/newsfirstlive-kannada/media/media_files/2025/08/18/chikkamagalore-rain-1-2025-08-18-07-35-29.jpg)
ಕರಾವಳಿ ಜಿಲ್ಲೆಗಳಿಗೆ ಆಗಸ್ಟ್ 24 ರವರೆಗೂ ಭಾರಿ ಮಳೆಯ ಮುನ್ಸೂಚನೆ
ಕರ್ನಾಟಕದ ವಿವಿಧ ಜಿಲ್ಲೆಗಳಿಗೂ ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶವು ಮಳೆಯ ಮುನ್ಸೂಚನೆಯನ್ನು ನೀಡಿದೆ.
ಇದರ ಪ್ರಕಾರ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 18 ರಿಂದ ಆಗಸ್ಟ್ 24 ರವರೆಗೆ ಭಾರಿ ಮಳೆಯಾಗಲಿದೆ. ಆಗಸ್ಟ್ 18 ರಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಆಲರ್ಟ್ ನೀಡಿದ್ದರೇ, ಆಗಸ್ಟ್ 19 ಮತ್ತು ಆಗಸ್ಟ್ 20 ರಂದು ಆರೇಂಜ್ ಆಲರ್ಟ್ ನೀಡಲಾಗಿದೆ. ಇನ್ನೂ ಆಗಸ್ಟ್ 21 ರಿಂದ 24 ರವರೆಗೆ ಯೆಲ್ಲೋ ಆಲರ್ಟ್ ನೀಡಲಾಗಿದೆ.
ಇನ್ನೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆಗಸ್ಟ್ 18 ಮತ್ತು ಆಗಸ್ಟ್ 19 ರಂದು ಆರೇಂಜ್ ಆಲರ್ಟ್ ನೀಡಲಾಗಿದೆ. ಆಗಸ್ಟ್ 20 ರಂದು ಯೆಲ್ಲೋ ಆಲರ್ಟ್ ನೀಡಲಾಗಿದೆ.
ಇನ್ನೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಇಂದು (ಆಗಸ್ಟ್ 18) ರೆಡ್ ಆಲರ್ಟ್ ನೀಡಲಾಗಿದೆ. ಆಗಸ್ಟ್ 19 ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೇಂಜ್ ಆಲರ್ಟ್ ನೀಡಲಾಗಿದೆ. ಆಗಸ್ಟ್ 20 ರಂದು ಯೆಲ್ಲೋ ಆಲರ್ಟ್ ನೀಡಲಾಗಿದೆ.
ಮುಂದಿನ 7 ದಿನಗಳ #ಮಳೆ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)
— Karnataka State Natural Disaster Monitoring Centre (@KarnatakaSNDMC) August 18, 2025
ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಆಗಸ್ಟ್ 20 ರವರೆಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರದಿಂದ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆ, ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ, ಇಂದು ಅಲ್ಲಲ್ಲಿ ಅತ್ಯಅಧಿಕ ಮಳೆ. pic.twitter.com/wsozXhqPnl
ರೆಡ್ ಆಲರ್ಟ್ ಅಂದರೇ, ಕೇವಲ 24 ಗಂಟೆ ಅವಧಿಯಲ್ಲಿ 204 ಮಿಲಿಮೀಟರ್ ಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ. ರೆಡ್ ಆಲರ್ಟ್ ಅಂದರೇ, ಗಂಭೀರ ಆಲರ್ಟ್. ಜನರು ರೆಡ್ ಆಲರ್ಟ್ ಇದ್ದಾಗ, ಪ್ರಯಾಣ ಮಾಡುವುದು ಸೂಕ್ತವಲ್ಲ. ಜೊತೆಗೆ ಮನೆಯಿಂದ ಕೂಡ ಹೊರಬರಬಾರದು. ಯಾವುದೇ ಮರ, ವಿದ್ಯುತ್ ಕಂಬಗಳ ಕೆಳಗೆ ನಿಲ್ಲಬಾರದು.
ಆರೇಂಜ್ ಆಲರ್ಟ್ ಅಂದರೇ, ಕೇವಲ 24 ಗಂಟೆ ಅವಧಿಯಲ್ಲಿ 115 ಮಿಲಿಮೀಟರ್ ನಿಂದ 204 ಮಿಲಿಮೀಟರ್ ವರೆಗೂ ಮಳೆಯಾಗುವ ಮುನ್ಸೂಚನೆ.
ಇನ್ನೂ ಯೆಲ್ಲೋ ಆಲರ್ಟ್ ಅಂದರೇ, 24 ಗಂಟೆ ಅವಧಿಯಲ್ಲಿ 64 ಮಿಲಿಮೀಟರ್ ನಿಂದ 115 ಮಿಲಿಮೀಟರ್ ವರೆಗೂ ಮಳೆಯಾಗುವ ಮುನ್ಸೂಚನೆ. ಮಧ್ಯಮ ಪ್ರಮಾಣದ ಮಳೆ ಬೀಳುವ ಮುನ್ಸೂಚನೆ ಇದ್ದಾಗ ಯೆಲ್ಲೋ ಆಲರ್ಟ್ ನೀಡಲಾಗುತ್ತೆ.
ಇನ್ನೂ ಕೆಲವೊಮ್ಮೆ ಗ್ರೀನ್ ಆಲರ್ಟ್ ಕೂಡ ನೀಡಲಾಗುತ್ತೆ. ಗ್ರೀನ್ ಆಲರ್ಟ್ ಅಂದರೇ, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆ. ಇದು ಹಗುರ ಮಳೆಯಾಗುವ ಮುನ್ಸೂಚನೆ. ಗ್ರೀನ್ ಆಲರ್ಟ್ ಇದ್ದಾಗ ಹೆಚ್ಚಿನ ಮಳೆಯಾಗಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ.
ಈ ಬಣ್ಣ ಸಂಕೇತಗಳ ಅರ್ಥವೇನು?
ಹಸಿರು - ಯಾವುದೇ ಸಲಹೆ ಇಲ್ಲ : ಹಸಿರು ಎಚ್ಚರಿಕೆ ಎಂದರೆ ಹವಾಮಾನ ವೈಪರೀತ್ಯ ಸಂಭವಿಸಬಹುದಾದರೂ, ಯಾವುದೇ ರೀತಿಯ ಸಲಹೆಯನ್ನು ನೀಡುವ ಅಗತ್ಯವಿಲ್ಲ.
ಹಳದಿ - ಎಚ್ಚರದಿಂದಿರಿ : ಹಳದಿ ಎಚ್ಚರಿಕೆಯು ಕೆಟ್ಟ ಹವಾಮಾನ ಪರಿಸ್ಥಿತಿಗಳನ್ನು ಸೂಚಿಸುತ್ತದೆ ಮತ್ತು ಪರಿಸ್ಥಿತಿಗಳು ಇನ್ನಷ್ಟು ಹದಗೆಡುವ ಸಾಧ್ಯತೆ ಹೆಚ್ಚಿದ್ದು, ಇದು ದೈನಂದಿನ ಜೀವನಕ್ಕೆ ಅಡ್ಡಿ ಉಂಟುಮಾಡಬಹುದು.
ಕಿತ್ತಳೆ - ಸಿದ್ಧರಾಗಿರಿ : ಸಾರಿಗೆ, ರೈಲು, ರಸ್ತೆ ಮತ್ತು ವಾಯುಯಾನದಲ್ಲಿ ವ್ಯತ್ಯಯ ಉಂಟಾಗಬಹುದಾದ ಅತ್ಯಂತ ಕೆಟ್ಟ ಹವಾಮಾನವನ್ನು ನಿರೀಕ್ಷಿಸಿದಾಗ ಕಿತ್ತಳೆ ಬಣ್ಣದ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯವಾಗುವ ನಿರೀಕ್ಷೆಯಿದೆ.
ಕೆಂಪು - ಕ್ರಮ ಕೈಗೊಳ್ಳಿ : ಅತ್ಯಂತ ಕೆಟ್ಟ ಹವಾಮಾನ ಪರಿಸ್ಥಿತಿಯು ಸಾರಿಗೆ ಮತ್ತು ವಿದ್ಯುತ್ ಸರಬರಾಜಿನಲ್ಲಿ ಅಡ್ಡಿಯಾಗುವ ನಿರೀಕ್ಷೆಯಿರುವಾಗ ನೀಡಲಾಗುವ ಎಚ್ಚರಿಕೆಯೇ ರೆಡ್ ಅಲರ್ಟ್. ಇದು ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ