KC ವೀರೇಂದ್ರ ಪಪ್ಪಿ ಬೆಟ್ಟಿಂಗ್ ದಂಧೆ; 12 ಕೋಟಿ ಹಣ, 6 ಕೋಟಿ ಚಿನ್ನ, 10 ಕೆಜಿ ಬೆಳ್ಳಿ ಸೇರಿ ಇನ್ನೇನು ಜಪ್ತಿ ಆಗಿದೆ?

ಮನೆ, ಕ್ಯಾಸಿನೊಗಳಲ್ಲಿ ನಡೆಸಿದ ದಾಳಿಯಲ್ಲಿ 12 ಕೋಟಿ ರೂಪಾಯಿ ನಗದು ಸಿಕ್ಕಿದೆ. ಇದರಲ್ಲಿ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದೆ. 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಸೇರಿದಂತೆ ಎಲ್ಲವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

author-image
Bhimappa
Advertisment

ಚಿತ್ರದುರ್ಗದ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಬೆಟ್ಟಿಂಗ್ ದಂಧೆಯ ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಶಾಸಕ ವಿರೇಂದ್ರ ಪಪ್ಪಿ ಹಾಗೂ ಅವರ ಸಂಬಂಧಿಕರ ಮನೆ, ಕ್ಯಾಸಿನೊಗಳಲ್ಲಿ ನಡೆಸಿದ ದಾಳಿಯಲ್ಲಿ 12 ಕೋಟಿ ರೂಪಾಯಿ ನಗದು ಸಿಕ್ಕಿದೆ. ಇದರಲ್ಲಿ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದೆ. 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಸೇರಿದಂತೆ ಎಲ್ಲವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಪಿಎಂಎಲ್‌ಎ ಕಾಯಿದೆ 2002 ಅಡಿ 4 ವಾಹನ, ವೀರೇಂದ್ರ ಪಪ್ಪಿ ಹಾಗೂ ಸೋದರರಿಗೆ ಸೇರಿದ 17 ಬ್ಯಾಂಕ್ ಖಾತೆ, 2 ಬ್ಯಾಂಕ್ ಲಾಕರ್​ಗಳನ್ನು ಸೀಜ್ ಮಾಡಲಾಗಿದೆ. ಸೋದರ ಕೆ.ಸಿ ನಾಗರಾಜ್ ಸೋದರನ ಮಗ ಪೃಥ್ವಿ ದುಬೈನಲ್ಲಿ ಆನ್​ಲೈನ್ ಗೇಮಿಂಗ್ ಬ್ಯುಸಿನೆಸ್ ಅನ್ನು ನಿರ್ವಹಿಸುತ್ತಿದ್ದರು ಎಂದು ಇಡಿ ಹೇಳಿದೆ. ಸಿಕ್ಕಿಂನ ಗ್ಯಾಂಗ್ಟಕ್​ನಲ್ಲಿ ಕ್ಯಾಸಿನೊಗಾಗಿ ಜಾಗ ಲೀಸ್​ಗೆ ಪಡೆಯಲು ವೀರೇಂದ್ರ ಪಪ್ಪಿ ಸಿಕ್ಕಿಂಗೆ ಹೋಗಿದ್ದರು ಎಂದು ಇಡಿ ಹೇಳಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ED RAID AT MLA VEERENDRA PAPPY HOUSE
Advertisment