತು ಅನ್ನೋ ವಿವರ ಈ ವರದಿಯಲ್ಲಿದೆ.
ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ.. ನ್ಯಾಯಾಲಯ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಬರೋದೆ ಇಂಥಾ ತೀರ್ಪುಗಳು ಬಂದಾಗ.. ವ್ಯವಸ್ಥೆಯೇ ತಿರುಗಿ ಬಿದ್ರು, ಕೊನೆಗೆ ಕಣ್ಣಿಗೆ ಕಾಣಿಸೋದು ನ್ಯಾಯದೇವತೆ. ಹಾಸನದ ಪ್ರಜ್ವಲ್ ರೇವಣ್ಣ ಕೇಸ್ನಲ್ಲೂ ಇವತ್ತು ನ್ಯಾಯದೇವತೆ ಕಣ್ಣು ತೆರೆದಿದ್ದಾಳೆ.. ದೊಡ್ಡವರೇ ಆಗ್ಲಿ, ದೊಡ್ಡ ಮನೆತನದವರೇ ಆಗಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಅನ್ನೋದನ್ನ ಈ ತೀರ್ಪು ಸಾರಿದೆ... ಆದ್ರೆ ಪ್ರಜ್ವಲ್ ರೇವಣ್ಣ ಅಪರಾಧಿ ಅಂತ ಸಾಬೀತು ಮಾಡೋಕೆ ಸಾಕ್ಷಿಯಾಗಿದ್ದೇ ಆ ವಿಡಿಯೋಗಳು ಅಂದ್ರೆ ನೀವು ನಂಬಲೇಬೇಕು. ಹಾಗಾದ್ರೆ, ಮುಖವೇ ಕಾಣದೇ ಇದ್ರೂ ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅಂತ ಪ್ರೂವ್ ಆಗಿದ್ದೇಗೆ? ಅದ್ಯಾವ ಟೆಕ್ನಾಲಜಿ ಈ ಕೇಸ್ಗೆ ಸಹಾಯ ಮಾಡ್ತು? ಅದನ್ನು ಈ ವರದಿಯಲ್ಲಿ ನಿಮ್ಮ ಮುಂದೆ ಇಡುತ್ತೇವೆ.
ಜಸ್ಟಿಸ್ ಸರ್ವಡ್.. ಇವತ್ತು ಪ್ರತಿಯೊಬ್ಬರ ಬಾಯಲ್ಲಿ ಕೇಳಿ ಬರ್ತಿರೋ ಮಾತು.. ಸೋಷಿಯಲ್ ಮೀಡಿಯಾದಿಂದ ಹಿಡಿದು ಕೆಲ ಸೆಲೆಬ್ರಿಟಿಗಳು ಕೂಡ ಇದೇ ಮಾತನ್ನ ಪದೇ ಪದೇ ಪುನುರುಚ್ಚರಿಸ್ತಿದ್ದಾರೆ. ಅದ್ಕೆ ಕಾರಣ.. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್.. ದೊಡ್ಡವರು, ದೊಡ್ಡ ಮನೆತನವಿದ್ರೂ ಕೋರ್ಟ್ಗೆ ಯಾವುದೇ ಹಂಗಿಲ್ಲ ಅನ್ನೋದನ್ನ ಕೋರ್ಟ್ ಆದೇಶ ಸಾರಿ ಸಾರಿ ಹೇಳಿತ್ತು. ಅತ್ಯಾಚಾರದ ಕೇಸ್ನಲ್ಲಿ ಪ್ರಜ್ವಲ್ ಅಪರಾಧಿ ಅಂತ ಆದೇಶ ನೀಡಿ ಜೀವಾವಧಿ ಶಿಕ್ಷೆಯನ್ನ ಪ್ರಕಟಿಸಿತ್ತು. ಅತ್ಯಾಚಾರ ಕೇಸ್ನಲ್ಲಿ ದೋಷಿ ಅಂತ ತೀರ್ಮಾನ ಕೊಟ್ಟ ಕೋರ್ಟ್ ಶಿಕ್ಷೆಯ ಪ್ರಮಾಣದ ಬೇಡಿ ಹಾಕಿತ್ತು.. ಮನೆಗೆಲಸದಾಕೆ ಮೇಲು ಹದ್ದಿನಂತೆ ಮುಕ್ಕಿದ ಕೇಸ್ನಲ್ಲಿ ಜೈಲುವಾಸದಲ್ಲೇ ಜೀವನ ಕಳೆಯುವ ಘನ ಘೋರ ಶಿಕ್ಷೆ ವಿಧಿಸಿತ್ತು.. ಜೊತೆಗೆ 11 ಲಕ್ಷ ರೂ.ಗೂ ಹೆಚ್ಚು ಮೊತ್ತದ ದಂಡ ವಿಧಿಸಿ, ಈ ಮೂಲಕ ಸಮಾಜದಲ್ಲಿ ಅದೆಷ್ಟೇ ದೊಡ್ಡವರಿದ್ರೂ ಕಾನೂನಿಗಿಂತ ಚಿಕ್ಕವರು ಅನ್ನೋ ಸಂದೇಶ ನೀಡಿತ್ತು.
ಪ್ರಜ್ವಲ್ ರೇವಣ್ಣ ಕೇಸ್ನಲ್ಲೇ ಆಗಲಿ ಅಥವಾ ಯಾವುದೇ ಕೇಸ್ನಲ್ಲಿ ಆಗಲಿ ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಪೂರಕ ಸಾಕ್ಷಿಗಳು ಎಷ್ಟೆ ಇದ್ರು, ಆರೋಪಿಯನ್ನ ಅಪರಾಧಿ ಅಂತ ಪ್ರೂವ್ ಮಾಡೋಕೆ ಸ್ಟ್ರಾಂಗ್ ಪ್ರೂಫ್ಗಳು ಬೇಕೆ ಬೇಕು.. ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಸಂತ್ರಸ್ತೆ ಹೇಳಿಕೆ ಕೊಟ್ಟಿದ್ರು.ಅದಕ್ಕೆ ಬೇಕಾದ ಸಾಕ್ಷಿಗಳು ಬೇಕಲ್ವಾ. ಆ ಸಾಕ್ಷಿಗಳೇ ಪ್ರಜ್ವಲ್ ರೇವಣ್ಣ ಮಾಡಿದ್ದ ವಿಡಿಯೋಗಳು. ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಕೋರ್ಟ್ ಗರಂ ಆಗೋದಕ್ಕೆ ಕಾರಣವಾಗಿದ್ದು, ಪ್ರಜ್ವಲ್ ರೇವಣ್ಣನ ವಿಕೃತಿ.. ಹೊಟ್ಟೆಪಾಡಿಗಾಗಿ ಅಂತ ಕೆಲಸಕ್ಕೆ ಬರ್ತಿದ್ದ ಅಮ್ಮನ ವಯಸ್ಸಿನ ಮಹಿಳೆಯನ್ನ ಹದ್ದಿನಂತೆ ಎರಗಿ ಮುಕ್ಕಿಬಿಟ್ಟಿದ್ದ. ಆದ್ರೆ ಇವನ ವಿಕೃತ ಇಷ್ಟಕ್ಕೆ ನಿಂತಿರಲ್ಲಿಲ್ಲ. ರಣ ರಾಕ್ಷಸನಂತೆ ಎರಗಿ ದೌರ್ಜನ್ಯ ಎಸಗಿದ್ದನ್ನ ನಾಚಿಕೆ ಬಿಟ್ಟು ವಿಡಿಯೋ ಮಾಡ್ಕೊಂಡಿದ್ದ. ಆ ವಿಡಿಯೋಗಳೇ ಊರೆಲ್ಲ ಹರಿದಾಡಿ ಇವನ ಮೂರು ಕಾಸಿನ ಚಿಲ್ಲರೆ ಬುದ್ಧಿಯನ್ನ ಜನರ ಮುಂದೇ ಪ್ರದರ್ಶನ ಮಾಡಿದ್ವು.. ಪ್ರಜ್ವಲ್ ರೇವಣ್ಣ ಅದೆಂತಾ ಕಾಮ ಪಿಶಾಚಿ, ವಿಕೃತ ಮನಸ್ಸಿನ ಕ್ರಿಮಿ ಅನ್ನೋದನ್ನ ಸಾರಿ ಸಾರಿ ಹೇಳಿತ್ತು. ಆದ್ರೆ, ಈ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅಂಗಾಗ ಪ್ರದರ್ಶನ ಮಾಡಿದ್ದನೇ ಹೊರತು ತನ್ನ ಮುಖಾರವಿಂದವನ್ನ ತೋರಿಸಿರಲ್ಲಿಲ್ಲ.. ಆದ್ರಿವತ್ತು ಆ ವಿಡಿಯೋಗಳೇ ಪ್ರಜ್ವಲ್ ರೇವಣ್ಣನ್ನ ಜೀವಾವಧಿ ಶಿಕ್ಷೆಗೆ ಗುರಿಯಾಗುವಂತೆ ಮಾಡಿರೋದು ಇಂಟ್ರಸ್ಟಿಂಗ್..
ವಿಡಿಯೋ ಪ್ರಜ್ವಲ್ನದ್ದೇ ಅಂತ ಪತ್ತೆ ಹಚ್ಚಿದ್ದು ಇದೇ ಟೆಕ್ನಾಲಜಿ!
ಜಪಾನ್, ಟರ್ಕಿಲಿ ಬಳಕೆ.. ಭಾರತದಲ್ಲಿ ಇದೇ ಮೊದಲ ಪ್ರಯೋಗ!
ನಿಮಗೆ ಗೊತ್ತಿದ್ಯೋ ಇಲ್ವೋ. ಇವತ್ತು ಪ್ರಜ್ವಲ್ ರೇವಣ್ಣ ಅಪರಾಧಿ ಅಂತ ಪ್ರೂವ್ ಆಗಿದ್ದು, ಒಂದೇ ಕೇಸ್ನಲ್ಲಿ.. ಇನ್ನೂ ಮೂರು ಕೇಸ್ಗಳ ವಿಚಾರಣೆ ಬಾಕಿ ಇದೆ.. ಕೆ.ಆರ್ ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.. 2024 ರಲ್ಲಿ ಮನೆಕೆಲಸದಾಕೆ ಜೊತೆ ಪ್ರಜ್ವಲ್ ರೇವಣ್ಣ ಎಸಗಿದ್ದ ದೌರ್ಜನ್ಯದ ವಿಡಿಯೋ ಕೂಡ ವೈರಲ್ ಆಗಿತ್ತು. ಆದ್ರೆ ಆ ವಿಡಿಯೋದಲ್ಲಿ ಇದ್ದಿದ್ದು ಪ್ರಜ್ವಲ್ ರೇವಣ್ಣನೇ ಅಂತ ಸಾಬೀತಾಗಿ ಈ ಶಿಕ್ಷೆ ವಿಧಿಸಲಾಗಿದೆ.. ಹಾಗಾದ್ರೆ ಅದನ್ನ ಪತ್ತೆ ಮಾಡಿದ್ದಾದ್ರು ಹೇಗೆ ಅಂತೀರಾ? ಅದಕ್ಕೆ ಕಾರಣ ಟೆಕ್ನಾಲಜಿ.. ಇವತ್ತಿನ ಕಾಲ ಟೆಕ್ನಾಲಜಿ ಕಾಲ.. ತಪ್ಪು ಮಾಡಿದವನು ಅದೆಷ್ಟೆ ಬುದ್ಧಿವಂತನಾಗಿದ್ರು, ತಂತ್ರಜ್ಞಾನ ಕರ್ಮದ ಫಲವನ್ನ ಕೊಟ್ಟು ಬಿಡುತ್ತೆ. ಯಾಕಂದ್ರೆ ಇವತ್ತು ಟೆಕ್ನಾಲಜಿ ಅಷ್ಟರ ಮಟ್ಟಿಗೆ ಬೆಳೆದಿದೆ. ಸಣ್ಣ ಸುಳಿವು ಕೂಡ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಬಹುದೊಡ್ಡ ಸಾಕ್ಷಿಯಾಗುತ್ತೆ. ಇಂತಾ ಟೆಕ್ನಾಲಜಿಯನ್ನೆ ಬಳಸಿ ಇವತ್ತು ಅದೆಷ್ಟು ಕೇಸ್ಗಳ ರಹಸ್ಯ ಬಯಲಾಗಿರೋದು ನಿಮಗೆ ಗೊತ್ತಿದೆ... ಪ್ರಜ್ವಲ್ ರೇವಣ್ಣ ಕೇಸ್ನಲ್ಲೂ ಅಧಿಕಾರಿಗಳು ಇಂಥಾದ್ದೆ ಒಂದು ಟೆಕ್ನಾಲಜಿ ಬಳಸಿ ಆರೋಪಿಯನ್ನ ಅಪರಾಧಿ ಅಂತ ಸಾಬೀತು ಮಾಡಿದ್ದಾರೆ. ಅಷ್ಟಕ್ಕೂ ಯಾವುದು ಆ ಟೆಕ್ನಾಲಜಿ ಅಂದ್ರೆ, Anatomical Comparison of Genital Features..
ಹೌದು. 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಎಲ್ಲೂ ಪ್ರಜ್ವಲ್ ರೇವಣ್ಣನ ಮುಖ ಕಂಡಿಲ್ಲ. ಆದ್ರೆ, ಕೆಲವು ಫೋಟೋಗಳಲ್ಲಿ ಮಾತ್ರ ಕಂಡಿತ್ತು. ಹೀಗಾಗಿ ವಿಡಿಯೋನಲ್ಲಿರುವುದು ಪ್ರಜ್ವಲ್ ಅಲ್ಲ ಎಂದು ಕೆಲವರು ವಾದ ಮಾಡಿದ್ದರೆ, ಇನ್ನು ಕೆಲವರು ಇದು ಪ್ರಜ್ವಲ್ ರೇವಣ್ಣ, ಅವರ ಧ್ವನಿ ಸಹ ಇದೆ ಎಂದು ವಾದಿಸಿದ್ದರು.. ಹೀಗಾಗಿ ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿದ್ದಾನೆ ಅಂತ ಸಾಬೀತು ಮಾಡೋದು ತುಸು ಕಷ್ಟವೇ ಆಗಿತ್ತು. ಇದಕ್ಕಾಗಿಯೇ ಅಧಿಕಾರಿಗಳು Anatomical Comparison of Genital Features ನ್ನ ಬಳಸಿದ್ರು..
ಈ ಟೆಕ್ನಾಲಜಿಯಲ್ಲಿ ಪರೀಕ್ಷೆ ಮಾಡೋದು ಜನನೇಂದ್ರಿಯದ ಫಿಸಿಕಲ್ ಅಪಿಯರೇನ್ಸ್.. ಅಂದ್ರೆ ಜನನೇಂದ್ರಿಯದ ಉದ್ರೇಕದ ಸಂದರ್ಭದಲ್ಲಿ ಅದರ ಫಿಸಿಕಲ್ ಅಪಿಯರೆನ್ಸ್ ಹಾಗೂ ಚಲನವಲನಗಳ ವೇಳೆ ಜನನೇಂದ್ರಿಯ ಸುತ್ತಲಿನ ಭಾಗಗಳಲ್ಲಿ ಆಗುವ ಮಾಂಸಖಂಡಗಳ ಚಲನೆ ಇತ್ಯಾದಿಗಳಿಂದ ಆರೋಪಿಯನ್ನು ಪತ್ತೆ ಹಚ್ಚುವ ತಂತ್ರಜ್ಞಾನವದು.. ಇದೇ ಟೆಕ್ನಾಲಜಿಯಿಂದ ಇವತ್ತು ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ಸಿಕ್ಕಿದೆ. ಈ ತಂತ್ರಜ್ಞಾನ ಟರ್ಕಿ ಹಾಗೂ ಜಪಾನ್ ನಲ್ಲಿದ್ದು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಳಸಲಾಗಿದೆ. ಈ ತಂತ್ರಜ್ಞಾನದಿಂದ ಆರೋಪಿಯ ಪತ್ತೆ ಹೇಗೆ ಸಾಧ್ಯ ಎಂದು ತಿಳಿಯುವ ಮುನ್ನ ಮನುಷ್ಯರ ಜನನೇಂದ್ರಿಯಗಳಲ್ಲಿ ಆಗುವ ಬದಲಾವಣೆಗಳು ಬಗ್ಗೆ ಒಮ್ಮೆ ಹೇಳ್ಬಿಡ್ತೀವಿ.
ಜನನೇಂದ್ರಿಯದ 'ಫಿಸಿಕಲ್ ಅಪಿಯರೆನ್ಸ್' ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ
ಸಾಮಾನ್ಯವಾಗಿ ಯಾವುದೇ ಒಬ್ಬ ಪುರುಷ ಲೈಂಗಿಕವಾಗಿ ಉದ್ರೇಕಗೊಂಡಾಗ ಜನನೇಂದ್ರಿಯ ಉಬ್ಬಿಕೊಳ್ಳುತ್ತೆ. ರಕ್ತ ಸಂಚಾರ ಹೆಚ್ಚಾಗಿ, ಜನನೇಂದ್ರಿಯದಲ್ಲಿ ತುಂಬಿಕೊಂಡು, ಚರ್ಮದ ಮೆಲ್ಮೈನಲ್ಲಿ ಕೆಲ ಬದಲಾವಣೆಗಳು ಕೂಡ ಆಗ್ತಾವೆ. ಜನನೇಂದ್ರಿಯ ಮೇಲ್ಮೈ ಮೇಲೆ ಅದು ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಕಾಣದಿರುವ ರಕ್ತನಾಳಗಳು ಉಬ್ಬಿಕೊಂಡು ಮೇಲ್ನೋಟಕ್ಕೆ ಗೋಚರಿಸುತ್ತವೆ.. ಇದರ ಜೊತೆಗೆ ಆ ಭಾಗದ ಚರ್ಮದ ವಿನ್ಯಾಸ, ಚರ್ಮದ ಹಿಗ್ಗುವಿಕೆಯಿಂದ ಜನನೇಂದ್ರಿಯ ಒಂದು ನಿರ್ದಿಷ್ಟ ಆಕಾರಕ್ಕೆ ಬಂದು ಹಿಗ್ಗುತ್ತೆ. ಇಂಟ್ರಸ್ಟಿಂಗ್ ಸಂಗತಿ ಏನಂದ್ರೆ ಜನನೇಂದ್ರಿಯ ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಕಾಣದಿರುವ ಮಚ್ಚೆ, ಗುಳ್ಳೆಗಳು ಈ ಟೈಮ್ನಲ್ಲಿ ಗೋಚರವಾಗುತ್ತೆ. ಹೀಗಾಗಿ ಲೈಂಗಿಕ ಕ್ರಿಯೆಯ ಹೊತ್ತಲ್ಲಿ ಬದಲಾಗುವ ಜನನೇಂದ್ರಿಯದ ಆಕಾರ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ. ಒಂದು ರೀತಿ ಹೇಳೋದಾದ್ರೆ ಫಿಂಗರ್ ಪ್ರಿಂಟ್ ಇದ್ದಂಗೆ.. ಫಿಂಗರ್ ಪ್ರಿಂಟ್ ಮೂಲಕ ಹೇಗೆ ಆರೋಪಿಗಳನ್ನ ಪತ್ತೆ ಮಾಡಲಾಗುತ್ತೋ... ಹಾಗೆ ಜನನೇಂದ್ರಿಯದ ಮೇಲೆ ಆಗೋ ಬದಲಾವಣೆಗಳಿಂದ ಇದು ಇಂಥವರದ್ದೆ ಅಂತ ಗುರುತು ಹಿಡಿಯಲಾಗುತ್ತೆ.
ಪ್ರಜ್ವಲ್ ತಗಲಾಕೊಂಡಿದ್ದೇಗೆ?
ವಿಡಿಯೋದಲ್ಲಿರೋ ವ್ಯಕ್ತಿ ಪತ್ತೆಗೆ ಹೊಸ ತಂತ್ರಜ್ಞಾನದ ಮೊರೆ
ಟರ್ಕಿಯಲ್ಲಿ ಬಳಕೆಯಲ್ಲಿದ್ದ ಟೆಕ್ನಾಲಜಿ ಬಳಸಿರುವ ಪೊಲೀಸರು
ಅನಾಟೋಮಿಕಲ್ ಕಂಪ್ಯಾರಿಷನ್ ಆಫ್ ಜನಿಟಲ್ ಫೀಚರ್ಸ್
ಮೊದಲ ಬಾರಿಗೆ ಈ ತಂತ್ರಜ್ಞಾನವನ್ನ ಭಾರತದಲ್ಲೂ ಬಳಕೆ
ಈ ತಂತ್ರಜ್ಞಾನವನ್ನ ಬಳಸಿಕೊಂಡು ಪ್ರಜ್ವಲ್ ಅನ್ನೋದು ದೃಢ
ವಿಡಿಯೋದಲ್ಲಿ ಸ್ಕ್ರೀನ್ ಶಾಟ್ ತೆಗೆದು ಹೈ ರೆಸೆಲ್ಯೂಷನ್ ಕನ್ವರ್ಷನ್
ವ್ಯಕ್ತಿಯ ಖಾಸಗಿ ಅಂಗ, ಸೊಂಟ, ಕೈನ ಫೋಟೋ ತಗೊಳ್ಳಲಾಗುತ್ತೆ
ಚರ್ಮ ವೈದ್ಯರು, ಮೂತ್ರ ಶಾಸ್ತ್ರಜ್ಞರು, ಪರಿಶೀಲನೆ ಮಾಡುತ್ತಾರೆ
ವಿಡಿಯೋ ಫೋಟೋ ಹಾಗೂ ತೆಗೆದುಕೊಂಡ ಫೋಟೋ ಪರಿಶೀಲನೆ
ಎರಡನ್ನೂ ಪರಿಶೀಲಿಸಿ ಹೋಲಿಕೆ ಮಾಡಿ ಗುರುತು ಪತ್ತೆ ಹಚ್ಚಲಾಗುತ್ತೆ
ವಿಡಿಯೋದಲ್ಲಿರೋ ವ್ಯಕ್ತಿ ಪತ್ತೆಗೆ ಹೊಸ ತಂತ್ರಜ್ಞಾನದ ಮೊರೆ ಹೊಗಿರೋ ಪೊಲೀಸರು ಟರ್ಕಿಯಲ್ಲಿ ಬಳಕೆಯಾಗಿದ್ದ ಟೆಕ್ನಾಲಜಿ ಬಳಸಿದ್ದಾರೆ. ಮೊದಲ ಬಾರಿಗೆ ಈ ತಂತ್ರಜ್ಞಾನವನ್ನ ಭಾರತದಲ್ಲಿ ಬಳಸಿದ್ದು, ಅನಾಟೋಮಿಕಲ್ ಕಂಪ್ಯಾರಿಷನ್ ಆಫ್ ಜನಿಟಲ್ ಫೀಚರ್ಸ್ ಮೂಲಕ ಪ್ರಜ್ವಲ್ ಅನ್ನೋದನ್ನ ದೃಢಪಡಿಸಲಾಗಿದೆ. ತಂತ್ರಜ್ಞಾನದ ಬಳಕೆ ಹೇಗೆ ಅಂದ್ರೆ, ವಿಡಿಯೋದಲ್ಲಿ ಸ್ಕ್ರೀನ್ ಶಾಟ್ ತೆಗೆದು ಹೈ ರೆಸೆಲ್ಯೂಷನ್ ಕನ್ವರ್ಷನ್ ಮಾಡಲಾಗುತ್ತೆ. ಬಳಿಕ ವ್ಯಕ್ತಿಯ ಖಾಸಗಿ ಅಂಗ ಸೊಂಟ, ಕೈ ಫೋಟೊ ತೆಗೆದುಕೊಳ್ಳಲಾಗುತ್ತೆ. ಇದನ್ನ ಚರ್ಮ ವೈದ್ಯರು ಮತ್ತು ಯೂರೋಲಾಜಿಸ್ಟ್ ಪರಿಶೀಲನೆ ನಡೆಸ್ತಾರೆ.. ಈ ಎರಡನ್ನೂ ಪರಿಶೀಲನೆ ಮಾಡಿ ಗುರುತು ಪತ್ತೆ ಹಚ್ಚಲಾಗುತ್ತೆ.
ಇಂಟರೆಸ್ಟಿಂಗ್ ಸಂಗತಿ ಏನಂದ್ರೆ ಈ ಟೆಕ್ನಾಲಜಿಯಲ್ಲಿ ವಿಡಿಯೋದಲ್ಲಿರುವ ಆರೋಪಿಯ ಒಂದೇ ಒಂದು ಅಂಗ ಕಂಡ್ರೂ ಅದು ಆರೋಪಿಯ ಪತ್ತೆಗೆ ಸಹಕಾರಿಯಾಗುತ್ತೆ. ಹಾಗಂತ ಇದೊಂದರಿಂದ್ಲೇ ಪ್ರಜ್ವಲ್ ರೇವಣ್ಣ ಅಪರಾಧಿಯಂತ ಸಾಬೀತಾಗಿಲ್ಲ. ಆಯಾ ಕೇಸ್ ಗಳಿಗೆ ತಕ್ಕ ಹಾಗೆ ತನಿಖಾಧಿಕಾರಿಗಳು ಹಲವಾರು ರೀತಿಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಾರೆ. ಪ್ರಜ್ವಲ್ ರೇವಣ್ಣನವರ ವಿಚಾರದಲ್ಲಿ, ವಿಡಿಯೋದಲ್ಲಿ ಇರುವುದು ಅವರೇ ಎಂಬುದನ್ನು ಸಾಬೀತುಪಡಿಸಿದ್ದರ ಜೊತೆಗೆ, ಹಲವಾರು ಸಾಂದರ್ಭಿಕ ಸಾಕ್ಷಿಗಳನ್ನು ಎಸ್ಐಟಿ ಕಲೆ ಹಾಕಿತ್ತು ಇಂಥಾ ಎಲ್ಲ ಸಾಕ್ಷಿಗಳಿಂದ ಪ್ರಜ್ವಲ್ ರೇವಣ್ಣನ ಮೇಲಿದ್ದ ಆರೋಪ ಸಾಬೀತಾಗಿದೆ.
ಭಾರತದಲ್ಲಿ ಮೊದಲ ಬಾರಿ ಬಳಕೆ
ನಾವು ಮೊದಲೇ ಹೇಳಿದಂತೆ ಈ ತಂತ್ರಜ್ಞಾನವನ್ನ ಜಪಾನ್ ಮತ್ತು ಟರ್ಕಿಯಲ್ಲಿ ಬಳಕೆ ಮಾಡಲಾಗ್ತಿತ್ತು. ಅಂತರಾಷ್ಟ್ರಿಯ ಮಟ್ಟದಲ್ಲಿನ ಚೈಲ್ಡ್ ಪೋರ್ನೋಗ್ರಾಫಿಯ ಆರೋಪಿಗಳನ್ನ ಪತ್ತೆ ಮಾಡೋದಕ್ಕೆ ಇದನ್ನ ಬಳಕೆ ಮಾಡಲಾಗಿತ್ತು. ಟರ್ಕಿಯಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. ಈ ಗ ಭಾರತದಲ್ಲೂ ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಈ ಟೆಕ್ನಾಲಜಿ ಬಳಸಿದ್ದು, ಭಾರತದಲ್ಲಿ ಆ ತಂತ್ರಜ್ಞಾನ ಬಳಕೆಯಾಗಿರುವುದು ಇದೇ ಮೊದಲು...
ಆರೋಪಿ.. ಅಪರಾಧಿಯಂತೂ ಸಾಬೀತಾಗಿದೆ.. ಅಮಾಯಕರನ್ನ ರಾಕ್ಷಸನಂತೆ ಕಾಡಿ ದೌರ್ಜನ್ಯವೆಸಗಿದ್ದ ಪ್ರಜ್ವಲ್ ಈಗ ಪರಪ್ಪನ ಅಗ್ರಹಾರ ಸೇರಿದ್ದಾನೆ. ಶನಿವಾರ ರಾತ್ರಿಯಿಂದಲೇ ಪ್ರಜ್ವಲ್ ಜೈಲ್ ಡೈರಿ ಶುರುವಾಗಿದೆ.