ನಾಳೆ ಸಾರಿಗೆ ಮುಷ್ಕರ ಮಾಡಲಿಲ್ಲ ಅಂದ್ರೆ 21 ದಿನ ಮಾಡಂಗಿಲ್ಲ; ಹೈಕೋರ್ಟ್​ ವಕೀಲ ನಟರಾಜ್ ಶರ್ಮಾ ಏನು ಹೇಳ್ತಾರೆ?

ನೌಕರರಿಗೆ ನೋಟಿಸ್​ ಕೊಟ್ಟಾಗ, 21 ದಿನ ಅವಕಾಶ ಇದೆ. ಈ 21 ದಿನಗಳಲ್ಲಿ ಮಿಡಿಯೇಷನ್​​ಗಳನ್ನು ನೌಕರರ ಕಮಿಷನ್ ನಡೆಸಬೇಕಾಗುತ್ತದೆ. ನ್ಯಾಯಾಲಯ ಆದೇಶ ಕೊಟ್ಟಿದ್ದರಿಂದ ನೌಕರರ ನೋಟಿಸ್​ ಮಹತ್ವ ಕಳೆದುಕೊಳ್ಳುತ್ತದೆ.

author-image
Bhimappa
Advertisment

ಬೆಂಗಳೂರು: ಸೆಕ್ಷನ್​ 22, 23 ಇಂಡಸ್ಟ್ರಿಯಲ್ ಆ್ಯಕ್ಟ್​ ಪ್ರಕಾರ, ಒಮ್ಮೆ ಯಾವುದೇ ಒಂದು ಕಾರ್ಮಿಕ ವ್ಯಾಜ್ಯಗಳ ಅಡಿಯಲ್ಲಿ ಸಂಘಟನೆಗಳು ತಮ್ಮ ನೌಕರರಿಗೆ ನೋಟಿಸ್​ ಅನ್ನು ಕೊಟ್ಟಾಗ, 21 ದಿನ ಅವಕಾಶ ಇದೆ. ಈ 21 ದಿನಗಳಲ್ಲಿ ಮಿಡಿಯೇಷನ್​​ಗಳನ್ನು ನೌಕರರ ಕಮಿಷನ್ ನಡೆಸಬೇಕಾಗುತ್ತದೆ. ನ್ಯಾಯಾಲಯ ಆದೇಶ ಕೊಟ್ಟಿದ್ದರಿಂದ ನೌಕರರ ನೋಟಿಸ್​ ಮಹತ್ವ ಕಳೆದುಕೊಳ್ಳುತ್ತದೆ. ನಾಳಿದ್ದು ಮುಷ್ಕರ ಮಾಡಬೇಕು ಎಂದರೆ ಮೊದಲಿನಿಂದ ಮತ್ತೆ ನೋಟಿಸ್ ಕೊಡಬೇಕು. 

ಸೆಕ್ಷನ್​ 24 ರ ಪ್ರಕಾರ ಅದು ಕಾನೂನುಬಾಹಿರ ಮುಷ್ಕರ ಎಂದು ಆಗುತ್ತದೆ. ಇನ್ನೊಂದು ಲೇಬರ್ ಕಮಿಷನ್ ಮುಂದೆ ಮಿಡಿಯೇಷನ್ ಪೆಂಡಿಂಗ್ ಇದೆ. ಇದು ಕೂಡ ಉಲ್ಲಂಘನೆ ಆದಂತೆ ಆಗುತ್ತದೆ. 3ನೇದಾಗಿ 2020-21ರಲ್ಲಿ ಹಲವು ಚಾಲಕರು ಉದ್ಯೋಗ ಕಳೆದುಕೊಂಡಿದ್ದರು. ಇದಕ್ಕೆ ಕಾರಣ ಮಿಡಿಯೇಷನ್ ಇತ್ತು. ಕೊಟ್ಟ ನೋಟಿಸ್​ ಅನ್ನು ಉಲ್ಲಂಘನೆ ಮಾಡಲಾಗಿತ್ತು. ಹೀಗಾಗಿ ಆವತ್ತು 2889 ಚಾಲಕರು ಹುದ್ದೆ ಕಳೆದುಕೊಂಡಿದ್ದರು. ಈ ರೀತಿ ಆಗಬಾರದು ಎಂದರೆ 21 ದಿನ ಕಾಯಬೇಕು ಎಂದು ಹೈಕೋರ್ಟ್​ ವಕೀಲ ನಟರಾಜ್ ಶರ್ಮಾ ಅವರು ಹೇಳಿದ್ದಾರೆ. 

Transport strike
Advertisment